Saturday, April 27, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-03-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-03-2024)

ನಿತ್ಯ ನೀತಿ : ಯಾವುದಾದರೂ ಕೆಲಸ ಆರಂಭಿಸುವ ಮೊದಲು ಅದು ಫಲ ನೀಡುತ್ತದೆಯೋ ಇಲ್ಲವೋ ಎಂದು ಯೋಚಿಸದೆ ಕೆಲಸ ಮಾಡಿ. ನಿಯತ್ತಾಗಿ ದುಡಿಯುವವರಿಗೆ ಫಲ ಸಿಕ್ಕೇ ಸಿಗುತ್ತದೆ.

ಪಂಚಾಂಗ ಶನಿವಾರ 09-03-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಧನಿಷ್ಠಾ / ಯೋಗ: ಸಿದ್ಧ / ಕರಣ: ವಿಷ್ಠಿ

ಸೂರ್ಯೋದಯ ; ಬೆ.06.31
ಸೂರ್ಯಾಸ್ತ : 06.30
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30

ರಾಶಿ ಭವಿಷ್ಯ
ಮೇಷ
: ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿ ವರ್ಗಕ್ಕೆ ಹತ್ತಿರವಾಗಿರುವುದರಿಂದ ಬಡ್ತಿ ಮತ್ತು ವೇತನ ಹೆಚ್ಚಳದ ರೂಪದಲ್ಲಿ ಲಾಭ ದೊರೆಯಲಿದೆ.
ವೃಷಭ: ಸಂಕಷ್ಟಗಳಿಂದ ಮುಕ್ತಿ ದೊರೆಯಲಿದೆ. ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ.
ಮಿಥುನ: ಇನ್ನೊಬ್ಬರ ಮಾತುಗಳನ್ನು ಆಲಿಸಿ ತೀರ್ಮಾನಕ್ಕೆ ಬರುವುದು ಅನಿರ್ವಾಯವಾಗಲಿದೆ.

ಕಟಕ: ರಫ್ತು ಮಾರಾಟದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಎದುರಾದರೂ ಆದಾಯಕ್ಕೆ ತೊಂದರೆಯಿಲ್ಲ.
ಸಿಂಹ: ನಿಮ್ಮ ವ್ಯವಹಾರಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಅಭಿವೃದ್ಧಿ ಸಾಧಿಸುವಿರಿ.
ಕನ್ಯಾ: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರೆಯಲಿದೆ. ಅಕ್ಕಪಕ್ಕದವರೊಂದಿಗೆ ಸಂಯಮದಿಂದ ನಡೆದುಕೊಳ್ಳುವುದು ಒಳಿತು.

ತುಲಾ: ವೈರಾಗ್ಯ ಹೊಂದಿರುವ ನೀವು ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಪರಿಶ್ರಮದಿಂದ ದುಡಿದರೆ ಪ್ರಗತಿಯ ಹಾದಿ ಕಾಣುವಿರಿ.
ವೃಶ್ಚಿಕ: ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು. ಆರೋಗ್ಯದಲ್ಲಿ ಏರುಪೇರಾಗಲಿದೆ.
ಧನುಸ್ಸು: ಒಡಹುಟ್ಟಿದವರಲ್ಲಿ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳಿ. ದೂರ ಪ್ರಯಾಣ ಮಾಡುವುದು ಬೇಡ.

ಮಕರ: ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಕುಂಭ: ವ್ಯಾವಹಾರಿಕ ಜೀವನದ ಕೆಲವು ಮುಖ್ಯವಾದ ನಿರ್ಧಾರಗಳನ್ನು ಕೈಗೊಳ್ಳುವಿರಿ.
ಮೀನ: ನೀವು ಮಾಡುವ ಕೆಲಸ-ಕಾರ್ಯಗಳಲ್ಲಿ ಜನಪ್ರಿಯತೆ ಗಳಿಸುವಿರಿ. ಅನಿರೀಕ್ಷಿತ ಧನಲಾಭವಾಗಲಿದೆ.

RELATED ARTICLES

Latest News