Thursday, December 5, 2024
Homeರಾಜಕೀಯ | Politicsಬೈಎಲೆಕ್ಷನ್ ಗೆಲುವಿನ ಜೋಶ್​ನಲ್ಲಿ ಆಡಳಿತಪಕ್ಷ : ಅಧಿವೇಶನದಲ್ಲಿ ವಿಪಕ್ಷಗಳಿಗೆ ಟಕ್ಕರ್ ಕೊಡಲು ಸಿದ್ಧತೆ

ಬೈಎಲೆಕ್ಷನ್ ಗೆಲುವಿನ ಜೋಶ್​ನಲ್ಲಿ ಆಡಳಿತಪಕ್ಷ : ಅಧಿವೇಶನದಲ್ಲಿ ವಿಪಕ್ಷಗಳಿಗೆ ಟಕ್ಕರ್ ಕೊಡಲು ಸಿದ್ಧತೆ

Ruling Party to face opposition in Belagavi Winter Session

ಬೆಂಗಳೂರು,ನ.24- ಉಪಚುನಾವಣೆಯ ಫಲಿತಾಂಶ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌‍ ಪಕ್ಷಕ್ಕೆ ಆನೆಬಲ ತಂದುಕೊಟ್ಟಿದ್ದು, ಬೆಳಗಾವಿ ವಿಧಾನಮಂಡಲದ ಅಧಿವೇಶನದಲ್ಲಿ ವಿರೋಧಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡುವ ಆತಸ್ಥೈರ್ಯವನ್ನು ಹೆಚ್ಚಿಸಿದೆ.

ಇತ್ತೀಚೆಗೆ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌‍ ಸರ್ಕಾರದ ವಿರುದ್ಧ ಒಂದಲ್ಲಾ ಒಂದು ಆರೋಪಗಳನ್ನಿಟ್ಟುಕೊಂಡು ಮುಗಿ ಬೀಳುತ್ತಲೇ ಇವೆ. ಆರಂಭದಲ್ಲಿ ಕಾಮಗಾರಿಯಲ್ಲಿ ಕಮಿಷನ್‌ ಪಡೆದ ಆರೋಪವನ್ನು ಉಯ್ಲೆಬ್ಬಿಸಿದ್ದವು. ಅನಂತರ ಕೆಲ ಅಧಿಕಾರಿಗಳ ಆತಹತ್ಯೆ ಪ್ರಕರಣಗಳು ಸರ್ಕಾರವನ್ನು ಮುಜುಗರ ಉಂಟುಮಾಡಿತ್ತು.

ಇತ್ತೀಚಿನ ದಿನಗಳಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ, ವಕ್‌್ಫ ಬೋರ್ಡ್‌ನಿಂದ ಭೂಮಿ ಕಬಳಿಕೆಯ ಪ್ರಯತ್ನ ಎಂಬ ಆರೋಪಗಳು ಭಾರಿ ಸದ್ದು ಮಾಡಿದ್ದವು. ಇದನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಮಾಡಲು ಶತಪ್ರಯತ್ನಗಳು ನಡೆದಿದ್ದವು.

ರಾಜ್ಯ ರಾಜಕೀಯದಲ್ಲಿ ಮಹತ್ವದ ಅಂಶವೆಂದರೆ ಜನಪ್ರಿಯ ನಾಯಕರಾಗಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತೇಜೋವಧೆ ಮಾಡಲು ಯತ್ನಿಸಿದ ವ್ಯಕ್ತಿಗಳು ಮತ್ತು ಪಕ್ಷಗಳು ಧೂಳೀಪಟವಾಗಿರುವ ಹಲವು ಪ್ರಸಂಗಗಳಿವೆ.

ಇತ್ತೀಚಿನ ದಿನಗಳಲ್ಲಿ ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವೈಯಕ್ತಿಕ ತೇಜೋವಧೆಗೆ ಸತತ ಪ್ರಯತ್ನ ನಡೆದಿತ್ತು. ಇದಕ್ಕೆ ತಕ್ಕ ಪ್ರತ್ಯುತ್ತರ ಎಂಬಂತೆ ಉಪಚುನಾವಣೆಯ ಮೂರೂ ಕ್ಷೇತ್ರಗಳಲ್ಲೂ ಮತದಾರರು ಕಾಂಗ್ರೆಸ್‌‍ ಪಕ್ಷವನ್ನು ಗೆಲ್ಲಿಸುವ ಮೂಲಕ ವಿರೋಧಪಕ್ಷಗಳ ಜಂಗಾಬಲವನ್ನೇ ಹುದುಗುವಂತೆ ಮಾಡಿದೆ.

ಬಹುತೇಕ ಶಿಗ್ಗಾಂವಿ ಬಿಜೆಪಿಯ ಪಾಲು ಎನ್ನುವ ಸನ್ನಿವೇಶವಿತ್ತು. ಅಲ್ಲೂ ಕೂಡ ಕಾಂಗ್ರೆಸ್‌‍ ಪಕ್ಷ ಗೆಲ್ಲುವ ಮೂಲಕ ಆಡಳಿತಾರೂಢ ಸರ್ಕಾರಕ್ಕೆ ಹೆಚ್ಚಿನ ಬಲ ತಂದುಕೊಟ್ಟಿದೆ. ಹಳೆ ಮೈಸೂರು ಭಾಗ ಜೆಡಿಎಸ್‌‍ನ ಭದ್ರಕೋಟೆ ಎಂಬ ಸಾಂಪ್ರದಾಯಿಕ ಅಭಿಪ್ರಾಯಕ್ಕೆ ಉಪಚುನಾವಣೆಯ ಫಲಿತಾಂಶ ಕೊಡಲಿ ಪೆಟ್ಟು ನೀಡಿದೆ.

ಬಳ್ಳಾರಿಯಲ್ಲಿ ಗಣಿದಣಿಗಳು ಮತ್ತು ಬಿಜೆಪಿಯ ಪ್ರಮುಖ ನಾಯಕರು ನಡೆಸಿದ ಗರಿಷ್ಠ ಮಟ್ಟದ ಪ್ರಯತ್ನಗಳು ವ್ಯರ್ಥವಾಗಿವೆ. ಇದೇ ಫಲಿತಾಂಶವನ್ನು ಆಧರಿಸಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆಯೇ ವಿರೋಧಪಕ್ಷಗಳಿಗೆ ತಕ್ಕ ಪ್ರತ್ಯುತ್ತರ ನೀಡಿ ಆಗಿದೆ.

ಬಿಜೆಪಿ ನಾಯಕರು ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ ಎಂಬ ಸಾಫಾಸೀದಾ ಅಭಿಪ್ರಾಯದ ಮೂಲಕ ಸರ್ಕಾರದ ವಿರುದ್ಧ ಮತ್ತೆ ಮುಗಿಬೀಳಲು ತಯಾರಿ ನಡೆಸಿವೆ.
ಮುಂದಿನ ತಿಂಗಳು ಬೆಳಗಾವಿಯಲ್ಲಿ ನಡೆಯಲಿರುವ ಅಧೀವೇಶನ ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಮುಖಾಮುಖಿ ವೇದಿಕೆಯಾಗಲಿದೆ. ಕಳೆದ ಅಧಿವೇಶನದಿಂದೀಚೆಗೆ ನಡೆದಿರುವ ಹಲವು ವಿಚಾರಗಳು ಪ್ರಸ್ತಾಪವಾಗಲಿವೆ. ವಿರೋಧಪಕ್ಷಗಳು ಈವರೆಗೂ ಲಭ್ಯವಿರುವ ಮಾಹಿತಿ ಹಾಗೂ ದಾಖಲಾತಿಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಮುಜುಗರಕ್ಕೀಡು ಮಾಡಲು ತಯಾರಿ ನಡೆಸಿವೆ.

ಇದಕ್ಕೆ ಉಪಚುನಾವಣೆಯ ಗೆಲುವಿನ ಅಸ್ತ್ರವನ್ನಿಟ್ಟುಕೊಂಡು ಕಾಂಗ್ರೆಸ್‌‍ ಪಕ್ಷ ಎದುರೇಟು ನೀಡಲು ಸಿದ್ಧಗೊಳ್ಳುತ್ತಿದೆ.ರಾಜ್ಯ ರಾಜಕಾರಣದಲ್ಲಿ ಕಳೆದ ವಿಧಾನಸಭಾ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣಾ ಬಳಿಕ ನಡೆದ ಈ ಉಪಚುನಾವಣೆ ವಿರೋಧಪಕ್ಷಗಳ ನಾಯಕತ್ವದ ಕೊರತೆಯನ್ನು ಎತ್ತಿ ತೋರಿಸಿದೆ.

ಕಾಂಗ್ರೆಸ್‌‍ ಪಕ್ಷದಲ್ಲಿ ನಾಯಕತ್ವದಲ್ಲಿ ಬಿರುಕಿದೆ. ತುಷ್ಠೀಕರಣವೇ ಬಂಡವಾಳ ಎಂಬೆಲ್ಲಾ ಹಲವು ರೀತಿಯ ವ್ಯಾಖ್ಯಾನಗಳ ನಡುವೆಯೂ ಉಪಚುನಾವಣೆಯ ಗೆಲುವು ವಿಪಕ್ಷಗಳಿಗೆ ಉತ್ತರ ನೀಡಿದಂತಿದ್ದು, ಕಾಂಗ್ರೆಸ್‌‍ ನಾಯಕರು ಗೆಲುವಿನ ಹುಮಸ್ಸಿನಲ್ಲಿ ತೇಲುತ್ತಿದ್ದಾರೆ.

RELATED ARTICLES

Latest News