ಬೆಂಗಳೂರು, ಜು.5– ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿ 23 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚೆಗೆ, ಕಳೆದ 2 ದಿನದಲ್ಲಿ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು ಇದೀಗ, 23 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ತಡ ರಾತ್ರಿ ಆದೇಶ ಹೊರಡಿಸಲಾಗಿದೆ.
ಪ್ರಮುಖವಾಗಿ ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರನ್ನು ಪ್ರವಾಸೋದ್ಯಮ ನಿರ್ದೇಶಕರಾಗಿ ನೇಮಿಸಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಉಳಿದಂತೆ ವರ್ಗಾವಣೆಯಾದ ಅಧಿಕಾರಿಗಳ ವಿವರ ಕೆಳಕಂಡಂತಿದೆ.
* ಡಾ.ರಾಮ್ಪ್ರಸಾತ್ ಮನೋಹರ್, ಹೆಚ್ಚುವರಿ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಅಧ್ಯಕ್ಷರು ಬೆಂಗಳೂರು ಜಲಮಂಡಳಿ
* ಬಿ.ಶರತ್-ವ್ಯವಸ್ಥಾಪಕ ನಿರ್ದೇಶಕರು ,ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ
* ಸೆಲ್ವಮಣಿ- ವ್ಯವಸ್ಥಾಪಕ ನಿರ್ದೇಶಕರು,ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
* ನಿತೀಶ್ ಪಾಟೀಲ್-ಐಎಎಸ್ ನಿರ್ದೇಶಕರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಬೆಂಗಳೂರು
* ಡಾ. ಅರುಂಧತಿ ಚಂದ್ರಶೇಖರ್-ಆಯುಕ್ತರು, ಪಂಚಾಯತ್ ರಾಜ್ ಇಲಾಖೆ ,ಬೆಂಗಳೂರು
* ಜ್ಯೋತಿ ಕೆ-ಆಯುಕ್ತರು ಮತ್ತು ನಿರ್ದೇಶಕರು, ಜವಳಿ ಅಭಿವೃದ್ಧಿ ಮತ್ತು ಕೈಮಗ್ಗ, ಬೆಂಗಳೂರು
* ಶ್ರೀಧರ ಸಿ.ಎನ್.-ನಿರ್ದೇಶಕರು, ಸಾಮಾಜಿಕ ಲೆಕ್ಕ ಪರಿಶೋಧನೆ, ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು
* ಡಾ.ರಾಜೇಂದ್ರ ಕೆ.ವಿ.- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಬೆಂಗಳೂರು
* ಚಂದ್ರಶೇಖರ ನಾಯಕ ಎಲ್- ಹೆಚ್ಚುವರಿ ಆಯುಕ್ತರು,ವಾಣಿಜ್ಯ ತೆರಿಗೆಗಳು(ಜಾರಿ), ಬೆಂಗಳೂರು
* ವಿಜಯಮಹಾಂತೇಶ ಬಿ ದಾನಮನವರ್-ಜಿಲ್ಲಾಧಿಕಾರಿ, ಹಾವೇರಿ ಜಿಲ್ಲೆ
* ಗೋವಿಂದ ರೆಡ್ಡಿ-ಜಿಲ್ಲಾಧಿಕಾರಿ, ಗದಗ
* ರಘುನಂದನ್ ಮೂರ್ತಿ-ಖಜಾನೆ ಆಯುಕ್ತರು, ಬೆಂಗಳೂರು
* ಡಾ.ಗಂಗಾಧರಸ್ವಾಮಿ ಜಿ.ಎಂ.-ಜಿಲ್ಲಾಧಿಕಾರಿ, ದಾವಣಗೆರೆ
* ಲಕ್ಷೀಕಾಂತ್ ರೆಡ್ಡಿ-ಜಿಲ್ಲಾಧಿಕಾರಿ, ಮೈಸೂರು
* ನಿತೀಶ್ ಕೆ-ಜಿಲ್ಲಾಧಿಕಾರಿ, ರಾಯಚೂರು ಜಿಲ್ಲೆ
* ಮೊಹಮದ್ ರೋಷನ್ -ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ
* ಶಿಲ್ಪಾ ಶರ್ಮಾ- ಜಿಲ್ಲಾಧಿಕಾರಿ, ಬೀದರ್ ಜಿಲ್ಲೆ.
* ಡಾ.ದಿಲೀಶ್ ಸಸಿ-ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸೆಂಟರ್ ಫಾರ್ ಇ-ಆಡಳಿತ, ಬೆಂಗಳೂರು
* ಲೋಖಂಡೆ ಸ್ನೇಹಲ್ ಸುಧಾಕರ್- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ವಿದ್ಯುತ್ ಕಾರ್ಖಾನೆ