ವಾಷಿಂಗ್ಟನ್,ಜೂ.16- ಇರಾನ್ನ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆಗೈಯ್ಯಲು ಅಮೆರಿಕಕ್ಕೆ ಇಸ್ರೇಲ್ ಮಾಡಿದ್ದ ಪ್ರಸ್ತಾವನೆಯನ್ನು ಅಧ್ಯಕ್ಷ ಡೊನಾಲ್್ಡ ಟ್ರಂಪ್ ತಿರಸ್ಕರಿಸಿರುವುದಾಗಿ ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಖಮೇನಿ ಅವರನ್ನು ಹತ್ಯೆ ಮಾಡಲು ಇತ್ತೀಚಿನ ದಿನಗಳಲ್ಲಿ ಒಂದು ವಿಶ್ವಾಸಾರ್ಹ ಯೋಜನೆ ರೂಪಿಸಿರುವುದಾಗಿ ಇಸ್ರೇಲಿಗಳು ಟ್ರಂಪ್ ಆಡಳಿತಕ್ಕೆ ಮಾಹಿತಿ ನೀಡಿದ್ದರು.
ಆದರೆ ಟ್ರಂಪ್ ಅವರು ಈ ಯೋಜನೆಯನ್ನು ಕಾರ್ಯಗತಗೊಳಿಸದಂತೆ ಇಸ್ರೇಲಿಗಳಿಗೆ ತಾಕೀತು ಮಾಡಿದರೆಂದು ಈ ಅಧಿಕಾರಿ ಹೇಳೀದ್ದಾರೆ. ವಿಷಯ ಸೂಕ್ಷ್ಮವಾಗಿರುವುದರಿಂದ ಅವರು ತಮ ಹೆಸರು ಬಹಿರಂಗಪಡಿಸಲು ಇಚ್ಛಿಸಲಿಲ್ಲ.
ಇರಾನ್ನ ಪರಮಾಣು ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಹತಾಶ ಪ್ರಯತ್ನ ನಡೆಸಿರುವ ಟ್ರಂಪ್ ಆಡಳಿತವು ಖಮೇನಿ ಅವರನ್ನು ಕೊಲ್ಲುವ ಹುನ್ನಾರವು ಸಂಘರ್ಷವನ್ನು ಉಲ್ಬಣಗೊಳಿಸುವುದರ ಜೊತೆಗೆ ಈ ಪ್ರದೇಶದಲ್ಲಿ ಶಾಂತಿ ಕದಡುತ್ತದೆ ಎಂಬ ನಿಲುವು ಹೊಂದಿದೆ. ಫಾಕ್್ಸ ಸುದ್ದಿವಾಹಿನಿ ಬಿತ್ತರಿಸಿದ ಸಂದರ್ಶನದಲ್ಲಿ ಈ ವಿಷಯ ಕುರಿತು ಪ್ರಶ್ನಿಸಿದಾಗ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶ್ವೇತಭವನವು ಈ ಯೋಜನೆಯನ್ನು ತಿರಸ್ಕರಿಸುವ ಬಗ್ಗೆ ನೇರವಾಗಿ ತಿಳಿಸಲಿಲ್ಲ.
ಆದರೆ ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಮಾಡೇ ತೀರುತ್ತೇವೆ ಮತ್ತು ಅಮೆರಿಕವು ತನಗೆ ಯಾವುದು ಒಳ್ಳೆಯದೆಂಬುದನ್ನು ತಿಳಿದಿದೆ ಎಂದು ಭಾವಿಸುತ್ತೇನೆ ಎಂದು ಉತ್ತರಿಸಿದ್ದಾರೆ.
ಈ ಸಂಘರ್ಷದ ಪರಿಣಾಮವಾಗಿ ಇರಾನ್ನ ತೀರಾ ದುರ್ಬಲ ಆಡಳಿತವು ಬದಲಾಗುತ್ತದೆ ಎಂದು ನೆತನ್ಯಾಹು ಹೇಳಿದ್ದಾರೆ.ಟ್ರಂಪ್ ಅ ವರು ಈ ಯೋಜನೆಯನ್ನು ತಿರಸ್ಕರಿಸುವುದಾಗಿ ಈ ಮುನ್ನ ರಾಯಿಟರ್ರಸ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಈ ವರದಿಗಳ ಬಗ್ಗೆ ಮಾತನಾಡಲು ನೆತನ್ಯಾಹು ಅವರ ಕಚೇರಿ ನಿರಾಕರಿಸಿತ್ತು.