Thursday, May 2, 2024
Homeರಾಷ್ಟ್ರೀಯಟಿಎಂಸಿ ಸಂಸದೆ ಮಹುವಾ ಮೊಯಿತ್ರ ಸದಸ್ಯತ್ವ ಅನರ್ಹಗೊಳ್ಳುವ ಸಾಧ್ಯತೆ

ಟಿಎಂಸಿ ಸಂಸದೆ ಮಹುವಾ ಮೊಯಿತ್ರ ಸದಸ್ಯತ್ವ ಅನರ್ಹಗೊಳ್ಳುವ ಸಾಧ್ಯತೆ

ನವದೆಹಲಿ,ನ.6- ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಉದ್ಯಮಿಯಿಂದ ನಗದು ಮತ್ತು ಬೆಲೆ ಬಾಳುವ ಉಡುಗೊರೆ ಪಡೆದ ಆರೋಪಕ್ಕೆ ಸಿಲುಕಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರ ಅವರ ಸದಸ್ಯತ್ವ ಅನರ್ಹಗೊಳ್ಳುವ ಸಾಧ್ಯತೆ ಇದೆ.

ಪ್ರಸಕ್ತ ಲೋಕಸಭೆ ಅವ ಮುಗಿಯುವವರೆಗೂ ಮೊಯಿತ್ರ ಅವರ ಸದಸ್ಯತ್ವವನ್ನು ಅನರ್ಹಗೊಳಿಸಲು ಲೋಕಸಭೆಯ ನೈತಿಕ ಸಮಿತಿ ನಿರ್ಧರಿಸಿದೆ. ಈ ಸಂಬಂಧ ನಾಳೆ ನೈತಿಕ ಸಮಿತಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ವಿನೋದ್‍ಕುಮಾರ್ ಸೋಂಕ್ ನೇತೃತ್ವದ ಲೋಕಸಭೆಯ ನೈತಿಕ ಸಮಿತಿಯು ನಾಳೆ ಸಭೆ ಸೇರಲಿದ್ದು, ತೃಣಮೂಲ ಸಂಸದ ಮಹುವಾ ಮೊಯಿತ್ರಾ ವಿರುದ್ಧದ ಆರೋಪಗಳ ವಿಚಾರಣೆಗಾಗಿ ನಗದು ಕರಡು ವರದಿಯನ್ನು ಪರಿಗಣಿಸಲು ತೀರ್ಮಾನಿಸಿದೆ.

16 ಮಿಲಿಯನ್ ಟನ್ ಸರಕು ಸಾಗಿಸಿದ ಅದಾನಿ ಒಡೆತನದ ಮುಂದ್ರಾ ಬಂದರು

ಪ್ರಸ್ತುತ ಲೋಕಸಭೆಯ ಉಳಿದ ಅವಗೆ ಅನರ್ಹತೆ ಸೇರಿದಂತೆ ಮೊಯಿತ್ರಾ ವಿರುದ್ಧ ಕಠಿಣ ಕ್ರಮಕ್ಕೆ ಸಮಿತಿಯು ಶಿಫಾರಸು ಮಾಡಬಹುದು ಎಂದು ಮೂಲಗಳು ತಿಳಿಸಿವೆ. ಸಮಿತಿಯಲ್ಲಿ ಬಿಜೆಪಿಗೆ ಬಹುಮತ ಇರುವುದರಿಂದ ಮೊಯಿತ್ರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ವರದಿಯಲ್ಲಿ ಶಿಫಾರಸ್ಸು ಮಾಡಲಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ನಗದು, ಬೆಲೆ ಬಾಳುವ ಉಡುಗೊರೆ ಹಾಗೂ ವಿದೇಶಿ ಪ್ರವಾಸ ಕೈಗೊಂಡಿರುವುದಕ್ಕೆ ಸೂಕ್ತವಾದ ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಈ ಹಿನ್ನಲೆಯಲ್ಲಿ ಮೊಯಿತ್ರ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸುವ ಸಾಧ್ಯತೆಗಳೇ ಹೆಚ್ಚಾಗಿವೆ. ಈ ಹಿಂದೆ 2005ರಲ್ಲಿ ಪ್ರಶ್ನೆ ಕೇಳಲು ಹಣ ಪಡೆದಿದ್ದ 11 ಸಂಸದರ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿತ್ತು. 2007ರಲ್ಲಿ ಸುಪ್ರೀಂಕೋರ್ಟ್ ಅನರ್ಹತೆಯನ್ನು ಎತ್ತಿ ಹಿಡಿದಿತ್ತು.

ಇದನ್ನೇ ಆಧಾರವಾಗಿಟ್ಟುಕೊಂಡಿರುವ ನೈತಿಕ ಸಮಿತಿಯು ಪಶ್ಚಿಮ ಬಂಗಾಳದ ಕೃಷ್ಣಾನಗರದ ಟಿಎಂಸಿ ಸಂಸದರಾಗಿರುವ ಮೊಯಿತ್ರ ಅವರನ್ನು ಅನರ್ಹಗೊಳಿಸಲು ಮುಂದಾಗಿದೆ. ಈ ಹಿಂದೆ ನೈತಿಕ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾಗಿದ್ದ ಮೊಯಿತ್ರ ತಮಗೆ ಅಧ್ಯಕ್ಷರು ಅತ್ಯಂತ ಕೊಳಕು ಮತ್ತು ಅಸಂಬದ್ಧ ಪ್ರಶ್ನೆಗಳನ್ನು ಕೇಳಿದ್ದರೆಂದು ರಂಪಾಟ ಎಬ್ಬಿಸಿದ್ದರು.

ಟಿಡಿಪಿ ಬದಲು ಬಿಜೆಪಿಗೆ ಪವನ್ ಕಲ್ಯಾಣ್ ಬೆಂಬಲ

ಮೊಯಿತ್ರ ಉದ್ಯಮಿ ದರ್ಶನ್ ಹಿರಾನಂದಿನಿಯಿಂದ ನಗದು ಮತ್ತು ಬೆಲೆ ಬಾಳುವ ಉಡುಗೊರೆಗಳನ್ನು ಪಡೆದಿದ್ದಾರೆ ಎಂದು ಬಿಜೆಪಿ ಶಾಸಕ ಅಶ್ವಿನ್ ದುಬೆ ಆರೋಪಿಸಿ ತನಿಖೆ ನಡೆಸಬೇಕೆಂದು ದಾಖಲೆಗಳ ಸಮೇತ ಲೋಕಸಭೆಯ ನೈತಿಕ ಸಮಿತಿಗೆ ದೂರು ಸಲ್ಲಿಸಿದ್ದರು.

RELATED ARTICLES

Latest News