Sunday, September 15, 2024
Homeಅಂತಾರಾಷ್ಟ್ರೀಯ | Internationalಟೈಫೂನ್‌ ಅಬ್ಬರ : ಧಾರಾಕಾರ ಮಳೆ-ಗಾಳಿಗೆ ಜಪಾನ್‌ ತತ್ತರ

ಟೈಫೂನ್‌ ಅಬ್ಬರ : ಧಾರಾಕಾರ ಮಳೆ-ಗಾಳಿಗೆ ಜಪಾನ್‌ ತತ್ತರ

Typhoon Shanshan hits Japan's Kyushu

ಟೋಕಿಯೊ, ಆ.29:ಚಂಡಮಾರುತ ಅಪ್ಪಳಿಸಿದ ಹಿನ್ನಲೆಯಲ್ಲಿ ದಕ್ಷಿಣ ಜಪಾನ್‌ನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ-ಗಾಳಿ ಆತಂಕ ಮೂಡಿಸಿದೆ.ಮೂರು ಪ್ರವಾಹ, ಭೂಕುಸಿತದಿಂದ ವ್ಯಾಪಕ ಹಾನಿಯ ಬಗ್ಗೆ ಹವಾಮಾನ ಇಲಾಖೆ ಕಳವಳ ವ್ಯಕ್ತಪಡಿಸಿದ್ದು ,ಪಾಥಮಿಕ ಮಾಹಿತಿ ಅನ್ವಯ ಮೂವರು ಸಾವನ್ನಪ್ಪಿದ್ದಾರೆ.

ಶಂಶಾನ್‌ ಚಂಡಮಾರುತ ದಕ್ಷಿಣ ಕ್ಯುಶುವಿನ ಸತ್ಸುಮಾಸೆಂಡೈ ಬಳಿ ಇಂದು ಬೆಳಿಗ್ಗೆ ಅಪ್ಪಳಿದ್ದು ,ಮುಂದಿನ 24 ಗಂಟೆಗಳಲ್ಲಿ 60 ಸೆ.ಮೀ ಮಳೆ ಬೀಳಬಹುದು ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಚಂಡಮಾರುತದಿಂದ ಬಲವಾದ ಗಾಳಿ ಬೀಸುತ್ತಿದ್ದು ಕಡಲಿನಲ್ಲಿ ಭರಿ ಗಾತ್ರದ ಅಲೆಗಳು ಕಂಡುಬಂದಿದೆ. ದೇಶದ ಹೆಚ್ಚಿನ ಭಾಗಗಳಿಗೆ ಅದರಲ್ಲೂ ವಿಶೇಷವಾಗಿ ಕ್ಯುಶುವಿನ ದಕ್ಷಿಣ ಪ್ರಾಂತ್ಯಗಳಿಗೆ ಭಾರಿ ಹೊಡೆತ ಎಂದು ಹೇಳಿದೆ.

ಈ ಪ್ರದೇಶಗಳಲ್ಲಿ ವಾಸಿಸುವ ಜನರು ಸಮುದಾಯ ಕೇಂದ್ರಗಳು ಮತ್ತು ಇತರ ಸಾರ್ವಜನಿಕ ಸೌಲಭ್ಯಗಳಲ್ಲಿ ಆಶ್ರಯ ಪಡೆಯುವಂತೆ ಸೂಚಿಸಲಾಗಿದೆ. .ಚಂಡಮಾರುತದ ಆಗಮನಕ್ಕೆ ಮುಂಚಿತವಾಗಿ ಸುರಿದ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿ ಗಮಗೋರಿಯಲ್ಲಿ ಮನೆನಾಶಗೊಂಡಿದ್ದು ಮೂವರು ನಿವಾಸಿಗಳು ಸಾವನ್ನಪ್ಪಿದರು ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ನಗರದ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.

ಮುಂದಿನ ಕೆಲವು ದಿನಗಳಲ್ಲಿ ಟೈಫೂನ್ ಜಪಾನಿನ ದ್ವೀಪಸಮೂಹವನ್ನು ನಿಧಾನವಾಗಿದಾಟಲಿದೆ.ಈ ನಡುವೆ ಹೆಚ್ಚನ ಪ್ರವಾಹ ,ಭೂಕುಸಿತ ಆತಂಕ ಮೂಡಿಸಿದೆ ಎಂದು ವಿಪತ್ತು ನಿರ್ವಹಣಾ ಸಚಿವ ಯೋಶಿಫುಮಿ ಮತ್ಸುಮುರಾ ಹೇಳಿದ್ದಾರೆ,

ನೈಋತ್ಯ ನಗರಗಳು ಮತ್ತು ದ್ವೀಪಗಳನ್ನು ಸಂಪರ್ಕಿಸುವ ನೂರಾರು ದೇಶೀಯ ವಿಮಾನಗಳನ್ನು ಇಂದು ರದ್ದುಗೊಳಿಸಲಾಗಿದೆ ಮತ್ತು ಬುಲೆಟ್‌ ರೈಲುಗಳು ಮತ್ತು ಕೆಲವು ಸ್ಥಳೀಯ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಇದೇ ರೀತಿಯ ಕ್ರಮಗಳನ್ನು ಹೋನ್ಶು ಮುಖ್ಯ ದ್ವೀಪದಲ್ಲಿ ಭಾನುವಾರದವರೆಗೆ ತೆಗೆದುಕೊಳ್ಳಬಹುದು. ಕ್ಯುಶು ಪ್ರದೇಶದಲ್ಲಿ ಅಂಚೆ ಮತ್ತು ವಿತರಣಾ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ ಮತ್ತು ಸೂಪಮಾರ್ಕೆಟ್‌ ಮತ್ತು ಇತರ ಅಂಗಡಿಗಳನ್ನು ಮುಚ್ಚಲು ಯೋಜಿಸಲಾಗಿದೆ.

RELATED ARTICLES

Latest News