Tuesday, May 7, 2024
Homeಕ್ರೀಡಾ ಸುದ್ದಿಕೊಹ್ಲಿ ಟೀಂ ಇಂಡಿಯಾದ 6ನೇ ಬೌಲರ್..?

ಕೊಹ್ಲಿ ಟೀಂ ಇಂಡಿಯಾದ 6ನೇ ಬೌಲರ್..?

ಬೆಂಗಳೂರು, ಅ.27- ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ಟೀಮ್ ಇಂಡಿಯಾ 6ನೇ ಬೌಲರ್ ಕೊರತೆ ಎದುರಿಸುತ್ತಿದ್ದು, ಇದಕ್ಕೆ ಬಿಸಿಸಿಐ ಮ್ಯಾನೇಜ್ಮೆಂಟ್ ಹೊಸ ರಣತಂತ್ರ ರೂಪಿಸಿದೆ. ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಚೆಂಡು ತಡೆಯುವ ವೇಳೆ ಪಾದದ ಗಾಯದ ಸಮಸ್ಯೆಗೆ ಪಾಂಡ್ಯ ಒಳಗಾದ ನಂತರ ಹಾರ್ದಿಕ್‍ರ ಉಳಿದ ಓವರ್ ಅನ್ನು ಕೊಹ್ಲಿ ಪೂರ್ಣಗೊಳಿಸಿದ್ದರು.

ಅಕ್ಟೋಬರ್ 29ರಂದು ಲಖನೌದ ಏಕನಾ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ, ಜೋಸ್ ಬಟ್ಲರ್ ಸಾರಥ್ಯದ ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ 6ನೇ ಬೌಲರ್ ಕೊರತೆ ಕಾಡದಿರಲಿ ಎಂಬ ದೃಷ್ಟಿಯಿಂದ ಕೊಹ್ಲಿ , ಗಿಲ್, ಸೂರ್ಯಕುಮಾರ್ ನೆಟ್ ಪ್ರಾಕ್ಟೀಸ್‍ನಲ್ಲಿ ಬೌಲಿಂಗ್ ಮಾಡುವಲ್ಲಿ ತಲ್ಲೀನರಾಗಿ ದ್ದಾರೆ. ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 3 ಎಸೆತ ಬೌಲಿಂಗ್ ಮಾಡಿ 2 ರನ್‍ಗಳನ್ನು ಬಿಟ್ಟುಕೊಟ್ಟಿದ್ದರು.

2023ರ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್, ಸೋಟಕ ಬ್ಯಾಟಿಂಗ್ ಪ್ರದರ್ಶಿಸಿ 5 ಪಂದ್ಯಗಳಿಂದ 1 ಶತಕ ಹಾಗೂ 3 ಅರ್ಧಶತಕಗಳ ನೆರವಿನಿಂದ 354 ರನ್ ಬಾರಿಸಿ, ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‍ಗಳಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತಮ್ಮ ಬೌಲಿಂಗ್ ಮೋಡಿ ಪ್ರದರ್ಶಿ ಸಲು ಮುಂದಾಗಿರುವ ವಿರಾಟ್ ಕೊಹ್ಲಿ , ನೆಟ್ಸ್ ಪ್ರಾಕ್ಟೀಸ್‍ನಲ್ಲಿ ನಾಯಕ ರೋಹಿತ್ ಶರ್ಮಾಗೆ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದು, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಬೌಲಿಂಗ್ ಮಾಡುತ್ತಾರೆಯೇ ಎಂಬ ಪ್ರಶ್ನೆಯು ಅಭಿಮಾನಿಗಳಲ್ಲಿ ಮೂಡಿದೆ.

“ದರೋಡೆ, ಡಕಾಯಿತಿ, ಅತ್ಯಾಚಾರ, ಅಪರಾಧಗಳಲ್ಲಿ ಮುಸ್ಲಿಮರೇ ನಂ.1”

ಮತ್ತೊಂದೆಡೆ ಟೀಮ್ ಇಂಡಿಯಾದ ಯುವ ಆಟಗಾರ ಶುಭಮನ್ ಗಿಲ್ ಹಾಗೂ ಟಿ20 ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ ನೆಟ್ಸ್‍ನಲ್ಲಿ ಬೌಲಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದು , ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಬಿಸಿಸಿಐ ಮ್ಯಾನೇಜ್‍ಮೆಂಟ್ ಕೊಹ್ಲಿ , ಗಿಲ್ ಅಥವಾ ಸೂರ್ಯಕುಮಾರ್ ಯಾದವ್‍ರನ್ನು ಅರೆಕಾಲಿಕ ಬೌಲರ್‍ಗಳಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದು ಗೋಚರಿಸುತ್ತಿದೆ.

RELATED ARTICLES

Latest News