Thursday, November 21, 2024
Homeಬೆಂಗಳೂರುಹೊಸ ವರ್ಷದ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೈ, ಮೂವರು ಡ್ರಗ್‌ಪೆಡ್ಲರ್‌ಗಳ ಬಂಧನ

ಹೊಸ ವರ್ಷದ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೈ, ಮೂವರು ಡ್ರಗ್‌ಪೆಡ್ಲರ್‌ಗಳ ಬಂಧನ

ಬೆಂಗಳೂರು,ಡಿ.28- ಮಾದಕ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡು ಹೊಸ ವರ್ಷ ಆಚರಣೆಯ ಪಾರ್ಟಿಗಳಿಗೆ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೋಲಿಸರು ದಾಳಿ ಮಾಡಿ ಕೇರಳ ಮೂಲದ ಮೂವರು ಡ್ರಗ್‍ಪೆಡ್ಲರ್‍ಗಳನ್ನು ಬಂಧಿಸಿ 28 ಲಕ್ಷ ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ನಗರದ ಕೆಂಗೇರಿ ಮತ್ತು ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿಷೇಧಿತ ಮಾದಕವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಂಡು ಮಾರಾಟ ಮಾಡಲು ಸಿದ್ದತೆ ಮಾಡಿಕೊಂಡಿರುತ್ತಾರೆಂಬ ಬಗ್ಗೆ ನಿಖರ ಮಾಹಿತಿ ಪಡೆದ ಸಿಸಿಬಿ ಮಾದಕವಸ್ತು ನಿಗ್ರಹ ಅಧಿಕಾರಿ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿ ಮೂವರು ಕೇರಳ ಮೂಲದ ಡ್ರಗ್‍ಪೆಡ್ಲರ್‍ಗಳನ್ನು ವಶಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.

ಮಾನವೀಯ ಮೌಲ್ಯದ ಮೇರು ಸಂತ, ಧರ್ಮಪ್ರಭು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

ಬಂಧಿತರಿಂದ 170 ಗ್ರಾಂ. ಎಂಡಿಎಎ ಕ್ರಿಸ್ಟಲ್, 25ಎಂಡಿಎಎ ಎಕ್ಸಟಸಿ ಪಿಲ್ಸ್, 200 ಎಲ್‍ಎಸ್‍ಡಿ ಸ್ಟೀಪ್ಸ್, 3ಕೆ.ಜಿ 100 ಗ್ರಾಂ ಗಾಂಜಾ , 2 ಮೊಬೈಲ್, ತೂಕದ ಯಂತ್ರ ಹಾಗೂ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಇವುಗಳ ಒಟ್ಟು ಮೌಲ್ಯ 28 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ವಶಕ್ಕೆ ಪಡೆದ ಡ್ರಗ್‍ಪೆಡ್ಲರ್‍ಗಳ ವಿರುದ್ದ ಕೆಂಗೇರಿ ಮತ್ತು ಅಮೃತಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಕೇರಳ ಮೂಲದ ಈ ಮೂವರು ಡ್ರಗ್‍ಪೆಡ್ಲರ್‍ಗಳು ಆಂದ್ರ, ಒಡಿಸ್ಸಾ ಮತ್ತು ಕೇರಳ ಮೂಲದ ಡ್ರಗ್‍ಪೆಡ್ಲರ್‍ಗಳಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿಸಿ, ಅವುಗಳನ್ನು ಪರಿಚಯಸ್ಥ ಗಿರಾಕಿಗಳಿಗೆ ಸರಬರಾಜು ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದರೆಂದು ವಿಚಾರಣೆಯಿಂದ ತಿಳಿದುಬಂದಿದೆ.

RELATED ARTICLES

Latest News