Thursday, December 12, 2024
Homeರಾಜ್ಯಸೋಲು-ಗೆಲುವು ಸಾಮಾನ್ಯ, ಕಾರ್ಯಕರ್ತರು ಭಾವನಾತ್ಮಕವಾಗಿ ಉದ್ವೇಗಗೊಳ್ಳಬೇಡಿ : ನಿಖಿಲ್‌ ಮನವಿ

ಸೋಲು-ಗೆಲುವು ಸಾಮಾನ್ಯ, ಕಾರ್ಯಕರ್ತರು ಭಾವನಾತ್ಮಕವಾಗಿ ಉದ್ವೇಗಗೊಳ್ಳಬೇಡಿ : ನಿಖಿಲ್‌ ಮನವಿ

Victory and defeat are normal, activists should not get emotional: Nikhil appeals

ಬೆಂಗಳೂರು,ನ.24- ರಾಜಕೀಯದಲ್ಲಿ ಸೋಲು-ಗೆಲುವು ಸಾಮಾನ್ಯ. ಕಾರ್ಯಕರ್ತರು ಭಾವನಾತ್ಮಕವಾಗಿ ಉದ್ವೇಗಗೊಳ್ಳದೆ ಸಹಜತೆಯಿಂದ ಸ್ವೀಕರಿಸುವಂತೆ ಜೆಡಿಎಸ್‌‍ನ ಯುವಘಟಕದ ರಾಜ್ಯಾಧ್ಯಕ್ಷ ಹಾಗೂ ಚನ್ನಪಟ್ಟಣದ ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್‌ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಡ್ಲೂರು ಭಾಗದ ಅಭಿ ಎಂದು ಕರೆಯಲ್ಪಡುವ ಮಂಜುನಾಥ್‌ ಎಂಬ ಕಾರ್ಯಕರ್ತರು ಆತಹತ್ಯೆಗೆ ಯತ್ನಿಸಿದ್ದಾರೆ ಎಂದು ನಮ ಕಾರ್ಯಕರ್ತರೊಬ್ಬರು ಬೆಳಿಗ್ಗೆ ಮಾಹಿತಿ ನೀಡಿದರು. ದಯವಿಟ್ಟು ಯಾರೂ ಈ ರೀತಿಯ ಸನ್ನಿವೇಶವನ್ನು ಸೃಷ್ಟಿಸಬೇಡಿ ಎಂದು ಮನವಿ ಮಾಡಿದರು.

ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ನಿಮ ಕುಟುಂಬವನ್ನು ಇಂತಹ ಪರಿಸ್ಥಿತಿಗೆ ದೂಡಬೇಡಿ ಎಂದರು.ಮಾಜಿ ಪ್ರಧಾನಿ ದೇವೇಗೌಡರು ಅಧಿಕಾರಕ್ಕಾಗಲೀ, ವೈಯಕ್ತಿಕ ಹಿತಾಸಕ್ತಿಗಾಗಲೀ ರಾಜಕಾರಣ ಮಾಡುತ್ತಿಲ್ಲ. 92 ವರ್ಷದ ಮುತ್ಸದ್ದಿ ದೇವೇಗೌಡರ ಮಾರ್ಗದರ್ಶನ ದೇಶ ಕಟ್ಟಲು ಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅನೇಕ ಬಾರಿ ಹೇಳಿದ್ದಾರೆ.

62 ವರ್ಷದ ಸಾರ್ವಜನಿಕ ಜೀವನದಲ್ಲಿ ದೇವೇಗೌಡರು ಯಾವುದೇ ಪ್ರತಿಫಲ ಅಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಅವರು ಜೀವಿತಾವಧಿಯಲ್ಲಿ ಕೇವಲ ಮೂರೂವರೆ ವರ್ಷ ಮಾತ್ರ ಅಧಿಕಾರ ನಡೆಸಿದರು. ದೇಶದ ಅಭಿವೃದ್ಧಿಗಾಗಿ ಸದಾ ಕೆಲಸ ಮಾಡುತ್ತಿದ್ದಾರೆ ಎಂದು ಸಿ.ಪಿ.ಯೋಗೇಶ್ವರ್‌ ಹೇಳಿಕೆಗೆ ತಿರುಗೇಟು ನೀಡಿದ್ದರು.

ಚನ್ನಪಟ್ಟಣದಲ್ಲಿ ಸಾಂಪ್ರದಾಯಿಕ ಮತಗಳ ಪ್ರಮಾಣ ಕನಿಷ್ಠ 60 ಸಾವಿರ ದಾಟಿತ್ತು. ಉಪಚುನಾವಣೆಯಲ್ಲಿ 80 ಸಾವಿರ ಮತಗಳು ನಮಗೆ ಬಂದಿವೆ ಎಂದರೆ ಪಕ್ಷದ ಅಭಿಮಾನಿಗಳು ನಮ ಕೈ ಬಿಟ್ಟಿಲ್ಲ ಎಂದು ಹೇಳಿದರು.

ಒಂದು ಸಮುದಾಯಕ್ಕೆ ದೇವೇಗೌಡರು ಮೀಸಲಾತಿಯನ್ನು ಕಲ್ಪಿಸಿದ್ದರು. ಆ ಸಮುದಾಯವನ್ನು ಕಡೆಗಣಿಸಬಾರದು ಎಂಬ ಕಾರಣಕ್ಕೆ ಉಪಚುನಾವಣೆಯಲ್ಲಿ ಅಂತಿಮ ಪರೀಕ್ಷೆ ಮಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಪ್ರಯತ್ನ ಮಾಡಿದ್ದೆವು. ಆದರೆ ನಮ ಅವಶ್ಯಕತೆ ಇಲ್ಲ ಎಂದು ಆ ಸಮುದಾಯ ಸ್ಪಷ್ಟ ಸಂದೇಶ ರವಾನೆ ಮಾಡಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಬೇರೆ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

RELATED ARTICLES

Latest News