Friday, July 4, 2025
Homeರಾಜ್ಯಅವಹೇಳನಕಾರಿ ಮಾತನಾಡಿದ ರವಿಕುಮಾರ್‌ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

ಅವಹೇಳನಕಾರಿ ಮಾತನಾಡಿದ ರವಿಕುಮಾರ್‌ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

CM Siddaramaiah lashes out at Ravikumar for making derogatory remarks

ಬೆಂಗಳೂರು,ಜು.4- ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ವಿಧಾನಪರಿಷತ್‌ ಬಿಜೆಪಿಯ ಸದಸ್ಯ ಎನ್‌.ರವಿ ಕುಮಾರ್‌ ಅವರ ನಾಲಿಗೆ ಜಾಸ್ತಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರವಿಕುಮಾರ್‌ ಹೇಳಿಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಮುಖ್ಯ ಕಾರ್ಯದರ್ಶಿ ವಿರುದ್ಧ ರವಿಕುಮಾರ್‌ ವಿವಾದಾತಕ ಹೇಳಿಕೆ ನೀಡಿದ್ದಾರೆ ಎಂದು ಪ್ರಶ್ನೆ ಎದುರಾಗುತ್ತಿದ್ದಂತೆ ಅವರ ನಾಲಿಗೆ ಜಾಸ್ತಿಯಾಯಿತು ಎಂದು ಮುಖ್ಯಮಂತ್ರಿ ಸಿಟ್ಟಾದರು. ಹೆಚ್ಚಿನ ಪ್ರತಿಕ್ರಿಯೆ ನೀಡದೆ ತಮ ಮಾತನ್ನು ಅರ್ಧಕ್ಕೆ ನಿಲ್ಲಿಸಿ ಅಲ್ಲಿಂದ ನಿರ್ಗಮಿಸಿದರು.

ರವಿಕುಮಾರ್‌ ಆಡಿರುವ ಮಾತುಗಳ ಬಗ್ಗೆ ಸರ್ಕಾರದ ಹಲವಾರು ಮಂದಿ ಸಚಿವರು ಆಕ್ರೋಶ ಹೊರಹಾಕಿದ್ದಾರೆ. ಈಗಾಗಲೇ ಎಫ್‌ಐಆರ್‌ ಕೂಡ ದಾಖಲಾಗಿದೆ.ಐಎಎಸ್‌‍ ಅಧಿಕಾರಿಗಳ ಸಂಘ ಹೇಳಿಕೆಯನ್ನು ಖಂಡಿಸಿದ್ದು, ಕಾನೂನು ರೀತಿಯ ಕ್ರಮಕ್ಕೆ ಒತ್ತಾಯ ಮಾಡಿದರು. ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ವಿವಾದ ಮತ್ತೊಂದು ಮಗ್ಗುಲು ತಿರುಗಿದೆ.

ಎಲ್ಲಾ ಸಚಿವರು, ಕಾಂಗ್ರೆಸ್‌‍ ಮುಖಂಡರು ರವಿಕುಮಾರ್‌ ಹೇಳಿಕೆಯನ್ನು ಖಂಡಿಸಲಾರಂಭಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಎಚ್ಚರಿಕೆಯಿಂದ ಮಾತನಾಡಬೇಕು. ಈ ಮೊದಲು ಬಿಜೆಪಿಯ ಕೆಲ ನೇತಾರರ ಮಾತುಗಳಿಂದ ಪಕ್ಷಕ್ಕೆ ಮುಜುಗರ ಉಂಟಾಗಿದ್ದಿದೆ ಎಂದು ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಎನ್‌.ರವಿಕುಮಾರ್‌ ಅವರ ನಾಲಗೆ ಉದ್ದವಾಯಿತು ಎಂಬರ್ಥದಲ್ಲಿ ಸಿಡಿಮಿಡಿ ವ್ಯರ್ಥಪಡಿಸಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.

RELATED ARTICLES

Latest News