Friday, May 3, 2024
Homeರಾಷ್ಟ್ರೀಯಮಾವೋವಾದಿ ನಾಯಕನನ್ನು ಬಂಧಿಸಿದ ಪಶ್ಚಿಮ ಬಂಗಾಳ ಪೊಲೀಸರು

ಮಾವೋವಾದಿ ನಾಯಕನನ್ನು ಬಂಧಿಸಿದ ಪಶ್ಚಿಮ ಬಂಗಾಳ ಪೊಲೀಸರು

ಕೋಲ್ಕತ್ತಾ, ಜ.12-ತಲೆಮರೆಸಿಕೊಂಡಿದ್ದ ಕುಖ್ಯಾತ ಮಾವೋವಾದಿ ನಾಯಕ ಸಬ್ಯಸಾಚಿ ಗೋಸ್ವಾಮಿ ಅಲಿಯಾಸ್ ಕಿಶೋರ್ ಎಂಬಾತನ ಪಶ್ಚಿಮ ಬಂಗಾಳ ಪೊಲೀಸರು ಜಾಖರ್ಂಡ್ ಗಡಿಯ ಬಳಿಯ ಕಾಡಿನಲ್ಲಿ ಬಂಧಿಸಿದ್ದಾರೆ. ಈತನ ಪತ್ತೆಗೆ ಹಲವು ಭಾರಿ ಕಾರ್ಯಾಚರಣೆ ನಡೆಸಲಾಗಿತ್ತು ಎನ್‍ಐಎಯ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಈತನ ತಲೆಗೆ 10 ಲಕ್ಷ ರೂಪಾಯಿ ಬಹುಮಾನವನ್ನುಘೋಷಿಸಲಾಗಿತ್ತು.

ಮಹತ್ವದ ಘೋಷಣೆ : ಸಿಂಗಾಪುರದಿಂದ ಭಾರತೀಯರು ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆ

ಪುರುಲಿಯಾ ಜಿಲ್ಲೆಯಲ್ಲಿ ಗೋಸ್ವಾಮಿಯನ್ನು ಕಳೆದ ರಾತ್ರಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲಾಯಿತು ಜಾಖರ್ಂಡ್ ಗಡಿಯ ಸಮೀಪವಿರುವ ಕಾಡಿನಲ್ಲಿ ಆತನ ಚಲನವಲನದ ಬಗ್ಗೆ ನಮಗೆ ಮಾಹಿತಿ ಇತ್ತು ಮತ್ತು ಕಾರ್ಯಾಚರಣೆ ಪ್ರಾರಂಭಿಸಿದೆವು. ಅಂತಿಮವಾಗಿ, ನಾವು ಅವನನ್ನು ಚೌನಿಯಾ ಬಳಿಯ ಕಾಡಿನಲ್ಲಿ ಬಂಧಿಸಿದ್ದೇವೆ ಎಂದು ಅವರು ತಿಳಿಸಿದರು.

ಆತನ ಬಳಿಯಿಂದ ಕೆಲವು ಸುತ್ತಿನ ಗುಂಡುಗಳು, ಒಂದು 9 ಎಂಎಂ ಪಿಸ್ತೂಲ್ ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ನಾವು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಎಂದು ಅಧಿಕಾರಿ ಹೇಳಿದರು.

RELATED ARTICLES

Latest News