ಲಂಡನ್, ಮೇ 28- ಬ್ರಿಟನ್‌ನ ಭಾರತೀಯ ಮೂಲದ ಹಿರಿಯ ಸಂಸತ್ ಸದಸ್ಯ ಮತ್ತು ಭಾರತ- ಬ್ರಿಟನ್ ನಿಕಟ ಸಂಬಂಧಗಳ ಪ್ರಬಲ ಪ್ರತಿಪಾದಕ ವೀರೇಂದ್ರ ಶರ್ಮಾ ಅವರು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಮುಂಬರುವ ಜುಲೈ 4ರಂದು ನಡೆಯಲಿರುವ ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದಾರೆ.
77 ವರ್ಷದ ಲೇಬರ್ ಪಾರ್ಟಿ ಸಂಸದ ಶರ್ಮಾ ಅವರು ಪಂಜಾಬಿ ಸಮುದಾಯದ ಬಾಹುಳ್ಯವಿರುವ ಈಲಿಂಗ್ ಸೌತ್ ಹಾಲ್ ಕ್ಷೇತ್ರದಿಂದ 2007ರ ಉಪಚುನಾವಣೆಯಲ್ಲಿ ಗೆದ್ದ ಬಳಿಕ ದಾಖಲೆಯ ನಾಲ್ಕು ಸಾರ್ವತ್ರಿಕ ಚುನಾವಣೆಗಳಲ್ಲಿ ಜಯಗಳಿಸಿದ್ದಾರೆ. ಇದು ಓರ್ವ ಅಜ್ಜನಾಗಿ ನನ್ನ ಜೀವನದ ಹೊಸ ಅಧ್ಯಾಯದ ಸಮಯ ಎಂದು ಅವರು ಹೇಳಿದ್ದಾರೆ.
ಪಂಜಾಬ್‌ನ ಮಂಧಾಲಿ ಗ್ರಾಮದಲ್ಲಿ ಜನಿಸಿದ ಶರ್ಮಾ 1968ರಲ್ಲಿ ಬ್ರಿಟನ್‌ಗೆ ತೆರಳಿ ಬಸ್ ಕಂಡಕ್ಟರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದರು. ಬಳಿಕ ಲಂಡನ್ ಸ್ಕೂಲ್ ಆಫ್ ಎಕನಾಮಿಕ್‌್ಸನಲ್ಲಿ ಟ್ರೇಡ್ ಯೂನಿಯನ್ ವಿದ್ಯಾರ್ಥಿ ವೇತನ ಪಡೆದು ಅಧ್ಯಯನ ಮಾಡಿದರು. ಬಳಿಕ ಅವರ ಕಾಲದ ಪ್ರಮುಖ ಕಾರ್ಮಿಕ ಮುಖಂಡನಾಗಿ ರೂಪುಗೊಂಡರು.
ಓರ್ವ ಬ್ರಿಟಿಷ್ ಭಾರತೀಯನಾಗಿ ಮತ್ತು ಓರ್ವ ಹಿಂದೂ ಆಗಿ, ಲೇಬರ್ ಸದಸ್ಯನಾಗಿ ಕೌನ್ಸಿಲ್‌ರ್ ಆಗಿ, ಸಂಸದರನಾಗಿ ನಾನು ಎಂದೂ ತತ್ವ ಸಿದ್ಧಾಂತಗಳಲ್ಲಿ ರಾಜಿ ಮಾಡಿಕೊಂಡಿಲ್ಲ. ಕಳೆದ 50 ವರ್ಷಗಳಲ್ಲಿ ನಾನು ಲೇಬರ್ ಪಕ್ಷಕ್ಕೆ ಒಂದಲ್ಲ ಒಂದು ರೂಪದಲ್ಲಿ ಸೇವೆ ಸಲ್ಲಿಸಿದ್ದೇನೆ. ಇದು ನನ್ನ ಜೀವನದ ಮತ್ತೊಂದು ಹೊಸ ಅಧ್ಯಾಯ ಪ್ರಾರಂಭಿಸಲು ಸುಸಮಯ ಎಂದು ಭಾವಿಸಿದ್ದೇನೆ.
ನಾನು ಮುಂದಿನ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂಬುದನ್ನು ನಿಮ ಗಮನಕ್ಕೆ ತರಬಯಸುತ್ತೇನೆ. ಆದರೆ ಇದು ಲೇಬರ್ ಪಕ್ಷ ಗೆಲ್ಲಬೇಕೆಂಬ ನನ್ನ ಅಪೇಕ್ಷೆಯನ್ನು ದುರ್ಬಲಗೊಳಿಸುವುದಿಲ್ಲ. ನಾವು ಗೆದ್ದೇಗೆಲ್ಲುವೆನೆಂಬ ಖಾತರಿ ನನಗಿದೆ ಎಂದು ಸೋಮವಾರ ಸಂಜೆ ಲೇಬರ್ ಪಕ್ಷಕ್ಕೆ ಬರೆದಿರುವ ಪತ್ರದಲ್ಲಿ ಶರ್ಮಾ ನಿವೇದಿಸಿಕೊಂಡಿದ್ದಾರೆ.
ನಾನು ಲೇಬರ್: ಲೇಬರ್ ಪಕ್ಷಕ್ಕೆ ನನ್ನ ಬೆಂಬಲವನ್ನು ಮುಂದುವರೆಸುತ್ತೇನೆ. ಲೇಬರ್ ಪಕ್ಷದ ಯೋಜನೆಗಳ ಭಾಗವಾಗಿ ನಾನು ಮುಂದುವರೆಯಲಿದ್ದೇನೆ ಎಂಬ ಭರವಸೆ ನನಗಿದೆ. ಆದರೆ ಹೌಸ್ ಆಫ್ ಕಾಮನ್‌್ಸನ ಸದಸ್ಯನಾಗಿ ನಾನು ಮುದುವರಿಯುವುದಿಲ್ಲ ಎಂದು ಅವರು ತಿಳಿಸಿದ್ದಾರೆ.