Saturday, July 27, 2024
Homeಬೆಂಗಳೂರುಮಳೆ ಅನಾಹುತ ಸಂಭವಿಸುವ 47 ಸೂಕ್ಷ್ಮ ಪ್ರದೇಶಗಳ ಮೇಲೆ ಹದ್ದಿನಕಣ್ಣು : ತುಷಾರ್‌ಗಿರಿನಾಥ್‌

ಮಳೆ ಅನಾಹುತ ಸಂಭವಿಸುವ 47 ಸೂಕ್ಷ್ಮ ಪ್ರದೇಶಗಳ ಮೇಲೆ ಹದ್ದಿನಕಣ್ಣು : ತುಷಾರ್‌ಗಿರಿನಾಥ್‌

ಬೆಂಗಳೂರು,ಮೇ.20- ಮಳೆಗಾಲದಲ್ಲಿ ಸಾಕಷ್ಟು ಅನಾಹುತ ಸಂಭವಿಸುವ ನಗರದ 47 ಸೂಕ್ಷ್ಮ ಪ್ರದೇಶಗಳ ಮೇಲೆ ಹದ್ದಿನಕಣ್ಣಿಟ್ಟು ಕಾರ್ಯ ನಿರ್ವಹಿಸುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಇಂದಿಲ್ಲಿ ತಿಳಿಸಿದರು.

ನಗರದ 74 ಕಡೆಗಳಲ್ಲಿ ಅತಿ ಹೆಚ್ಚು ಮಳೆ ಅನಾಹುತಗಳು ಸಂಭವಿಸುತ್ತಿದ್ದು, ಅವುಗಳಲ್ಲಿ ಅತಿ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲ್ಪಟ್ಟಿರುವ 47 ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು.

ಮಳೆ ನಿಂತ ನಂತರ ತಗ್ಗುಪ್ರದೇಶಗಳಲ್ಲಿ ನಿಲ್ಲುವ ನೀರನ್ನು ಪಂಪ್‌ಸೆಟ್‌ ಮೂಲಕ ಹೊರ ಹಾಕಲಾಗುವುದು ಒಟ್ಟಾರೆ ಯಾವುದೇ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನಿನ್ನೆ ಸುರಿದ ಬಾರಿ ಮಳೆಗೆ ಮಳೆ ನೀರು ಮನೆಗಳಿಗೆ ನುಗ್ಗಿ ಅನಾಹುತ ಸಂಭವಿಸಿರುವ ಯಲಹಂಕದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಇಲ್ಲಿನ ಕೆಲ ವಿಲ್ಲಾಗಳಿಗೂ ನೀರು ತುಂಬಿದೆ. ಬೆಳಿಗ್ಗೆ ಪಂಪ್‌ ಮೂಲಕ ನೀರು ತೆರವು ಮಾಡಲಾಗಿದೆ. ಸದ್ಯ ಪುಟ್ಟೆನಹಳ್ಳಿ ಕೆರೆ ಭಾಗದಲ್ಲಿ ರಾಜಕಾಲುವೆ ನಿರ್ಮಾಣ ಮಾಡ್ತಿದೆವೆ. ಈ ಹಿನ್ನೆಲೆಯಲ್ಲಿ ನೀರು ಮನೆಗಳಿಗೆ ನುಗ್ಗಿಗೆ ಈ ಪುಟ್ಟೆನ್ನಹಳ್ಳಿ ಕೆರೆ ಬಿಬಿಎಂಪಿ ವ್ಯಾಪ್ತಿ ಗೆ ಬರೋದಿಲ್ಲ. ಅದು ಅರಣ್ಯ ಇಲಾಖೆಗೆ ಸೇರಿದೆ ಎಂದು ಅವರು ಮಾಹಿತಿ ನೀಡಿದರು. ಸದ್ಯ ನೀರು ನುಗ್ಗಿರುವ ಯಾವುದೇ ವಿಲ್ಲಾಗಳು ಒತ್ತುವರಿ ಆಗಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಳೆದ 15 ದಿನದ ಮಳೆಗೆ ನಗರದಲ್ಲಿ 5500 ಗುಂಡಿಗಳು ಬಿದ್ದಿವೆ. ಪಾಲಿಕೆಯ 8 ವಲಯಗಳಲ್ಲಿ ಗುಂಡಿ ಗಳು ಇವೆ. ಮಳೆಗಾಲದ ಸಮಯದಲ್ಲಿ ಗುಂಡಿ ಮುಚ್ಚೋದಕ್ಕೆ ಸಾದ್ಯವಾಗ್ತಿಲ್ಲ. 66 ಕಡೆ ಬಹು ದೊಡ್ಡಮಟ್ಟದ ಗುಂಡಿಗಳು ಬಿದ್ದಿದೆ ಎಂದು ಅವರು ಮಾಹಿತಿ ನೀಡಿದರು.

ಮಳೆಯಿಂದ ಆಗಿರುವ ರಸ್ತೆ ಗುಂಡಿಗಳನ್ನು ಸದ್ಯ ಕೋಲ್ಡ್‌‍ ಮಿಕ್‌್ಸ ಮೂಲಕ ಗುಂಡಿ ಮುಚ್ಚಲಾಗುತ್ತೆ. ಮಳೆ ನಿಂತ ಮೇಲೆ ಟಾರ್‌ ಹಾಕಿ ಗುಂಡಿ ಮುಚ್ಚಲಾಗುತ್ತದೆ ಎಂದು ಅವರು ಹೇಳಿದರು.

RELATED ARTICLES

Latest News