Wednesday, December 18, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-12-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-12-2024)

Today's Horoscope

ನಿತ್ಯ ನೀತಿ : ಸಮುದ್ರ ಎಲ್ಲರಿಗೂ ಒಂದೇ. ಆದರೆ ಈಜು ಬಂದವನಿಗೆ ಮುತ್ತುಗಳು ಸಿಗುತ್ತವೆ. ಬಲೆ ಹಾಕಲು ಬಂದವನಿಗೆ ಮೀನುಗಳು ಸಿಗುತ್ತವೆ. ನಿಂತು ನೋಡುವವನ ಕಾಲು ಮಾತ್ರ ಒದ್ದೆಯಾಗುತ್ತವೆ. ಜೀವನ ಕೂಡ ಅಷ್ಟೇ, ಎಲ್ಲರಿಗೂ ಒಂದೇ ಜೀವನ. ಆದರೆ, ಇಲ್ಲಿ ನಮ ಪ್ರಯತ್ನ ಮಾತ್ರ ನಮ ಬಲ ಆಗಿರುತ್ತದೆ.

ಪಂಚಾಂಗ : ಸೋಮವಾರ, 09-12-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ-ನವಮಿ / ನಕ್ಷತ್ರ: ಪೂರ್ವಾಭಾದ್ರ / ಯೋಗ: ಸಿದ್ಧಿ / ಕರಣ: ಬಾಲವ
ಸೂರ್ಯೋದಯ – ಬೆ.06.31
ಸೂರ್ಯಾಸ್ತ – 05.54
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :
ಮೇಷ: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಕಾಣುವುದು. ರಾಜಕೀಯ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವಿರಿ.
ವೃಷಭ: ಎಲ್ಲಾ ವಿಚಾರಗಳನ್ನು ಸಾವಧಾನದಿಂದ ಬಗೆಹರಿಸಿಕೊಳ್ಳುವುದು ಬಹಳ ಉತ್ತಮ.
ಮಿಥುನ: ನಂಬಿದ ಜನರಿಂದ ಮೋಸ ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ. ಎಚ್ಚರಿಕೆಯಿಂದಿರಿ.

ಕಟಕ: ಸಮಾಜದಲ್ಲಿ ಗೌರವ ಸಿಗಲಿದೆ.
ಸಿಂಹ: ಹೈನುಗಾರಿಕೆಯಲ್ಲಿ ನಷ್ಟ ಸಂಭವಿಸಲಿದೆ.

ಕನ್ಯಾ: ಪ್ರಾಣಮಿತ್ರರರ ಸಹಕಾರದಿಂದ ಜೀವನದಲ್ಲಿ ಉನ್ನತ ಸ್ಥಾನ ಪಡೆಯುವಿರಿ.

ತುಲಾ: ಆರೋಗ್ಯದಲ್ಲಿ ಏರುಪೇರಾಗಲಿದೆ.
ವೃಶ್ಚಿಕ: ಉನ್ನತ ಅಧಿ ಕಾರಿ ಗಳೊಂದಿಗೆ ಕಲಹ.
ಧನುಸ್ಸು: ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.

ಮಕರ: ಉದ್ಯೋಗ ಸ್ಥಳದಲ್ಲಿ ಶತ್ರುಗಳ ಕಾಟ.
ಕುಂಭ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಿ. ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ಮೀನ: ಉದ್ಯೋಗ ನಿಮಿತ್ತ ಪ್ರಯಾಣ ಮಾಡುವಿರಿ.

RELATED ARTICLES

Latest News