Thursday, May 2, 2024
Homeರಾಷ್ಟ್ರೀಯಅಂತಿಮ ಹಂತ ತಲುಪಿದ ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ

ಅಂತಿಮ ಹಂತ ತಲುಪಿದ ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ

ಉತ್ತರಕಾಶಿ,ನ.23- ನಿರ್ಮಾಣ ಹಂತದದಲ್ಲಿದ್ದ ಉತ್ತರಕಾಶಿ ಸುರಂಗ ದಿಢೀರ್ ಕುಸಿತ ಕಂಡ ಪರಿಣಾಮ ಅದರ ಅವಶೇಷಗಳಡಿ ಸಿಲುಕಿದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತರಲು ಕಳೆದ 11 ದಿನಗಳಿಂದ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಸಿಲುಕಿರುವ ಕಾರ್ಮಿಕರನ್ನು ಶೀಘ್ರವೇ ತಲುಪುವ ಪ್ರಯತ್ನಗಳು ಭರದಿಂದ ಸಾಗುತ್ತಿದ್ದು, ಕೊನೆಯ ಪೈಪ್‍ನ್ನು ಪ್ರವೇಶಿಸಿ ಸಿಕ್ಕಿಬಿದ್ದ ಕಾರ್ಮಿಕರನ್ನು ಅವಶೇಷಗಳ ಮೂಲಕ ತಳ್ಳುವ ಮಾರ್ಗವನ್ನು ಸಿದ್ಧಪಡಿಸಲಾಗಿದೆ.

ರಕ್ಷಣಾ ಕಾರ್ಯವನ್ನು ವೇಗಗೊಳಿಸಲು ಸಹಾಯ ಮಾಡಲು ದೆಹಲಿಯಿಂದ ಏಳು ತಜ್ಞರ ತಂಡವು ಸ್ಥಳಕ್ಕೆ ತಲುಪಿದೆ. ಈ ಮೂಲಕ ರಕ್ಷಣಾ ಕಾರ್ಯವನ್ನು ಮತ್ತಷ್ಟು ಸುಗುಮಗೊಳಿಸಲು ಭಾರೀ ಶ್ರಮ ವಹಿಸಲಾಗುತ್ತಿದೆ. ಒಳಗೆ ಸಿಲುಕಿರುವ 41 ಕಾರ್ಮಿಕರನ್ನು ತಲುಪಲು ಅವರು ಈಗ ಹೆಚ್ಚುವರಿ 12 ಮೀಟರ್ ಕೊರೆಯಬೇಕಿದೆ. ಕಾರ್ಮಿಕರು ಪೈಪ್ ಮೂಲಕ ಹೊರಬರುವುದರಿಂದ ಅವರಿಗೆ ತಕ್ಷಣದ ವೈದ್ಯಕೀಯ ಆರೈಕೆ ನೀಡಲು ಆರೋಗ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.

ಕಾರ್ಮಿಕರನ್ನು ಸ್ಥಳಾಂತರಿಸಿದ ನಂತರ ತಕ್ಷಣವೇ ವೈದ್ಯಕೀಯ ಸೇವೆಯನ್ನು ಒದಗಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ನಿಯಂತ್ರಣ ಕೊಠಡಿಯಲ್ಲಿ ಎಂಟು ಹಾಸಿಗೆಗಳ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ಸ್ಥಳದಲ್ಲಿ 15 ವೈದ್ಯರ ತಂಡವನ್ನು ನಿಯೋಜಿಸಲಾಗಿದೆ. ಆಂಬ್ಯುಲೆನ್ಸ್‍ಗಳು ಮತ್ತು ಹೆಲಿಕಾಪ್ಟರ್‍ಗಳು ತ್ವರಿತ ವೈದ್ಯಕೀಯ ಸಹಾಯವನ್ನು ಖಚಿತಪಡಿಸಿಕೊಳ್ಳಲು ಸಿದ್ಧವಾಗಿವೆ.

ಅವಶೇಷಗಳ ಮೂಲಕ 800 ಎಂಎಂ ವ್ಯಾಸದ ಉಕ್ಕಿನ ಪೈಪ್‍ಗಳನ್ನು ಕೊರೆಯಲು ತಡರಾತ್ರಿ ಕೆಲವು ಕಬ್ಬಿಣದ ರಾಡ್‍ಗಳು ಆಗರ್ ಯಂತ್ರಕ್ಕೆ ಅಡ್ಡಿಪಡಿಸಿದಾಗ ಸಣ್ಣ ಅಡಚಣೆಯಾಗಿದೆ. ಕಳೆದ ಒಂದು ಗಂಟೆಯಲ್ಲಿ ಆರು ಮೀಟರ್ ಉದ್ದ ಕೊರೆಯಲಾಗಿದೆ ಎಂದು ನಿಮಗೆ ತಿಳಿಸಲು ನಮಗೆ ತುಂಬಾ ಸಂತೋಷವಾಗಿದೆ.

ಆಶಾದಾಯಕವಾಗಿ, ಮುಂದಿನ ಎರಡು ಮೂರು ಗಂಟೆಗಳು ಮುಂದಿನ ಕಾರ್ಯ ನಡೆಸಲಾಗುವುದು, ನಾವು ರಾತ್ರಿ 8 ಗಂಟೆಗೆ ಮತ್ತೆ ಒಟ್ಟುಗೂಡಿದಾಗ, ನಿಮ್ಮೊಂದಿಗೆ ಹಂಚಿಕೊಳ್ಳಲು ನಮಗೆ ಅಂತಹದ್ದೇ ಒಳ್ಳೆಯ ಸುದ್ದಿ ಇದೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರಧಾನ ಮಂತ್ರಿ ಕಚೇರಿಯ ಮಾಜಿ ಸಲಹೆಗಾರರಾದ ಭಾಸ್ಕರ್ ಖುಲ್ಬೆ ಹೇಳಿದ್ದಾರೆ.

ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ ವೇಗವನ್ನು ಪಡೆದುಕೊಂಡಿದೆ. ಅಮೆರಿಕದ ಆಗರ್ ಯಂತ್ರವು ಕುಸಿತಗೊಂಡ ಸುರಂಗದ ಅವಶೇಷಗಳ ಒಳಗೆ 45 ಮೀಟರ್ಗಳಷ್ಟು ದೂರ ಕ್ರಮಿಸಿದೆ. ಒಳಗೆ ಸಿಲುಕಿರುವ ಕಾರ್ಮಿಕರನ್ನು ತಲುಪಲು 6 ಮೀಟರ್ ಉದ್ದದ 800 ಎಂಎಂ ವ್ಯಾಸದ ಎರಡು ಉಕ್ಕಿನ ಪೈಪ್‍ಗಳನ್ನು ಹಾಕಲು ಸುಮಾರು 12 ಮೀಟರ್‍ಗಳಷ್ಟು ಅಗೆಯಬೇಕಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

ಸಿಲುಕಿರುವವರು ಅದೃಷ್ಟವಶಾತ್ ಜೀವಂತವಾಗಿದ್ದಾರೆ. ಅವರಿಗೆ ಸೂಕ್ತ ಆಹಾರ ಒದಗಿಸಲಾಗಿದೆ. ರಕ್ಷಣೆಯ ಬಳಿಕ ಅವರ ಆರೈಕೆಗಾಗಿ 15 ವೈದ್ಯರ ತಂಡವನ್ನು ನಿಯೋಜಿಸಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ. ತಕ್ಷಣದ ವೈದ್ಯಕೀಯ ಆರೈಕೆಗಾಗಿ ಎಂಟು ಹಾಸಿಗೆಗಳನ್ನು ಒಳಗೊಂಡಿರುವ ತಾತ್ಕಾಲಿಕ ಆಸ್ಪತ್ರೆಯನ್ನು ಸಹ ಸ್ಥಳದಲ್ಲಿ ಸ್ಥಾಪಿಸಲಾಗಿದೆ. ಹಲವಾರು ಅಂಬುಲೆನ್ಸ್ಗಳು ಮತ್ತು ಹೆಲಿಕಾಪ್ಟರ್‍ನ್ನು ಸ್ಥಳದಲ್ಲಿ ಇರಿಸಲಾಗಿದೆ.

ಅಲ್ಲದೇ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳು ಹಾಗೂ ಏಮ್ಸ್, ಋಷಿಕೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ರಕ್ಷಣಾ ಕಾರ್ಯಾಚರಣೆಯ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಶಿಲಾಖಂಡ ರಾಶಿಗಳಿಗೆ ಅಡ್ಡಲಾಗಿ ಕೊರೆಯುವ ಮೂಲಕ 44 ಮೀಟರ್‍ಗಳ ಪೈಪ್‍ಗಳನ್ನು ಸೇರಿಸಲಾಗಿದೆ. ಆದರೆ ಎನ್‍ಡಿಆರ್‍ಎಫ್ ಸಿಬ್ಬಂದಿ ಅದರೊಳಗೆ ಯಂತ್ರವನ್ನು ಕತ್ತರಿಸಲು ಸಾಧ್ಯವಾಗದ ಉಕ್ಕಿನ ರಾಡ್‍ಗಳನ್ನು ಕಂಡುಕೊಂಡಿದ್ದಾರೆ ಎಂದು ಪಾರುಗಾಣಿಕಾ ಅಕಾರಿ ಹರ್ಪಾಲ್ ಸಿಂಗ್ ತಿಳಿಸಿದ್ದಾರೆ.

ಸಿಎಂ ಧಾಮಿ ಭರವಸೆ:
ಸಿಕ್ಕಿಬಿದ್ದಿರುವ 41 ಕಾರ್ಮಿಕರನ್ನು ಬಿಡುಗಡೆ ಮಾಡಲು ನಡೆಯುತ್ತಿರುವ ತೀವ್ರವಾದ ರಕ್ಷಣಾ ಕಾರ್ಯಾಚರಣೆಯಲ್ಲಿ, ಎಲ್ಲಾ ಸಂತ್ರಸ್ತರನ್ನು ಶೀಘ್ರದಲ್ಲೇ ಸುರಕ್ಷಿತವಾಗಿ ರಕ್ಷಿಸಲಾಗುವುದು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆಶಾವಾದ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳೊಂದಿಗೆ ನಿರಂತರ ಸಂವಹನದೊಂದಿಗೆ ಸಿಲ್ಕ್ಯಾರಾ ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ ವೇಗವಾಗಿ ಪ್ರಗತಿಯಲ್ಲಿದೆ. ಯಂತ್ರವನ್ನು ಮರುಪ್ರಾರಂಭಿಸುವ ಮೂಲಕ 45 ಮೀಟರ್ ಆಳದವರೆಗೆ ಕೊರೆಯುವುದು ಪೂರ್ಣಗೊಂಡಿದೆ. ಕೇಂದ್ರದಿಂದ ಪಡೆದ ಉಪಕರಣಗಳನ್ನು ಬಳಸಿಕೊಂಡು ಲಂಬ ಮತ್ತು ಅಡ್ಡ ಕೊರೆಯುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಮುಂಬೈನ ವಸತಿ ಕಟ್ಟಡದಲ್ಲಿ ಬೆಂಕಿ, 135 ಜನರ ರಕ್ಷಣೆ

ಸರ್ಕಾರ ಎಸ್‍ಡಿಆರ್‍ಎಫ್ ಮತ್ತು ಎನ್‍ಡಿಆರ್‍ಎಫ್ ನೆರವಿನೊಂದಿಗೆ ಸಿಕ್ಕಿಬಿದ್ದ ಕಾರ್ಮಿಕರಿಗಾಗಿ ಆಡಿಯೋ ಸಂವಹನ ಸೆಟಪ್‍ನ್ನು ಸಿದ್ಧಪಡಿಸಲಾಗಿದೆ. ಪ್ರತಿಯೊಬ್ಬರೊಂದಿಗೆ ವೈಯಕ್ತಿಕ ಸಂಭಾಷಣೆಗಳನ್ನು ನಡೆಸಲಾಗುತ್ತಿದೆ. ಕಾರ್ಮಿಕರ ಮಾನಸಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡಿ, ಮನೋವಿಜ್ಞಾನಿಗಳೊಂದಿಗೆ ಚರ್ಚೆಯೂ ನಡೆಯುತ್ತಿದೆ. ಕಾರ್ಮಿಕರ ಆರೋಗ್ಯ ಮತ್ತು ಯೋಗಕ್ಷೇಮವು ನಮ್ಮ ಪ್ರಮುಖ ಆದ್ಯತೆಗಳಾಗಿವೆ ಎಂದು ಹೇಳಿದ್ದಾರೆ.

RELATED ARTICLES

Latest News