Friday, November 22, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(09-06-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(09-06-2024)

ನಿತ್ಯ ನೀತಿ : ಎಲ್ಲ ಇದೆ ಎಂದು ದುರಂಹಕಾರ ಪಡಬೇಡ. ರಾತ್ರಿ ಅರಳುವ ಹೂವಿಗೂ ಗೊತ್ತಿರುವುದಿಲ್ಲ. ನಾಳೆ ಸಶಾನಕ್ಕೋ, ದೇವಸ್ಥಾನಕ್ಕೋ ಎಂದು..?

ಪಂಚಾಂಗ : ಭಾನುವಾರ, 09-06-2024
ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಪುನರ್ವಸು / ಯೋಗ: ವೃದ್ಧಿ / ಕರಣ: ವಣಿಜ್‌

ಸೂರ್ಯೋದಯ : ಬೆ.05.53
ಸೂರ್ಯಾಸ್ತ : 06.45
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ರಾಶಿಭವಿಷ್ಯ :
ಮೇಷ: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳಿಗೆ ಚಾಲನೆ ಸಿಗಲಿದೆ.
ವೃಷಭ: ಸಾಲ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಮಗಳ ಮದುವೆಯ ಚಿಂತೆ ಕಾಡುವುದು.
ಮಿಥುನ: ತಾಳ್ಮೆಯಿಂದ ವರ್ತಿಸಿದರೆ ಸುಲಭವಾಗಿ ಕಾರ್ಯಸಾಧನೆಯಾಗಲಿದೆ.

ಕಟಕ: ವ್ಯಾಪಾರದಲ್ಲಿ ನಷ್ಟ ಉಂಟಾದರೂ ಕೆಲವು ಶುಭ ಫಲಗಳನ್ನು ನಿರೀಕ್ಷಿಸಬಹುದು.
ಸಿಂಹ: ಅಪೇಕ್ಷಿತ ಜನರಿಂದ ಕಾರ್ಯಸಾಧನೆಯಾಗಲಿದೆ.
ಕನ್ಯಾ: ನೂತನ ವ್ಯವಹಾರಕ್ಕೆ ಕೈ ಹಾಕಿ ದುಡುಕದಿರಿ. ಆಲೋಚಿಸಿ ತೀರ್ಮಾನ ಕೈಗೊಳ್ಳಿ.

ತುಲಾ: ಆಕಸ್ಮಿಕ ಧನಲಾಭವಾಗುವುದು.
ಬಂಧು-ಮಿತ್ರರ ಸಹಾಯ ದೊರೆಯಲಿದೆ.
ವೃಶ್ಚಿಕ: ದಾನ-ಧರ್ಮಗಳಲ್ಲಿ ಆಸಕ್ತಿ ತೋರುವಿರಿ. ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ.

ಧನುಸ್ಸು: ಉತ್ತಮ ದೈವಬಲವಿದ್ದು, ಎಲ್ಲ ರೀತಿಯ ಅನುಕೂಲಗಳು ದೊರೆಯಲಿವೆ.
ಮಕರ: ಉದ್ಯೋಗದಲ್ಲಿ ಸಮಸ್ಯೆ ಕಂಡುಬರಲಿದೆ. ಇತರ ರೊಂದಿಗಿನ ಜಗಳದಿಂದಾಗಿ ನೆಮ್ಮದಿ ಇರುವುದಿಲ್ಲ.
ಕುಂಭ: ಮಾತಿನಲ್ಲಿ ಹಿಡಿತವಿರಲಿ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಧನನಷ್ಟ.
ಮೀನ: ವ್ಯಾಪಾರದ ಆಯ್ಕೆಯಲ್ಲಿ ಗೊಂದಲ. ನಾನಾ ವಿಚಾರಗಳಲ್ಲಿ ಆಸಕ್ತಿ ಹೊಂದುವಿರಿ.

RELATED ARTICLES

Latest News