Sunday, September 15, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-08-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-08-2024)

ನಿತ್ಯ ನೀತಿ : ಜೀವನ ಸಾಗಿಸಲು ಜಾಸ್ತಿ ಹಣ ಬೇಕಾಗಿಲ್ಲ. ಆದರೆ, ಇನ್ನೊಬ್ಬರನ್ನು ನೋಡಿ ಜೀವನ ಸಾಗಿಸಲು ಎಷ್ಟು ಹಣವಿದ್ದರೂ ಸಾಕಾಗುವುದಿಲ್ಲ.

ಪಂಚಾಂಗ : ಬುಧವಾರ , 14-08-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ /ಶುಕ್ಲ ಪಕ್ಷ / ತಿಥಿ: ನವಮಿ / ನಕ್ಷತ್ರ: ಅನುರಾಧಾ / ಯೋಗ: ಐಂದ್ರ / ಕರಣ: ತೈತಿಲ

ಸೂರ್ಯೋದಯ – ಬೆ.06.07
ಸೂರ್ಯಾಸ್ತ – 06.41
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ
: ಅಗತ್ಯವಿರುವ ವಸ್ತುಗಳನ್ನು ಖರೀದಿಸು ವುದು ಒಳಿತು. ಸಿಕ್ಕಾಪಟ್ಟೆ ಖರ್ಚು ಮಾಡದಿರಿ.
ವೃಷಭ: ಕೆಲವು ದಾಖಲೆಗಳ ಹುಡುಕಾಟದಲ್ಲೇ ಹೆಚ್ಚು ಸಮಯ ಕಳೆಯುವುದರಿಂದ ಸಮಯ ವ್ಯರ್ಥವಾಗಲಿದೆ. ಆದಾಯ ಕಡಿಮೆಯಾಗಲಿದೆ.
ಮಿಥುನ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ ಮತ್ತು ಅದರಲ್ಲಿ ನೀವು ಯಶಸ್ಸು ಸಾಧಿಸುವಿರಿ.

ಕಟಕ: ಆಹಾರ ವ್ಯತ್ಯಾಸ ದಿಂದ ಪಿತ್ತ ಸಂಬಂಧಿ ಅನಾರೋಗ್ಯ ಕಾಡಬಹುದು.
ಸಿಂಹ: ಕಟ್ಟಡ ನಿರ್ಮಾಣಗಾರರಿಗೆ ಹೆಚ್ಚಿನ ಕೆಲಸ ಇರುವುದು.
ಕನ್ಯಾ: ಹಲವು ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಅನಾಯಾಸವಾಗಿ ಮುಗಿಯಲಿವೆ.

ತುಲಾ: ವಿದ್ಯೆ ಸಂಪಾದನೆ ಕಡೆ ಗಮನ ಹರಿಸಿದರೆ ಯಶಸ್ಸು ಸಾಧಿಸುವಿರಿ.
ವೃಶ್ಚಿಕ: ಬಂಧುಗಳು ನೀಡುವ ಸಲಹೆ- ಸೂಚನೆಗಳಿಂದ ಸಮಸ್ಯೆಗಳು ದೂರವಾಗಲಿವೆ.
ಧನುಸ್ಸು: ಲೋಹದ ವಸ್ತುಗಳನ್ನು ವ್ಯಾಪಾರ ಮಾಡುವವರಿಗೆ ದುಪ್ಪಟ್ಟು ಲಾಭ ಸಿಗಲಿದೆ.

ಮಕರ: ಕೆಲಸದ ಸ್ಥಳದಲ್ಲಿ ಹಿರಿಯ ಸಹೋದ್ಯೋಗಿ ಗಳಿಂದ ಸಲಹೆಗಳು ಮತ್ತು ಸಹಾಯ ಸಿಗಲಿದೆ.
ಕುಂಭ: ಅತ್ತೆ ಕಡೆಯಿಂದ ಮಾನಸಿಕ ಒತ್ತಡ, ಕಿರುಕುಳ ಎದುರಿಸಬೇಕಾಗಬಹುದು.
ಮೀನ: ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಅವಕಾಶಗಳು ದೊರೆಯಲಿವೆ.

RELATED ARTICLES

Latest News