ಆನಂದ್ ಮನವೊಲಿಸುತ್ತೇನೆ : ಜಮೀರ್ ಅಹಮ್ಮದ್

ಬೆಂಗಳೂರು, ಜು.1-ಶಾಸಕ ಆನಂದ್‍ಸಿಂಗ್ ಅವರು ರಾಜೀನಾಮೆ ಕೊಡುವುದಿಲ್ಲ ಎಂಬ ವಿಶ್ವಾಸವಿದೆ. ಒಂದು ವೇಳೆ ಕೊಟ್ಟಿದ್ದರೂ ನಾನು ಅವರ ಜೊತೆ ಚರ್ಚೆ ಮಾಡಿ ಮನವೊಲಿಸುತ್ತೇನೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್‍ಸಿಂಗ್ ಅವರು ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸ್ಪೀಕರ್ ರಮೇಶ್‍ಕುಮಾರ್ ಅವರು ಅದನ್ನು ತಳ್ಳಿ ಹಾಕಿದ್ದಾರೆ. ನನಗೆ ಸಂಪೂರ್ಣ ಮಾಹಿತಿ ಇಲ್ಲ ಎಂದರು.

ಆನಂದ್‍ಸಿಂಗ್ ನನಗೂ ಆತ್ಮೀಯ ಸ್ನೇಹಿತರು. ಅವರ ಜೊತೆ ನಾನು ಚರ್ಚೆ ಮಾಡುತ್ತೇನೆ. ಅವರ ಸಮಸ್ಯೆ ಏನು ಎಂದು ಕೇಳಿ ಬಗೆಹರಿಸುತ್ತೇವೆ ಎಂದು ಹೇಳಿದರು.