Sunday, November 24, 2024
Homeರಾಷ್ಟ್ರೀಯ | Nationalಕಪಾಟಿನಲ್ಲಿ ಮಹಿಳೆ ಶವ ಪತ್ತೆ, ಲಿವ್ ಇನ್ ಸಂಗಾತಿಯಿಂದ ಕೊಲೆ ಶಂಕೆ

ಕಪಾಟಿನಲ್ಲಿ ಮಹಿಳೆ ಶವ ಪತ್ತೆ, ಲಿವ್ ಇನ್ ಸಂಗಾತಿಯಿಂದ ಕೊಲೆ ಶಂಕೆ

ನವದೆಹಲಿ,ಏ.5- ನೈಋತ್ಯ ದೆಹಲಿಯ ದ್ವಾರಕಾದಲ್ಲಿರುವ ಮನೆಯೊಂದರಲ್ಲಿರುವ ಕಪಾಟಿನಲ್ಲಿ 26 ವರ್ಷದ ಮಹಿಳೆಯ ಶವ ಪತ್ತೆಯಾಗಿದ್ದು , ಕೊಲೆಯ ಹಿಂದೆ ಆಕೆಯ ಲಿವ್ ಇನ್ ಸಂಗಾತಿಯ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಮಹಿಳೆಯ ತಂದೆ ಕೆಲವು ದಿನಗಳಿಂದ ಮಗಳಿಗೆ ಕರೆ ಮಾಡುತ್ತಿದ್ದುರು. ಆದರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ದಾಬ್ರಿ ಪೊಲೀಸ್ ಠಾಣೆಯ ತಂಡವು ದ್ವಾರಕಾದ ರಾಜಪುರಿ ಪ್ರದೇಶದಲ್ಲಿರುವ ಮಹಿಳೆಯ ಮನೆಗೆ ಹೋಗಿದ್ದಾರೆ. ಫ್ಲಾಟ್‍ಗೆ ತೆರಳಿದಾಗ ಆಕೆಯ ಮೃತದೇಹವು ರೂಮಿನ ಕಪಾಟಿನಲ್ಲಿ ಪತ್ತೆಯಾಗಿದೆ.

ಮಹಿಳೆಯ ತಂದೆ, ತನ್ನ ಮಗಳನ್ನು ಆಕೆಯ ಲೈವ್-ಇನ್ ಸಂಗಾತಿ ವಿಪಾಲ್ ಹತ್ಯೆ ಮಾಡಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.ಮಗಳೊಂದಿಗೆ ಕೊನೆಯ ಬಾರಿಗೆ ಮಾತನಾಡಿದ್ದರ ಬಗ್ಗೆ ಹೇಳಿದ ಅವರು, ವಿಪಾಲ್ ಮಗಳನ್ನು ಥಳಿಸುತ್ತಿದ್ದ, ಆಕೆಗೆ ತನ್ನನ್ನು ಕೊಲೆ ಮಾಡಬಹುದೆಂಬ ಭಯವಿತ್ತು. ಕಳೆದ ಒಂದೂವರೆ ತಿಂಗಳಿನಿಂದ ತನ್ನ ಮಗಳು ವಿಪಾಲ್ ಜೊತೆ ಬಾಡಿಗೆ ಫ್ಲಾಟ್‍ನಲ್ಲಿ ವಾಸವಾಗಿದ್ದಳು ಎಂದು ತಿಳಿಸಿದ್ದಾರೆ.

ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಡಿಡಿಯು ಆಸ್ಪತ್ರೆಯ ಶವಾಗಾರಕ್ಕೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಗುಜರಾತ್‍ನ ಸೂರತ್ ಮೂಲದ ಆರೋಪಿ ವಿಪಾಲ್ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ದೂರುದಾರರ ಹೇಳಿಕೆಯ ಆಧಾರದ ಮೇಲೆ, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಪೊಲೀಸ್ ತಂಡಗಳ ಅಧಿಕಾರಿಗಳು ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

Latest News