Saturday, July 27, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-12-2023)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-12-2023)

ನಿತ್ಯ ನೀತಿ : ನಾವು ಒಬ್ಬರನ್ನು ಹಿಂಸಿಸಿದರೆ ಮತ್ತೊಬ್ಬರು ನಮ್ಮನ್ನು ಹಿಂಸಿಸುತ್ತಾರೆ. ಇದರಿಂದ ಜೀವಿಸುವುದು ದುರ್ಭರವಾಗುತ್ತದೆ. ಹಿಂಸೆಯು ಮಾನವನನ್ನು ನರಕ ಕೂಪಕ್ಕೆ ತಳ್ಳುತ್ತದೆ.

ಪಂಚಾಂಗ ಬುಧವಾರ 20-12-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ವ್ಯತೀಪಾತ / ಕರಣ: ಬಾಲವ

ಸೂರ್ಯೋದಯ : ಬೆ.06.36
ಸೂರ್ಯಾಸ್ತ : 05.58
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

ರಾಶಿ ಭವಿಷ್ಯ
ಮೇಷ
: ನಿಮ್ಮ ಉತ್ತಮ ಕೆಲಸಕ್ಕೆ ಎಲ್ಲೆಡೆ ಪ್ರಶಂಸೆ, ಶ್ಲಾಘನೆ ವ್ಯಕ್ತವಾಗಲಿದೆ. ಶುಭದಿನ.
ವೃಷಭ: ನಿಮ್ಮ ಮಾತೇ ಸರಿ ಎಂದು ಎಲ್ಲೂ ವಾದ ಮಾಡಲು ಹೋಗಬೇಡಿ. ಸಮಾಧಾನದಿಂದಿರಿ.
ಮಿಥುನ: ಸಮಾಧಾನದಿಂದ ಕಾರ್ಯ ನಿರ್ವಹಿಸಿ. ಗೆಲುವು ನಿಮಗೆ ಕಟ್ಟಿಟ್ಟ ಬುತ್ತಿ ಎಂಬುದು ಅರಿವಿರಲಿ.

ಕಟಕ: ಉದ್ವೇಗದಿಂದ ಮಾತನಾಡದಿರಿ. ಹೆಚ್ಚಿನ ತಾಳ್ಮೆಯಿಂದ ನಿಮ್ಮ ಗುರಿ ತಲುಪಲು ಸಹಕಾರಿಯಾಗಲಿದೆ.
ಸಿಂಹ: ಯಾರದ್ದೋ ಜಗಳಕ್ಕೆ ನಿಮಗೆ ತೊಂದರೆಯಾಗುವ ಸಾಧ್ಯತೆ. ಎಚ್ಚರಿಕೆ ವಹಿಸಿ.
ಕನ್ಯಾ: ಕೆಟ್ಟ ಜನರಿಂದ ಮಾನಸಿಕ ಆಘಾತಕ್ಕೆ ಒಳಗಾಗುವ ಸಾಧ್ಯತೆ ಇದೆ.

ತುಲಾ: ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
ವೃಶ್ಚಿಕ: ಭೂ ವ್ಯವವಾರದಲ್ಲಿ ತೊಡಗಿಸಿಕೊಂಡವರಿಗೆ ಸ್ವಲ್ಪ ನಷ್ಟ ಸಂಭವಿಸಲಿದೆ.
ಧನುಸ್ಸು: ಧಾರ್ಮಿಕ ಆಚರಣೆಗಳಿಂದ ನೆಮ್ಮದಿಸಿಗಲಿದೆ. ಮಾನಸಿಕ ಒತ್ತಡ ನಿವಾರಣೆಯಾಗಲಿದೆ.

ಮಕರ: ಆರೋಗ್ಯವು ಉತ್ತಮವಾಗಿರುತ್ತದೆ. ಆದರೂ ಆರೋಗ್ಯವಾಗಿಲ್ಲ ಎಂಬ ಭಾವನೆ ನಿಮ್ಮಲ್ಲಿರುತ್ತದೆ.
ಕುಂಭ: ಅನಾರೋಗ್ಯದಿಂದ ದೂರ ಪ್ರಯಾಣ ರದ್ದುಪಡಿಸಬೇಕಾಗಬಹುದು.
ಮೀನ: ಯಾವುದೇ ತಪ್ಪು ಕೆಲಸಗಳನ್ನು ಮಾಡುವುದನ್ನು ತಪ್ಪಿಸಿ.

RELATED ARTICLES

Latest News