Saturday, May 4, 2024
Homeಬೆಂಗಳೂರುದುಶ್ಚಟಕ್ಕಾಗಿ ಕನ್ನಗಳವು ಮಾಡುತ್ತಿದ್ದ ರೌಡಿ ಸೇರಿ ಇಬ್ಬರ ಬಂಧನ

ದುಶ್ಚಟಕ್ಕಾಗಿ ಕನ್ನಗಳವು ಮಾಡುತ್ತಿದ್ದ ರೌಡಿ ಸೇರಿ ಇಬ್ಬರ ಬಂಧನ

ಬೆಂಗಳೂರು, ಏ.16- ಮೋಜಿನ ಜೀವನಕ್ಕಾಗಿ, ತಮ್ಮ ದುಶ್ಚಟಗಳನ್ನು ಪೂರೈಸಿಕೊಳ್ಳುವ ಸಲುವಾಗಿ, ಬೀಗ ಹಾಕಿದ ಮನೆಗಳನ್ನು ಗುರುತಿಸಿ ಬೀಗ ಮುರಿದು ಒಳಗೆ ನುಗ್ಗಿ ಕೈಗೆ ಸಿಕ್ಕಿದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ ರೌಡಿ ಸೇರಿದಂತೆ ಇಬ್ಬರನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರೌಡಿ ಶ್ರೀನಿವಾಸ ಮತ್ತು ಈತನ ಸಹಚರ ವೆಂಕಟೇಶ್ ಬಂಧಿತರು. ಆರೋಪಿಗಳಿಂದ ಒಟ್ಟು 205 ಗ್ರಾಂ ತೂಕದ ಚಿನ್ನಾಭರಣ, ಸುಜುಕಿ ಆಕ್ಸ್ಸ್ ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ 15 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.

ಮದಕರಿ ನಾಯಕ ರಸ್ತೆಯಲ್ಲಿರುವ ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಲು ಯತ್ನಿಸಿದ್ದ ಬಗ್ಗೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಕೃತ್ಯ ನಡೆದ ಸ್ಥಳದಲ್ಲಿ ಬೆರಳಚ್ಚು ತಜ್ಞರು ಸಂಗ್ರಹಿಸಿದ್ದ ಬೆರಳು ಮುದ್ರೆಗಳ ಆಧಾರದಲ್ಲಿ ನೀಡಿದ ವರದಿಯನ್ವಯ ಆರೋಪಿಯೊಬ್ಬನಿಗೆ ಹೋಲಿಕೆಯಾಗಿರುವುದು ಕಂಡುಬಂದಿದೆ.

ಬೆರಳಚ್ಚು ಆಧರಿಸಿ ಅರೋಪಿಗಳ ಬಗ್ಗೆ ಮಾಹಿತಿ ಕಲೆಹಾಕಿ, ದಾವಣಗೆರೆಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಶ್ರೀನಿವಾಸ್ ಯಶವಂತಪುರ ಪೊಲೀಸ್ ಠಾಣೆಯ ರೌಡಿ ಶೀಟರ್ ಎಂಬುವುದು ಗೊತ್ತಾಗಿದೆ. ಈ ರೌಡಿ ವಿರುದ್ಧ 20 ಕ್ಕೂ ಹೆಚ್ಚು ಕನ್ನ ಕಳವು ಪ್ರಕರಣಗಳು ದಾಖಲಾಗಿ ರುವುದು ವಿಚಾರಣೆಯಿಂದ ತಿಳಿದು ಬಂದಿರುತ್ತದೆ.

ಮತ್ತೊಬ್ಬ ಆರೋಪಿ ವೆಂಕಟೇಶ್ ಈತನ ಸಹಚರನಾಗಿದ್ದು, ಇವರುಗಳಿಂದ ಒಟ್ಟು 205 ಗ್ರಾಂ ತೂಕದ ವಿವಿಧ ಬಗೆಯ ಚಿನ್ನದ ಆಭರಣಗಳು, ಕೃತ್ಯಕ್ಕೆ ಬಳಸುತ್ತಿದ್ದ ಒಂದು ಸುಜುಕಿ ಆಕ್ಸ್ಸ್ ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ 15 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.

ಆರೋಪಿಗಳ ಬಂಧನದಿಂದ ರಾಮಮೂರ್ತಿ ನಗರ ಪೊಲೀಸ್ ಠಾಣೆಯ 1 ಕನ್ನ ಕಳವು ಪ್ರಕರಣ ಮತ್ತು ಕೆ.ಆರ್ ಪುರಂ ಪೊಲೀಸ್ ಠಾಣೆಯ ಪೊಲೀಸ್ ಠಾಣೆಯ-3 ಕನ್ನ ಕಳವು ಪ್ರಕರಣಗಳು ಸೇರಿದಂತೆ ಒಟ್ಟು 4 ಕನ್ನ ಕಳವು ಪ್ರಕರಣಗಳು ಪತ್ತೆಯಾಗಿವೆ. ಇನ್ಸ್ಪೆಕ್ಟರ್ ಮುತ್ತುರಾಜು ಮತ್ತು ಸಿಬ್ಬಂದಿ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News