Monday, May 6, 2024
Homeಕ್ರೀಡಾ ಸುದ್ದಿಚಿಕ್ಕೋಡಿಯಲ್ಲಿ ದಾಖಲೆಯಿಲ್ಲದ 16.31 ಲಕ್ಷ ರೂ. ವಶ

ಚಿಕ್ಕೋಡಿಯಲ್ಲಿ ದಾಖಲೆಯಿಲ್ಲದ 16.31 ಲಕ್ಷ ರೂ. ವಶ

ಚಿಕ್ಕೋಡಿ(ಬೆಳಗಾವಿ),ಏ.11- ದಾಖಲೆಯಿಲ್ಲದೆ ಸಾಗಿಸುತ್ತಿದ್ದ 16.31 ಲಕ್ಷ ರೂ.ಗಳನ್ನು ನಿನ್ನೆ ತಡರಾತ್ರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಇಂಚಲಕ ರಂಜಿ ನಗರದ ಇಬ್ಬರು ನಿವಾಸಿಗಳು ಚಿಕ್ಕೋಡಿ ಬಸ್ ನಿಲ್ದಾಣದಿಂದ ತಮ್ಮೂರಿಗೆ ಬಸ್ ಮೂಲಕ ದಾಖಲೆಯಿಲ್ಲದ 16.31 ಲಕ್ಷ ರೂ.ಗಳನ್ನು ಸಾಗಿಸುತ್ತಿದ್ದರು.

ತಪಾಸಣೆ ವೇಳೆ ಈ ಹಣ ಪತ್ತೆಯಾಗಿದೆ ಎಂದು ಚಿಕ್ಕೋಡಿ ಪೊಲೀಸರು ತಿಳಿಸಿದ್ದಾರೆ. ಅಕ್ರಮ ಹಣವನ್ನು ವಶಪಡಿಸಿಕೊಂಡಿರುವುದರ ಜೊತೆಗೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

RELATED ARTICLES

Latest News