Sunday, April 28, 2024
Homeಮನರಂಜನೆಟಾಕ್ಸಿಕ್ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಯಶ್, ಫೋಟೋಗಳು ವೈರಲ್

ಟಾಕ್ಸಿಕ್ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಯಶ್, ಫೋಟೋಗಳು ವೈರಲ್

ನವದೆಹಲಿ,ಮಾ.23- ಸ್ಯಾಂಡಲ್‍ವುಡ್‍ನ ಖ್ಯಾತ ಚಿತ್ರನಟ ಯಶ್ ಅವರ ಅಭಿಮಾನಿಗಳಿಗೆ ಸಂಸತದ ಸುದ್ದಿ ನೀಡಿದ್ದಾರೆ. ಕೆಜಿಎಫ್ ಚಿತ್ರದ ನಂತರ ಯಾವುದೇ ಚಿತ್ರದ ಚಿತ್ರಿಕರಣದಲ್ಲಿ ಪಾಲ್ಗೊಳ್ಳದ ರಾಕಿ ಭಾಯ್ ಇದೀಗ ಸಾಹಸಮಯ ಟಾಕ್ಸಿಕ್ ಚಿತ್ರಿಕರಣದಲ್ಲಿ ಬಿಜಿಯಾಗಿದ್ದಾರೆ.

ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಗೀತು ಮೋಹನ್‍ದಾಸ್ ನಿರ್ದೇಶನದ ಈ ಚಿತ್ರವು ಭಾರತೀಯ ಚಲನಚಿತ್ರ ಭ್ರಾತೃತ್ವದ ಪ್ರಮುಖ ವ್ಯಕ್ತಿಗಳ ಒಂದು ಶ್ರೇಣಿಯನ್ನು ಒಳಗೊಂಡಿರುವ ನಿರೀಕ್ಷೆಯಿದೆ.

ಸೆಟ್‍ನಲ್ಲಿರುವ ಯಶ್ ಅವರ ಹಲವಾರು -ಫೋಟೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ವೈರಲ್ ಸ್ನ್ಯಾಪ್‍ಶಾಟ್‍ಗಳಲ್ಲಿ, ಯಶ್ ಕಪ್ಪು ಪ್ಯಾಂಟ್‍ನೊಂದಿಗೆ ಮೆರೂನ್ ಟಿ-ಶರ್ಟ್ ಅನ್ನು ಧರಿಸಿ ಚಿತ್ರಿಕರಣದಲ್ಲಿ ಪಾಲ್ಗೊಂಡಿರುವುದು ವೈರಲ್ ಆಗಿದೆ.

ಟಾಕ್ಸಿಕ್ ಚಿತ್ರದಲ್ಲಿ ಕರೀನಾ ಕಪೂರ್ ಮತ್ತು ಶ್ರುತಿ ಹಾಸನ್ ಅವರ ಪಾಲ್ಗೊಳ್ಳುವಿಕೆಯನ್ನು ವರದಿಗಳು ಸೂಚಿಸುತ್ತವೆಯಾದರೂ, ಅಧಿಕೃತ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ. ಗೂಗ್ಲಿ ತಾರೆಯ ಎದುರು ಮಹಿಳಾ ನಾಯಕಿಯಾಗಿ ಕರೀನಾ ಕಪೂರ್ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಟಾಕ್ಸಿಕ್ ಚಿತ್ರವನ್ನು ಯಶ್ ತಮ್ಮ ಸ್ವಂತ ಬ್ಯಾನರ್‍ನಡಿ ನಿರ್ಮಿಸುತ್ತಿದ್ದು, ಮಹತ್ವಾಕಾಂಕ್ಷೆಯ ಈ ಚಿತ್ರ 2025ರಲ್ಲಿ ತೆರೆ ಕಾಣುವ ಸಾಧ್ಯತೆಗಳಿವೆ.ಟಾಕ್ಸಿಕ್ ಜೊತೆಗೆ, ಯಶ್ ಅವರು ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ರಾವಣನಾಗಿ ನಟಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

RELATED ARTICLES

Latest News