Monday, October 7, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-02-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-02-2024)

ನಿತ್ಯ ನೀತಿ :
ಅಂತರಂಗದ ಸತ್ಯದರ್ಶನ ಸುಲಭ ಸಾಧ್ಯವಲ್ಲ. ಪುನಃ ಪುನಃ ಆತ್ಮಾನ್ವೇಷಣೆಯ ಲಕ್ಷ್ಯದೊಂದಿಗೆ ಆತ್ಮಶಕ್ತಿ ಸಂಜೀವಿನಿಯಾಗಿ ೀಃಶಕ್ತಿಯ ಸಂಪನ್ನತೆಯನ್ನು ವೃದ್ಧಿಗೊಳಿಸುತ್ತದೆ.

ಗುರುವಾರ ಪಂಚಾಂಗ / 01-02-2024
ಶೋಭಕೃತ್ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ
ತಿಥಿ: ಷಷ್ಠಿ / ನಕ್ಷತ್ರ: ಚಿತ್ತಾ / ಯೋಗ: ಧೃತಿ / ಕರಣ: ವಿಷ್ಟಿ
ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.21
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

ಇಂದಿನ ರಾಶಿಭವಿಷ್ಯ
ಮೇಷ
: ಮಕ್ಕಳಿಂದ ಅನುಕೂಲವಾಗಲಿದೆ. ಗೌರವ- ಸನ್ಮಾನ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ.
ವೃಷಭ: ಅಂದುಕೊಂಡ ಕೆಲಸಗಳು ಈಡೇರಲಿವೆ. ಬಂಧುಗಳಿಂದ ಸಹಾಯ ಸಿಗಲಿದೆ.
ಮಿಥುನ: ನಿಮ್ಮ ಮೇಲೆ ಬಾಕಿ ಇರುವ ಕೆಲಸಗಳ ಹೊರೆ ಹೆಚ್ಚಾಗಬಹುದು.

ಕಟಕ: ವೈದ್ಯಕೀಯ ವೆಚ್ಚ ಹೆಚ್ಚಾಗುವುದರಿಂದ ಸಾಲ ಮಾಡಬೇಕಾದ ಸಂದರ್ಭ ಗಳು ಬರಬಹುದು.
ಸಿಂಹ: ವಿವಾಹಿತರು ಸಂಗಾತಿಗೆ ನಿಷ್ಠರಾಗಿರಿ. ಆದಷ್ಟು ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ.
ಕನ್ಯಾ: ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ.

ತುಲಾ: ಪೊಷಕರು ಮಕ್ಕಳ ವಿಚಾರದಲ್ಲಿ ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ.
ವೃಶ್ಚಿಕ: ನಿಮ್ಮ ಮಾತುಗಳಿಂದ ಕುಟುಂಬದವರು ಮತ್ತು ಹಿತೈಷಿಗಳಿಗೆ ಸಂತೋಷವವಾಗಲಿದೆ.
ಧನುಸ್ಸು: ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವರು. ಇಡೀ ದಿನ ಶುಭವಾಗಿರಲಿದೆ.

ಮಕರ: ಮಕ್ಕಳ ಮೂಲಕ ಹಣ ಬರಲಿದೆ. ತೀರ್ಥಯಾತ್ರೆ, ಪ್ರವಾಸ ತೆರಳುವ ಯೋಗಗಳಿವೆ.
ಕುಂಭ: ಮನೆಯಲ್ಲಿ ಜಗಳಗಳು ಉಂಟಾಗ ಬಹುದು. ಆರ್ಥಿಕ ಪರಿಸ್ಥಿತಿ ಹದಗೆಡಬಹುದು.
ಮೀನ: ಶಕ್ತಿ ಮತ್ತು ಉತ್ಸಾಹ ತರುವ ಆನಂದಮಯ ಪ್ರವಾಸಕ್ಕೆ ಹೋಗುವಿರಿ.

3 ತಿಂಗಳಲ್ಲಿ ಎಲ್ಲಾ ದಾಖಲೆಗಳ ಡಿಜಿಟಲೀಕರಣ : ಸಚಿವ ಕೃಷ್ಣಭೈರೇಗೌಡ

RELATED ARTICLES

Latest News