ನೆಲ್ಲೂರು,ಏ.24-ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸೋಮಶಿಲಾ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಅಪಾರ ವನ್ಯ ಸಂಪತ್ತು ನಾಶವಾಗಿದೆ.ಅಗ್ನಿ ಶಾಮಕ ಸಿಬ್ಭಂದಿ ಹಾಗು ಅರಣ್ಯಇಲಾಖೆ ಬೆಂಕಿಯನ್ನು ನಿಯಂತ್ರಿಸುವ ಹರಸಾಹಸ ಪಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಸಿಲಿನ ತಾಪಕ್ಕೆ ಒಣಗಿದ್ದ ಹುಲ್ಲಿನ ರಾಶಿಗೆ ಬೆಂಕಿ ಬಿದ್ದಿದೆ ಎಲ್ಲೆಡೆ ಆವರಿಸಿದೆ.ರಾತ್ರಿ ಬೆಂಕಿಯ ಕೆನ್ನಾಲಿಗೆ ಹೆಚ್ಚನ ಪ್ರದೇಶ ವ್ಯಾಪಿಸಿ ಮುಗಿಲೆತ್ತರಕ್ಕೆ ಬೆಂಕಿ ಜ್ವಾಲೆ ಕಾಣಿಸುತ್ತಿದೆ .ಈ ಪ್ರದೇಶದಲ್ಲಿ ಹಾದು ಹೋಗುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಎಚ್ಚರಿಕೆ ನೀಡಲಾಗಿದೆ. ಅರಣ್ಯ ಇಲಾಖೆ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಲು ಕಾರ್ಯಾಚರಣೆ ಮುಂದುವರೆದಿದೆ.