Friday, June 21, 2024
Homeರಾಜ್ಯಸೌದಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಉತ್ತರ ಕನ್ನಡದ ಮೂವರ ಸಾವು

ಸೌದಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಉತ್ತರ ಕನ್ನಡದ ಮೂವರ ಸಾವು

ಶಿರಸಿ(ಉತ್ತರಕನ್ನಡ),ಏ.8- ಹಜ್ ಯಾತ್ರೆಗೆ ತೆರಳಿದ್ದ ಜಿಲ್ಲೆಯ ಮುಂಡಗೋಡಿನ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.

ಮುಂಡಗೋಡ ಪಟ್ಟಣದ ರೋಣ ಮೆಡಿಕಲ್ಸ್‍ನ ಮಾಲೀಕರಾದ ಫಯಾಜ್ ರೋಣ ಅವರ ಪತ್ನಿ ಅಫ್ರೀನ ಬಾನು ಹಾಗೂ ಅವರ ಅಣ್ಣನ ಮಗ ಅಯಾನ್ ರೋಣ ಮೃತ ದುರ್ದೈವಿಗಳು.

ಅಪಘಾತದಲ್ಲಿ ಫಯಾಜ್ ಅವರ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಮಾ.26ರಂದು ಮೆಕ್ಕಾ ಮದೀನಾ ದರ್ಶನಕ್ಕೆ ತೆರಳಿದ್ದರು. ಏ.6ರ ರಾತ್ರಿ ಮೆಕ್ಕಾದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.

RELATED ARTICLES

Latest News