Friday, February 23, 2024
Homeರಾಷ್ಟ್ರೀಯಮಿಜೋರಾಂನಲ್ಲಿ 68.41 ಕೋಟಿ ಮೌಲ್ಯದ ಡ್ರಗ್ಸ್ ವಶ, ಮೂವರ ಬಂಧನ

ಮಿಜೋರಾಂನಲ್ಲಿ 68.41 ಕೋಟಿ ಮೌಲ್ಯದ ಡ್ರಗ್ಸ್ ವಶ, ಮೂವರ ಬಂಧನ

ಐಜ್ವಾಲ್,ಜ.12:ಮಿಜೋರಾಂನಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 68.41 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಮತ್ತು ಮೂವರನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ರೈಫಲ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಖಚಿತ ಸುಳಿವಿನ ಮೇರೆಗೆ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಸಿಯಾಹಾ ಜಿಲ್ಲೆಯ ಬುವಲ್ಪುಯಿ ಗ್ರಾಮದ ಮೇಲೆ ದಾಳಿ ನಡೆಸಿ 1.75 ಕೋಟಿ ಮೌಲ್ಯದ 225 ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿದ್ದಾರೆಇದಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಅದು ಹೇಳಿದ್ದಾರೆ.

ರಾಮ ಪ್ರತಿಷ್ಠಾಪನೆಗೆ ಪ್ರಧಾನಿ ಮೋದಿ ಕಠಿಣ ವ್ರತ

ಮತ್ತೊಂದು ಕಾರ್ಯಾಚರಣೆಯಲ್ಲಿ ಪಡೆಗಳು 22.2 ಕೆಜಿ ತೂಕದ 20 ಪ್ಯಾಕೆಟ್ ಮೆಥಾಂ-ಟಮೈನ್ ಮಾತ್ರೆಗಳನ್ನು ಜಿಲ್ಲೆಯ ಝೋಖಾವ್ತಾರ್-ಮೆಲ್ಬುಕ್ ರಸ್ತೆಯಿಂದ ವಾಹನದಲ್ಲಿ ಸಾಗಿಸುವಾಗ ವಶಪಡಿಸಿಕೊಳ್ಳಲಾಗಿದೆ.

66.66 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ಕಾನೂನು ಪ್ರಕ್ರಿಯೆಗಾಗಿ ಅಬಕಾರಿ ಮತ್ತು ಮಾದಕ ದ್ರವ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ವಶಪಡಿಸಿಕೊಳ್ಳುವಿಕೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.

RELATED ARTICLES

Latest News