Thursday, December 12, 2024
Homeಜಿಲ್ಲಾ ಸುದ್ದಿಗಳು | District Newsಮಾಟಮಂತ್ರ ಮಾಡಿಸಿದ್ದಾರೆಂಬ ಭಯದಿಂದ ನೇಣಿಗೆ ಶರಣಾದ ಯುವಕ

ಮಾಟಮಂತ್ರ ಮಾಡಿಸಿದ್ದಾರೆಂಬ ಭಯದಿಂದ ನೇಣಿಗೆ ಶರಣಾದ ಯುವಕ

ಮೈಸೂರು,ಮೇ.3- ಮಾಟಮಂತ್ರ ಮಾಡಿಸಿದ್ದಾರೆಂಬ ಭೀತಿಗೆ ಒಳಗಾದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಕುಲಂ ಬಡಾವಣೆಯಲ್ಲಿ ನಡೆದಿದೆ.ಮಧುಕರ್‌(22) ಆತ್ಮಹತ್ಯೆ ಮಾಡಿಕೊಂಡ ಯುವಕ.

ತಂದೆ ಮುರಳೀಧರ್‌ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದು, ಪತ್ನಿಯೊಂದಿಗೆ ವಿಚ್ಛೇದನ ಪಡೆದು ಪುತ್ರ ಮಧುಕರ್‌ ಜೊತೆ ಗೋಕುಲಂನಲ್ಲಿ ವಾಸವಾಗಿದ್ದರು. ಡಿಪ್ಲೊಮಾದಲ್ಲಿ ಫೇಲಾದ ಮಧುಕರ್‌ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ತಂದೆ ಮನೆಯಿಂದ ಹೊರಗೆ ಹೋಗಿದ್ದಾಗ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯಾರೋ ಮಾಟಮಂತ್ರ ಮಾಡಿಸಿದ್ದಾರೆ. ಹಾಗಾಗಿ ಡಿಪ್ಲೋಮಾದಲ್ಲಿ ಫೇಲಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ವಿವಿ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News