Saturday, July 27, 2024
Homeರಾಷ್ಟ್ರೀಯಮೋದಿ ನಾಯಕತ್ವಕ್ಕೆ ನಾವೆಲ್ಲಾ ಶರಣು; ಯೋಗಿ ಆದಿತ್ಯನಾಥ್‌

ಮೋದಿ ನಾಯಕತ್ವಕ್ಕೆ ನಾವೆಲ್ಲಾ ಶರಣು; ಯೋಗಿ ಆದಿತ್ಯನಾಥ್‌

ಲಕ್ನೋ,ಮೇ.12- ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಪ್ರಧಾನಿ ಮೋದಿ ಅವರ 75 ನೇ ವಯಸ್ಸಿನಲ್ಲಿ ನಿವೃತ್ತಿ ಹೇಳಿಕೆಗೆ ವಾಗ್ದಾಳಿ ನಡೆಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು, ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋಲು ತಿಳಿದ ಹತಾಶ ಪ್ರತಿಪಕ್ಷಗಳು ವ್ಯರ್ಥ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ದೂರಿದ್ದಾರೆ.

ಈ ಹಿಂದೆ, ಕೇಜ್ರಿವಾಲ್‌ ಅವರು ಮುಂದಿನ ವರ್ಷ 75 ನೇ ವರ್ಷಕ್ಕೆ ಕಾಲಿಟ್ಟ ನಂತರ ಪ್ರಧಾನಿ ಮೋದಿ ಗೃಹ ಸಚಿವ ಅಮಿತ್‌ ಶಾಗೆ ದಾರಿ ಮಾಡಿಕೊಡುತ್ತಾರೆ ಎಂದು ಹೇಳಿದ್ದರು ಮತ್ತು ಸಾರ್ವತ್ರಿಕ ಚುನಾವಣೆಯ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಕಡೆಗಣಿಸಲಾಗುವುದು ಎಂದಿದ್ದರು.

ಎಕ್‌್ಸನಲ್ಲಿನ ತಮ್ಮ ಪೋಸ್ಟ್‌ನಲ್ಲಿ, ಸಿಎಂ ಯೋಗಿ, ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಅವರು ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಪಡೆಯುತ್ತಿರುವ ಅಪಾರ ಜನಬೆಂಬಲದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಅಪಪ್ರಚಾರದಲ್ಲಿ ಮುಳುಗಿವೆ. ಲೋಕಸಭೆ ಚುನಾವಣೆಯಲ್ಲಿ ಸೋಲು ಖಚಿತ ಎಂದು ಗೊತ್ತಿದ್ದೂ ಹತಾಶರಾಗಿರುವ ಪ್ರತಿಪಕ್ಷಗಳು ಮೋದಿಯವರ ವಯೋಮಾನದ ನೆಪ ಹೇಳಿಕೊಂಡು ಹುಸಿ ದಾಳಿ ನಡೆಸಲು ವಿಫಲ ಯತ್ನ ನಡೆಸುತ್ತಿವೆ ಎಂದು ಬರೆದುಕೊಂಡಿದ್ದಾರೆ. ಇದಲ್ಲದೆ, ಮೋದಿ ಜಿ ಅವರ ಪ್ರತಿ ಕ್ಷಣವೂ ಭಾರತಮಾತೆಯನ್ನು ಅಂತಿಮ ವೈಭವಕ್ಕೆ ಕೊಂಡೊಯ್ಯಲು ಸಮರ್ಪಿತವಾಗಿದೆ ಎಂದು ಭಾರತದ ಜನರಿಗೆ ತಿಳಿದಿದೆ ಎಂದು ಅವರು ಪ್ರತಿಪಾದಿಸಿದರು.

ಗೌರವಾನ್ವಿತ ಪ್ರಧಾನಿ ಮೋದಿ ಜಿಯವರ ಯಶಸ್ವಿ ನಾಯಕತ್ವದಲ್ಲಿ, ವಿಕಸಿತ್‌ ಭಾರತ್‌, ಆತನಿರ್ಭರ್‌ ಭಾರತ್‌ ಮತ್ತು ಏಕ್‌ ಭಾರತ್‌‍-ಶ್ರೇಷ್ಠ ಭಾರತದ ಪರಿಕಲ್ಪನೆಗಳು ಸಾಕಾರಗೊಳ್ಳುತ್ತಿವೆ. ಖಂಡಿತವಾಗಿಯೂ, ಮೋದಿ ಜಿಯವರ ಮೂರನೇ ಅವಧಿಯಲ್ಲಿ, ಭಾರತವು ಹೊಸ ಎತ್ತರವನ್ನು ಮುಟ್ಟಲಿದೆ. ಜಾಗತಿಕ ಸೂಪರ್‌ ಪವರ್‌ ಮೋದಿ ಜೀ 140 ಕೋಟಿ ಭಾರತೀಯರ ಸ್ವೀಕಾರಾರ್ಹ ನಾಯಕ ಮತ್ತು ನಾವು ಮೋದಿ ಜಿ ಅವರ ಕುಟುಂಬದ ಸದಸ್ಯರು ಎಂದು ನಾವು ಹೆಮ್ಮೆ ಪಡುತ್ತೇವೆ ಎಂದು ಹೇಳಿದ್ದಾರೆ.

RELATED ARTICLES

Latest News