ನಿತ್ಯ ನೀತಿ : ಯಾವುದಕ್ಕೂ ಭಯ ಪಡದಿರು. ನಿನ್ನ ಕರ್ಮ, ನಿನ್ನ ಧರ್ಮ, ನಿನ್ನ ಶ್ರಮ, ಭಗವಂತನ ಮೇಲಿರುವ ನಿನ್ನ ಪ್ರೇಮ ನಿನ್ನನ್ನು ರಕ್ಷಿಸುವುದು. ಇದು ಸತ್ಯ.
ಪಂಚಾಂಗ : ಸೋಮವಾರ, 22-04-2024
ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಶುಕ್ಲ ಪಕ್ಷ
ತಿಥಿ: ಚತುರ್ದಶಿ / ನಕ್ಷತ್ರ: ಹಸ್ತ / ಯೋಗ: ಹರ್ಷಣ / ಕರಣ: ಗರಜೆ
ಸೂರ್ಯೋದಯ : ಬೆ.06.03
ಸೂರ್ಯಾಸ್ತ : 06.33
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00
ರಾಶಿಭವಿಷ್ಯ :
ಮೇಷ: ಕೌಟುಂಬಿಕ ಜೀವನದಲ್ಲಿ ಹೆಚ್ಚು ಜಾಗರೂಕ ರಾಗಿರಬೇಕು. ಮನೆಯವರೊಂದಿಗೆ ಸಮಯ ಕಳೆಯಿರಿ.
ವೃಷಭ: ನಿರೀಕ್ಷಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ಇಷ್ಟಾರ್ಥಗಳು ಈಡೇರುವ ಸಾಧ್ಯತೆಗಳಿವೆ.
ಮಿಥುನ: ಚಿಂತನೆಯಿಂದ ವರ್ತಿಸುವ ಮೂಲಕ ಎಲ್ಲರನ್ನೂ ಗೌರವಿಸುವುದು ಒಳಿತು.
ಕಟಕ: ಸ್ವಂತಿಕೆ ಬಿಟ್ಟು ಸಂದರ್ಭಕ್ಕೆ ತಕ್ಕಂತೆ ತೀರ್ಮಾನ ಕೈಗೊಳ್ಳುವುದು ಅನಿವಾರ್ಯ.
ಸಿಂಹ: ಕಚೇರಿ ಕೆಲಸ – ಕಾರ್ಯಗಳಲ್ಲಿ ಉತ್ತಮ ಬದಲಾವಣೆಯಾಗಲಿದೆ.
ಕನ್ಯಾ: ಅನೇಕ ವಿಧದ ಜನರು ನಿಮ್ಮ ಬಳಿ ಆಶ್ರಯಕ್ಕಾಗಿ ಬರುವರು.
ತುಲಾ: ತಂದೆಯ ಬೆಂಬಲದೊಂದಿಗೆ, ಭೂಮಿ ಮತ್ತು ಆಸ್ತಿಯ ಲಾಭ ಪಡೆಯಬಹುದು.
ವೃಶ್ಚಿಕ: ಮನೋಸ್ಥೈರ್ಯ ಅಕವಾಗಿರುವುದರಿಂದ ಎ¯್ಲÁ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು.
ಧನುಸ್ಸು: ಸ್ತ್ರೀಯರಿಗೆ ತವರು ಮನೆಯಿಂದ ಆಸ್ತಿಯಲ್ಲಿ ಭಾಗ ಬರಬಹುದು.ಆಹಾರದ ಕಡೆ ಗಮನ ನೀಡಿ.
ಮಕರ: ಪಿತ್ರಾರ್ಜಿತ ಆಸ್ತಿ ವಿವಾದ ಉಂಟಾಗಲಿದೆ. ದುಶ್ಚಟಗಳಿಗೆ ಹಣ ವ್ಯಯವಾಗುವುದು.
ಕುಂಭ: ವೈದ್ಯಕೀಯ ವೆಚ್ಚ ಹೆಚ್ಚಾಗುವುದರಿಂದ ಸಾಲ ಮಾಡಬೇಕಾದ ಸಂದರ್ಭಗಳು ಬರಬಹುದು.
ಮೀನ: ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಅಥವಾ ಯೋಗ ಮಾಡಬೇಕು.