Monday, February 26, 2024
Homeರಾಜ್ಯಅಧೀನ ಶಾಸನ ರಚನಾ ಸಮಿತಿಯ ಸದಸ್ಯರಾಗಿ ಉದಯ್ ಬಿ.ಗರುಡಾಚಾರ್ ನೇಮಕ

ಅಧೀನ ಶಾಸನ ರಚನಾ ಸಮಿತಿಯ ಸದಸ್ಯರಾಗಿ ಉದಯ್ ಬಿ.ಗರುಡಾಚಾರ್ ನೇಮಕ

ಬೆಂಗಳೂರು, ಜ.24- ರಾಜ್ಯ ವಿಧಾನಮಂಡಲದ ಅಧೀನ ಶಾಸನ ರಚನಾ ಸಮಿತಿಯ ಸದಸ್ಯರಾಗಿ ಶಾಸಕ ಉದಯ್ ಬಿ.ಗರುಡಾಚಾರ್ ನೇಮಕಗೊಂಡಿದ್ದಾರೆ.

2023-24 ನೇ ಸಾಲಿನ ವಿಧಾನಮಂಡಲದ ಅಧೀನ ಶಾಸನ ರಚನಾ ಸಮಿತಿಯ ಸದಸ್ಯತ್ವಕ್ಕೆ ಶಾಸಕ ಬಿ.ಸುರೇಶ್‍ಗೌಡ ಅವರು ರಾಜೀನಾಮೆ ನೀಡಿದ್ದು, ರಾಜೀನಾಮೆಯಿಂದ ತೆರವಾದ ಸಮಿತಿಯ ಸದಸ್ಯತ್ವ ಸ್ಥಾನಕ್ಕೆ ಉದಯ್ ಬಿ.ಗರುಡಾಚಾರ್ ಅವರನ್ನು ಸಭಾಧ್ಯಕ್ಷ ಯು.ಟಿ.ಖಾದರ್ ನೇಮಕ ಮಾಡಿದ್ದಾರೆ.

ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳ ನಿಯಮ 209ರ ಮೇರೆಗೆ ಸಮಿತಿಯ ಸದಸ್ಯರನ್ನಾಗಿ ಗರುಡಾಚಾರ್ ಅವರನ್ನು ಸಭಾಧ್ಯಕ್ಷರು ನಾಮ ನಿರ್ದೇಶನ ಮಾಡಿದ್ದಾರೆಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಸದಸ್ಯತ್ವಕ್ಕೆ ರಾಯರೆಡ್ಡಿ ರಾಜೀನಾಮೆ

RELATED ARTICLES

Latest News