Friday, May 17, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-02-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-02-2024)

ನಿತ್ಯ ನೀತಿ : ಧರ್ಮ ಒಂದೇ ನಿಜವಾದ ಮಿತ್ರ. ಸಾವಿನಲ್ಲಿಯೂ ಸಹ ಜತೆಯಲ್ಲಿರುತ್ತದೆ. ಉಳಿದ ಎಲ್ಲವೂ ಶರೀರದೊಡನೆಯೇ ನಾಶವಾಗುತ್ತವೆ.

ಪಂಚಾಂಗ ಮಂಗಳವಾರ 27-02-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಹಸ್ತ / ಯೋಗ: ಶೂಲ / ಕರಣ: ವಣಿಜ್

ಸೂರ್ಯೋದಯ : ಬೆ.06.37
ಸೂರ್ಯಾಸ್ತ : 06.28
ರಾಹುಕಾಲ ; 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30

ರಾಶಿ ಭವಿಷ್ಯ
ಮೇಷ
: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚಿನ ಪರಿಶ್ರಮ ವಹಿಸಬೇಕಾಗುತ್ತದೆ.
ವೃಷಭ: ಹೊಸ ಪ್ರದೇಶಕ್ಕೆ ಭೇಟಿ ನೀಡುವ ಅವಕಾಶವೊಂದು ದಿಢೀರನೆ ಒದಗಿಬರಲಿದೆ.
ಮಿಥುನ: ರಾಜಕೀಯ ಭವಿಷ್ಯದ ಬಗ್ಗೆ ಪ್ರಭಾವಿ ರಾಜಕಾರಣಿಯೊಂದಿಗೆ ಮಾತುಕತೆ ನಡೆಸುವಿರಿ.

ಕಟಕ: ಯುವಕರು ಶಾಶ್ವತ ಕೆಲಸ ಹುಡುಕುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ.
ಸಿಂಹ: ಪ್ರತಿಯೊಂದು ಕೆಲಸವನ್ನು ಎಚ್ಚರಿಕೆ ಮತ್ತು ಪ್ರಾಮಾಣಿಕತೆಯಿಂದ ಮಾಡಿ.
ಕನ್ಯಾ: ಕುಟುಂಬದ ಅಗತ್ಯ ಗಳನ್ನು ಪೂರೈಸುವುದರಲ್ಲೇ ಹೆಚ್ಚು ಸಮಯ ಕಳೆಯುವಿರಿ.

ತುಲಾ: ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆಯಿರಿ.
ವೃಶ್ಚಿಕ: ತಲೆನೋವು, ಮೊಣಕಾಲು ನೋವು ಇತ್ಯಾದಿಗಳಿಂದ ತೊಂದರೆಗೆ ಒಳಗಾಗಬಹುದು.
ಧನುಸ್ಸು: ಜವಾಬ್ದಾರಿಗಳನ್ನು ಪೂರೈಸಿ. ಖಂಡಿತ ವಾಗಿಯೂ ಉನ್ನತ ಮಟ್ಟಕ್ಕೆ ಏರುವಿರಿ.

ಮಕರ: ಕೃಷಿ ಭೂಮಿ ಮತ್ತು ಅದಕ್ಕೆ ಸಂಬಂಸಿದ ಕೆಲಸ-ಕಾರ್ಯಗಳಿಂದ ಹೆಚ್ಚು ಲಾಭ ಗಳಿಸುವಿರಿ.
ಕುಂಭ: ದೈನಂದಿನ ಕೆಲಸಗಳು ನಿರಾತಂಕವಾಗಿ ನಡೆಯಲಿವೆ. ಕುಟುಂಬದ ಕಡೆ ಗಮನ ಹರಿಸಿ.
ಮೀನ: ಉದ್ಯೋಗದಲ್ಲಿನ ಮಾನಸಿಕ ಕಿರಿಕಿರಿಯಿಂದಾಗಿ ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

RELATED ARTICLES

Latest News