Wednesday, September 17, 2025
Homeಇದೀಗ ಬಂದ ಸುದ್ದಿಬೆಂಗಳೂರಿನ ಮಹಿಳೆ ಮೇಲೆ ಅತ್ಯಾಚಾರ ಆರೋಪಿ ಬಂಧನ

ಬೆಂಗಳೂರಿನ ಮಹಿಳೆ ಮೇಲೆ ಅತ್ಯಾಚಾರ ಆರೋಪಿ ಬಂಧನ

ಕೊಪ್ಪಳ, ಫೆ.12- ಗಂಡನನ್ನು ಭೇಟಿಯಾಗಲು ಬೆಂಗಳೂರಿನಿಂದ ಬಂದಿದ್ದ ಮಹಿಳೆಯನ್ನು ಅಪಹರಿಸಿ ಬಸ್ ನಿಲ್ದಾಣ ಬಳಿಯ ಉದ್ಯಾನವನಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿರುವ ಘಟನೆ ಗಂಗಾವತಿಯಲ್ಲಿ ನೆಡೆದಿದೆ. ಘಟನೆಯ ಬಗ್ಗೆ ಸಂತ್ರಸ್ಥೆ ನೀಡಿದ ದೂರಿನ ಹಿನ್ನಲೆಯಲ್ಲಿ , ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿ ಲಿಂಗರಾಜನನ್ನು ಗಂಗಾವತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತ ಮಹಿಳೆ ಪತಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಮೌಲಾಹುಸೇನ್, ಶಿವಕುಮಾರ್, ಪ್ರಶಾಂತ್, ಮಹೇಶ್, ಮಾದೇಶ್ ಎಂಬುವವರನ್ನು ಬಂಧಿಸಲಾಗಿದೆ. ಬೆಂಗಳೂರಿನ ನಿವಾಸಿ 21 ವರ್ಷದ ಸಂತ್ರಸ್ಥೆ ಮಹಿಳೆ ಗಂಗಾವತಿ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಕಳೆದ ಫೆ.9ರಂದು ಗಾಂಗಾವತಿಗೆ ಬಂದಿದ್ದರು ಬಸ್ ನಿಲ್ದಾಣದಲ್ಲಿ ಪತಿಯನ್ನು ಭೇಟೆ ಭೇಟಿ ಮಾಡಿ ಸಂದರ್ಭದಲ್ಲಿ ಜಗಳವಾಗಿತ್ತು. ಇದನ್ನು ಗಮನಿಸಿದ 6 ಮಂದಿಯ ಗ್ಯಾಂಗ್ ಮಧ್ಯಪ್ರವೇಶಿಸಿ ಸಂತ್ರಸ್ತೆಯ ಪತಿಗೆ ಥಳಿಸಿದೆ. ಅಲ್ಲದೆ ಮಹಿಳೆಗೆ ಸಹಾಯ ಮಾಡಿದಂತೆ ವರ್ತಿಸಿದ್ದಾರೆ. ನಂತರ ಸಂತ್ರಸ್ತೆಯ ಗಂಡನನ್ನು ಸಾರ್ವಜನಿಕರ ಕಣ್ಣಿಗೆ ಬೀಳದಂತೆ ಐದು ಮಂದಿ ಕರೆದೊಯ್ದಿದ್ದಾರೆ.

ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ನಿತೀಶ್

ದುಷ್ಕರ್ಮಿಗಳು ನಂತರ ಮಹಿಳೆಯ ಮೇಲೆ ಹಲ್ಲೆ ನಡೆಸಿ ಬಸ್ ನಿಲ್ದಾಣದ ಬಳಿಯ ಉದ್ಯಾನವನಕ್ಕೆ ಎಳೆದೊಯ್ದಿದ್ದಾರೆ. ಆರು ಆರೋಪಿಗಳಲ್ಲಿ ಒಬ್ಬನಾದ ಲಿಂಗರಾಜ್ ಮಹಿಳೆಗೆ ಸಹಾಯದ ನೆಪದಲ್ಲಿ ಕೆರದೊಯ್ದು ಅತ್ಯಾಚಾರ ಎಸಗಿ ಸಂತ್ರಸ್ತೆಯನ್ನು ಪಾರ್ಕ್‍ನಲ್ಲಿ ಬಿಟ್ಟು ಪರಾರಿಯಾಗಿದ್ದನು.

ಸ್ಥಳೀಯರ ನೆರವಿನಿಂದ ಸಂತ್ರಸ್ತೆ ಗಂಗಾವತಿ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಲಾಗಿದೆ.

RELATED ARTICLES

Latest News