Friday, May 17, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-12-2023)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-12-2023)

ನಿತ್ಯ ನೀತಿ : ಮನುಷ್ಯ ಬಹಳ ವಿಚಿತ್ರ. ಅವನಿಗೆ ಜ್ಞಾನದ ಬಗ್ಗೆ ಅಹಂಕಾರವಿದೆ. ಆದರೆ, ತನ್ನ ಅಹಂಕಾರದ ಬಗ್ಗೆ ಜ್ಞಾನವಿಲ್ಲ.

ಪಂಚಾಂಗ ಶನಿವಾರ 30-12-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಆಶ್ಲೇಷಾ / ಯೋಗ: ವಿಷ್ಕಂಭ / ಕರಣ: ಭವ

ಸೂರ್ಯೋದಯ : ಬೆ.06.41
ಸೂರ್ಯಾಸ್ತ : 06.03
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30

ರಾಶಿ ಭವಿಷ್ಯ
ಮೇಷ
: ಹಂತ ಹಂತವಾಗಿ ಕೆಲವು ವಿವಾದಗಳು ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ವೃಷಭ: ಪ್ರಾಮಾಣಿಕತೆಯಿಂದಾಗಿ ಮೇಲಧಿಕಾರಿಗಳಿಗೆ ನಿಮ್ಮ ಮೇಲೆ ಭರವಸೆ ಮೂಡಲಿದೆ.
ಮಿಥುನ: ಹಂತ ಹಂತವಾಗಿ ಕೆಲವು ಅಪರೂಪದ ಸ್ನೇಹಿತನ ಭೇಟಿ ಸಂತೋತ ತರಲಿದೆ.

ಕಟಕ: ಮಕ್ಕಳಿಂದ ಆಗುವ ತೊಂದರೆ ತಪ್ಪಲಿದೆ. ಕೆಲವರಿಗೆ ನಿಮ್ಮ ಮೇಲಿದ್ದ ಸಂಶಯ ದೂರವಾಗಲಿದೆ.
ಸಿಂಹ: ಖಾಸಗಿ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಈ ದಿನ ಅಷ್ಟು ಶುಭಕರವಾಗಿರುವುದಿಲ್ಲ.
ಕನ್ಯಾ: ಹಣದ ಕೊರತೆ ಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ತುಲಾ: ಉತ್ತಮ ಅವಕಾಶ ಗಳು ಸಿಗುವುದರಿಂದ ಆತ್ಮಗೌರವ ಹೆಚ್ಚಾಗಲಿದೆ.
ವೃಶ್ಚಿಕ: ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರ ಮಾಡದಿರಿ.
ಧನುಸ್ಸು: ಕಲಾವಿದರಿಗೆ ಒಳ್ಳೆಯ ಅವಕಾಶಗಳು ದೊರೆಯುತ್ತವೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ.

ಮಕರ: ಮನೆಯಲ್ಲಿ ನಡೆಯಬೇಕಾದ ಶುಭ ಕಾರ್ಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ.
ಕುಂಭ: ಲೆಕ್ಕ ಪರಿಶೋಧಕರಿಗೆ ಮತ್ತು ನ್ಯಾಯವಾದಿಗಳಿಗೆ ತೃಪ್ತಿಕರವಾದ ದಿನ.
ಮೀನ: ಉದ್ಯೋಗ ಸ್ಥಳದಲ್ಲಿ ಸಣ್ಣಪುಟ್ಟ ಸಮಸ್ಯೆ ಯಿಂದಾಗಿ ಹಿತಶತ್ರುಗಳ ಬಗ್ಗೆ ಮಾಹಿತಿ ಸಿಗಲಿದೆ.

RELATED ARTICLES

Latest News