Thursday, September 19, 2024
Homeಅಂತಾರಾಷ್ಟ್ರೀಯ | Internationalವಿನಯ್‌ ಮೋಹನ್‌ ಕ್ವಾತ್ರಾ ಅಮೆರಿಕಕ್ಕೆ ಭಾರತದ ರಾಯಭಾರಿ

ವಿನಯ್‌ ಮೋಹನ್‌ ಕ್ವಾತ್ರಾ ಅಮೆರಿಕಕ್ಕೆ ಭಾರತದ ರಾಯಭಾರಿ

ವಾಷಿಂಗ್ಟನ್‌,ಆ.13- ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ವಿನಯ್‌ ಮೋಹನ್‌ ಕ್ವಾತ್ರಾ ಅಧಿಕಾರ ಸ್ವೀಕರಿಸಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ.61 ವರ್ಷ ವಯಸ್ಸಿನ ಕ್ವಾತ್ರಾ ಅವರು ಇತ್ತೀಚಿನವರೆಗೂ ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು.

ಇದಕ್ಕೂ ಮುನ್ನ ಕ್ವಾತ್ರಾ ಅವರು ಫ್ರಾನ್ಸ್ ಮತ್ತು ನೇಪಾಳಕ್ಕೆ ಭಾರತದ ರಾಯಭಾರಿಯಾಗಿದ್ದರು, ಅನಂತರ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಕಳೆದ ಜುಲೈ 14 ರಂದು ವಿದೇಶಾಂಗ ಸೇವೆಯಿಂದ ನಿವೃತ್ತರಾಗಿದ್ದರು.

ಕ್ವಾತ್ರಾ ಅವರು ತರಂಜಿತ್‌ ಸಿಂಗ್‌ ಸಂಧು ಅವರ ಉತ್ತರಾಧಿಕಾರಿಯಾಗಿದ್ದಾರೆ. ಈ ವರ್ಷಾರಂಭದಲ್ಲಿ ವಿದೇಶಿ ಸೇವೆಯಿಂದ ನಿವೃತ್ತರಾದ ಕ್ವಾತ್ರಾ 2020 ರಿಂದ 2024ರ ಅವಧಿಗೆ ಯುಎಸ್‌‍ನಲ್ಲಿ ಭಾರತದ ಉನ್ನತ ರಾಜತಾಂತ್ರಿಕರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಅಮೆರಿಕದಲ್ಲಿ ಭಾರತದ ನೂತನ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಈ ನಡುವೆ ಅಮೆರಿಕಕ್ಕೆ ಭಾರತದ ಹೊಸ ರಾಯಭಾರಿಯಾಗಿ ಕ್ವಾತ್ರಾ ಅವರನ್ನು ಸ್ವಾಗತಿಸಲು ನಮಗೆ ಸಂತೋಷವಾಗಿದೆ. ನಾವೆಲ್ಲರೂ (ಭಾರತೀಯ ರಾಯಭಾರ ಕಚೇರಿಯಲ್ಲಿ) ಅವರ ನಾಯಕತ್ವದಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಎಂದು ಚಾರ್ಜ್‌ ಡಿ ಅೇರ್ಸ್‌ ಶ್ರೀಪ್ರಿಯಾ ರಂಗನಾಥನ್‌ ಎಕ್ಸ್ಸ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಹೊಸ ಭಾರತೀಯ ರಾಯಭಾರಿಯನ್ನು ಸ್ವಾಗತಿಸಲು ಗ್ರೇಟರ್‌ ವಾಷಿಂಗ್ಟನ್‌ ಡಿಸಿ ಪ್ರದೇಶದ ಪ್ರಖ್ಯಾತ ಭಾರತೀಯ ಅಮೆರಿಕನ್ನರ ಗುಂಪು ಡಲ್ಲಾಸ್‌‍ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಮಾಯಿಸಿತ್ತು. ಆದರೆ, ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ.

RELATED ARTICLES

Latest News