Thursday, February 22, 2024
Homeರಾಜ್ಯಕಾರಿಗೆ ಪಂಚರ್ ಹಾಕುವಾಗ ಅಪರಿಚಿತ ವಾಹನ ಡಿಕ್ಕಿ : ವಕೀಲ ಸೇರಿ ಇಬ್ಬರ ಸಾವು

ಕಾರಿಗೆ ಪಂಚರ್ ಹಾಕುವಾಗ ಅಪರಿಚಿತ ವಾಹನ ಡಿಕ್ಕಿ : ವಕೀಲ ಸೇರಿ ಇಬ್ಬರ ಸಾವು

ಶಿರಾ ,ಜ.15- ಪಂಚರ್ ಆಗಿದ್ದ ಕಾರನ್ನು ರಿಪೇರಿ ಮಾಡುವಾಗ ಹಿಂದಿನಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-4ರ ಕುಂಟೇಗೌಡನಹಳ್ಳಿ ಗೇಟ್ ಬಳಿ ನಡೆದಿದೆ.

ಬೆಂಗಳೂರಿನ ಆವಲಹಳ್ಳಿ ನಿವಾಸಿ ವಕೀಲರಾದ ಮಹೇಶ್(40),ಮತ್ತು ವಕೀಲರ ಸಹಕಾರ ಬ್ಯಾಂಕ್ ನ ಉದ್ಯೋಗಿ ಉಮೇಶ್(40) ಮೃತ ದುರ್ದೈವಿಗಳು ಮಹೇಶ್‍ಮತ್ತು ಉಮೇಶ್ ಅವರು ಬೆಂಗಳೂರಿನಿಂದ ತಮ್ಮ ಹುಂಡೈ ಐ 10 ಕಾರಿನಲ್ಲಿ ಹರಿಹರಕ್ಕೆ ಹೋಗುತ್ತಿದ್ದಾಗ ಮಧ್ಯರಾತ್ರಿ 12.30ರ ಸಂದರ್ಭದಲ್ಲಿ ತುಮಕೂರು ದಾಟಿ ಶಿರಾ ಕಡೆಗೆ ಬರುವಾಗ ಕಾರಿನ ಟೈರ್ ಪಂಚರ್‍ಆಗಿದೆ.

ರಾಮನ ವಿರೋಧಿ ಕಾಂಗ್ರೆಸ್ ಬೆಲೆ ತೆರಬೇಕಾಗುತ್ತದೆ : ಮೋಹನ್ ಯಾದವ್

ನಂತರ ಕಾರನ್ನು ರಸ್ತೆ ಪಕ್ಕ ನಿಲ್ಲಿಸಿ ಪಂಚರ್ ಹಾಕುತ್ತಿರುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅವರ ಮೇಲೆ ಹರಿದಿದೆ ಇಬ್ಬರು ಸ್ತಳದಲ್ಲೇ ಸಾವನ್ನಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆ ಈ ಭೀಕರ ಅಪಘಾತ ಸಂಭವಿಸಿದೆ.ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತವೆಸಗಿ ಪರಾರಿಯಾಗಿರುವ ವಾಹನ ಚಾಲಕನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

RELATED ARTICLES

Latest News