Saturday, July 27, 2024
Homeರಾಜ್ಯಸಚಿವ ನಾಗೇಂದ್ರ ಅವರಿಂದ ನಾವು ರಾಜೀನಾಮೆ ಕೇಳಿಲ್ಲ : ಸಿದ್ದರಾಮಯ್ಯ ಸ್ಪಷ್ಟನೆ

ಸಚಿವ ನಾಗೇಂದ್ರ ಅವರಿಂದ ನಾವು ರಾಜೀನಾಮೆ ಕೇಳಿಲ್ಲ : ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು, ಜೂ.3- ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಸಚಿವ ನಾಗೇಂದ್ರ ಅವರಿಂದ ನಾವು ರಾಜೀನಾಮೆ ಕೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸಚಿವ ನಾಗೇಂದ್ರ ಅವರು ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿ ರಾಜೀನಾಮೆ ಪಡೆಯುತ್ತಿಲ್ಲ ಎಂದು ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಕೋಟಾ ಶ್ರೀನಿವಾಸ್‌‍ ಅವರ ಹೇಳಿಕೆಗೆ ವಿಧಾನಸೌಧದಲ್ಲಿಂದು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಯಾವ ಬೆದರಿಕೆಗಳೂ ಇಲ್ಲ. ನಾವು ರಾಜೀನಾಮೆ ಕೇಳಿಯೇ ಇಲ್ಲ ಎಂದರು.

ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ತನಿಖೆಗೆ ಮೊನ್ನೆಯಷ್ಟೇ ಎಸ್‌‍ಐಟಿ ರಚನೆ ಮಾಡಲಾಗಿದೆ. ಇನ್ನೂ ಯಾವುದೇ ವರದಿ ಬಂದಿಲ್ಲ. ಪ್ರಾಥಮಿಕ ವರದಿ ಬರಲಿ. ಅದರಲ್ಲಿ ಏನಿರುತ್ತದೆ ಎಂದು ನೋಡಿದ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾಗೇಂದ್ರ ಅವರಿಂದ ತಾವು ಯಾವುದೇ ವಿವರಣೆ ಕೇಳಿಲ್ಲ, ವರದಿ ಬರುವವರೆಗೂ ಕಾಯುತ್ತೇವೆ ಎಂದರು.

ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ಜೂ.6ರವರೆಗೆ ಗಡುವು ನೀಡುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಅವರ್ಯಾರು ನಮಗೆ ಗಡುವು ನೀಡಲು? ಎಂದು ಪ್ರಶ್ನಿಸಿದರು.ವಿರೋಧಪಕ್ಷಗಳಿರುವುದೇ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕೆಂದು. ಆದರೆ ಸುಳ್ಳು ಹೇಳಿಕೊಂಡು ಹೋರಾಟ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಲೋಕಸಭಾ ಚುನಾವಣೋತ್ತರ ಸಮೀಕ್ಷೆ ಬಗ್ಗೆ ರಾಹುಲ್‌ಗಾಂಧಿಯವರು ಈಗಾಗಲೇ ಪ್ರತಿಕ್ರಿಯಿಸಿದ್ದಾರೆ. ಅದು ನರೇಂದ್ರ ಮೋದಿಯವರ ಮಾಧ್ಯಮ ಸಮೀಕ್ಷೆ ಎಂದು ಹೇಳಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್‌‍ ಕನಿಷ್ಠ 15 ರಿಂದ 20 ಸ್ಥಾನಗಳನ್ನು ಗೆಲ್ಲಲಿದೆ. ಸಮೀಕ್ಷೆಯನ್ನು ನಾವು ತಳ್ಳಿಹಾಕುತ್ತೇವೆ ಎಂದು ಹೇಳಿದರು.

ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆಯಾಗುವ 11 ಸದಸ್ಯರ ಪೈಕಿ ಕಾಂಗ್ರೆಸ್‌‍ನ 7 ಅಭ್ಯರ್ಥಿಗಳಿಂದ ನಾಮಪತ್ರ ಹಾಕಿಸಿದ್ದೇವೆ. ಪ್ರತಿ ಅಭ್ಯರ್ಥಿಗೂ 19 ರಿಂದ 20 ಮತಗಳು ಬೇಕಾಗುತ್ತದೆ. ನಮ ಸಂಖ್ಯಾಬಲದ ಆಧಾರದ ಮೇಲೆ ನಾವು ಏಳನ್ನೂ ಸುಲಭವಾಗಿ ಗೆಲ್ಲುತ್ತೇವೆ.

ಬಿಜೆಪಿ 3, ಜೆಡಿಎಸ್‌‍ನ ಒಬ್ಬರು ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. 11 ಕ್ಕಿಂತ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದೇ ಇದ್ದರೆ ಚುನಾವಣೆ ನಡೆಯುವುದಿಲ್ಲ. ಅವಿರೋಧ ಆಯ್ಕೆಯಾಗುತ್ತದೆ. ಚುನಾವಣೆ ನಡೆದರೂ ನಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

8ನೇ ಅಭ್ಯರ್ಥಿಗಯನ್ನು ಕಣಕ್ಕಿಳಿಸುವ ಸಾಧ್ಯತೆಗಳಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಮುಂಗಾರು ಮಳೆ ಪ್ರಾರಂಭವಾಗಿದೆ. ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಆದರೂ ಮರ ಬೀಳುವುದು, ರಸ್ತೆಯಲ್ಲಿ ನೀರು ನಿಲ್ಲುವುದು ಸಾಮಾನ್ಯವಾಗಿದೆ. ರಸ್ತೆಗುಂಡಿಗಳನ್ನು ಮುಚ್ಚಲು ಈ ತಿಂಗಳ ಅಂತ್ಯದವರೆಗೂ ಗಡುವು ನೀಡಲಾಗಿದೆ ಎಂದರು.

RELATED ARTICLES

Latest News