ವಾಷಿಂಗ್ಟನ್, ಏ. 20- ಪಾಕಿಸ್ತಾನದ ದೀರ್ಘಶ್ರೇಣಿಯ ಕ್ಷಿಪಣಿ ಕಾರ್ಯಕ್ರಮ ಸೇರಿದಂತೆ ಕ್ಷಿಪಣಿಗೆ ಅನ್ವಯಿಸುವ ವಸ್ತುಗಳನ್ನು ಪೂರೈಸಿದ್ದಕ್ಕಾಗಿ ಚೀನಾದ ಮೂರು ಕಂಪೆನಿಗಳು ಮತ್ತು ಬೆಲಾರಸ್ನ ಒಂದು ಕಂಪನಿಯ ಮೇಲೆ ಅಮೆರಿಕ ನಿಬರ್ಂಧ ವಿಧಿಸಿದೆ ಎಂದು ವಿದೇಶಾಂಗ ಇಲಾಖೆ ಪ್ರಕಟಿಸಿದೆ.
ಸಾಮೂಹಿಕ ವಿನಾಶದ ಶಸ್ತ್ರಸ್ತ್ರಗಳ ಪ್ರಸರಣ ಅಥವಾ ಅವುಗಳ ವಿತರಣಾ ವಿಧಾನಗಳಿಗೆ ಭೌತಿಕವಾಗಿ ಕೊಡುಗೆ ನೀಡಿದ ಅಥವಾ ಭೌತಿಕವಾಗಿ ಕೊಡುಗೆ ನೀಡುವ ಅಪಾಯ ಉಂಟುಮಾಡುವ ಚಟುವಟಿಕೆಗಳು ಅಥವಾ ವಹಿವಾಟುಗಳಲ್ಲಿ ತೊಡಗಿಸಿಕೊಂಡಿವೆ. ತಯಾರಿಕೆ ಸ್ವಾೀನಪಡಿಸಿಕೊಳ್ಳಲು, ಅಭಿವೃದ್ಧಿಪಡಿಸಲು ನೆರವಾಗಿದ್ದಕ್ಕೆ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ.
ಕಾಳಜಿಯ ಪ್ರಸರಣ ಚಟುವಟಿಕೆಗಳನ್ನು ಬೆಂಬಲಿಸುವ ಸಂಗ್ರಹಣೆ ಜಾಲಗಳನ್ನು ಅಡ್ಡಿಪಡಿಸಲು ಕ್ರಮ ತೆಗೆದುಕೊಳ್ಳುವ ಮೂಲಕ ಜಾಗತಿಕ ಪ್ರಸರಣ ರಹಿತ ಆಡಳಿತವನ್ನು ಬಲಪಡಿಸಲು ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಮಿಲ್ಲರ್ ಹೇಳಿದರು.