ನವದೆಹಲಿ, ಸೆ.24- ಕೆನಡಾದಲ್ಲಿ ಖಲಿಸ್ತಾನ ಟೈಗರ್ ಫೋರ್ಸ್ ನ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಯಾವುದೇ ಸಂದರ್ಭದಲ್ಲೂ ಹತ್ಯೆ ಮಾಡಬಹುದು ಎಂದು ಅಲ್ಲಿನ ಸರ್ಕಾರದ ಅಮೆರಿಕದ ಗುಪ್ತಚರ ವಿಭಾಗದ ಅಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದರು.
ಹರ್ದೀಪ್ ಸಿಂಗ್ ನಿಜ್ಜರ್ ಮೇಲೆ ಕೆಲವರು ಕಣ್ಣಿಟ್ಟಿದ್ದಾರೆ.
ಆತನನ್ನು ಎದುರಾಳಿ ತಂಡಗಳು ಯಾವುದೇ ಸಂದರ್ಭದಲ್ಲೂ ಹತ್ಯೆ ಮಾಡಬಹುದು. ನಾವು ಇದನ್ನು ಖಚಿತವಾದ ಮಾಹಿತಿ ಮೇರೆಗೆ ಹೇಳುತ್ತಿದ್ದೇವೆ ಎಂದು ಯುಎಸ್ ಗುಪ್ತಚರ ವಿಭಾಗ ಕೆನಡಾಕ್ಕೆ ಸಲಹೆ ಕೊಟ್ಟಿತ್ತು.ಆದರೆ ಕೆನಡಾ ಸರ್ಕಾರ ಇದನ್ನು ನಿರ್ಲಕ್ಷಿಸಿದ್ದರಿಂದಲೇ ಹರ್ದೀಪ್ ಸಿಂಗ್ ನಿಜ್ಜರ್ ಭೀಕರವಾಗಿ ಹತ್ಯೆಗೀಡಾಗಿದ್ದಾರೆ. ಕೆನಡಾ ಸರ್ಕಾರದ ಪ್ರಮಾದವು ಇದೆ ಎಂದು ಗುಪ್ತಚರ ವಿಭಾಗ ಹೇಳಿದೆ.
ಭಾರತ-ಕೆನಡಾ ಬಿಕ್ಕಟ್ಟಿನಿಂದ ಅಂತರ ಕಾಪಾಡಿಕೊಂಡ ಅಮೆರಿಕ
ನ್ಯೂಯಾರ್ಕ್ ಟೈಮ್ಸ್ ಮಾಡಿರುವ ಸುದ್ದಿಯಂತೆ ಭಾರತದ ಏಜೆನ್ಸಿಗಳು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ನೇರವಾಗಿ ಶಾಮೀಲಾಗಿವೆಯೋ ಇಲ್ಲವೋ ಎಂಬುದು ತನಿಖೆಯಿಂದ ಗೊತ್ತಾಗುತ್ತದೆ. ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಬಂಧ ಹಾಳಾಗಬಾರದೆಂಬುದು ತಮ್ಮ ಉದ್ದೇಶವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ನೇರವಾಗಿ ಭಾಗಿಯಾಗಿರುವುದಕ್ಕೆ ಸಮರ್ಪಕವಾದ ದಾಖಲೆಗಳು ಇಲ್ಲ. ಕೆನಡಾ ಸರ್ಕಾರ ಯಾವ ಆಧಾರದ ಮೇಲೆ ಆರೋಪ ಮಾಡಿದೆ ಎಂಬುದು ನಮಗೂ ತಿಳಿದಿಲ್ಲ. ಎರಡು ರಾಷ್ಟ್ರಗಳ ನಡುವೆ ಪರಿಸ್ಥಿತಿಯನ್ನು ತಿಳಿಗೊಳಿಸಲು ನಾವು ಪ್ರಯತ್ನಿಸುತ್ತೇವೆ. ಯಾವುದೇ ರಾಷ್ಟ್ರ ಉದ್ವಿಗ್ನಗೊಳಿಸುವ ಕೆಲಸವನ್ನು ಮಾಡಬಾರದು ಎಂದು ಅಮೆರಿಕಾದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.