Friday, May 3, 2024
Homeರಾಷ್ಟ್ರೀಯತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದ ಮೂವರು ವೈದ್ಯರ ಅಮಾನತು

ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದ ಮೂವರು ವೈದ್ಯರ ಅಮಾನತು

ಜೈಪುರ, ಅ.5 : ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ ಹಿನ್ನಲೆಯಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಮೂವರು ವೈದ್ಯರನ್ನು ಸರ್ಕಾರ ಅಮಾನತುಗೊಳಿಸಿದೆ.

ವೈದ್ಯಕೀಯ ಶಿಕ್ಷಣದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶುಭ್ರಾ ಸಿಂಗ್ ವಿಷಯ ತಿಳಿದು ತಕ್ಷಣದಿಂದ ಜಾರಿಗೆ ಬರುವಂತೆ ತನಿಖಾ ಸಮಿತಿಯನ್ನು ರಚಿಸಿದ್ದಾರೆ. ಸಮಿತಿಯ ತುರ್ತು ವರದಿಯ ಮೇಲೆ ಕ್ರಮ ಕೈಗೊಂಡು, ಕನ್ವಾಟಿಯಾ ಆಸ್ಪತ್ರೆಯ ಮೂವರು ವೈದ್ಯರಾದ ಕುಸುಮ್ ಸೈನಿ, ನೇಹಾ ರಾಜಾವತ್ ಮತ್ತು ಮನೋಜ್ ಅವರನ್ನು ಅಮಾನತುಗೊಳಿಸಲಾಗಿದೆ.

ಇವರಿಂದ ಗಂಭೀರ ನಿರ್ಲಕ್ಷ್ಯ ಮತ್ತು ಸಂವೇದನಾಶೀಲತೆ ಲೋಪ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರಣದಲ್ಲಿಮೇಲ್ವಿಚಾರಣಾ ನಿರ್ಲಕ್ಷ್ಯಕ್ಕಾಗಿ ಕನ್ವಾಟಿಯಾ ಆಸ್ಪತ್ರೆಯ ಅಧೀಕ್ಷಕ ಡಾ ರಾಜೇಂದ್ರ ಸಿಂಗ್ ತನ್ವಾರ್ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

ತುಂಬು ಗರ್ಭಿಣಿಯನ್ನು ಕುಟುಂಬ ಸದಸ್ಯರು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ ಆದರೆ ಸಿಬ್ಬಂದಿ ದಾಖಲಿಸಿಕೊಳ್ಳಲು ನಿರಾಕರಿಸಿದ ಬಳಿಕ ಬೇರೆ ಆಸ್ಪತ್ರೆಗೆಂದು ಹೊರಗೆ ಹೋಗುವಾಗ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಯ ಗೇಟ್ ಬಳಿ ಹೆರಿಗೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News