Tuesday, May 28, 2024
Homeರಾಷ್ಟ್ರೀಯಪಾಕಿಸ್ತಾನದಿಂದ ಬಂದ 18 ಹಿಂದೂ ನಿರಾಶ್ರಿತರಿಗೆ ಭಾರತೀಯ ಪೌರತ್ವ

ಪಾಕಿಸ್ತಾನದಿಂದ ಬಂದ 18 ಹಿಂದೂ ನಿರಾಶ್ರಿತರಿಗೆ ಭಾರತೀಯ ಪೌರತ್ವ

ಅಹಮದಾಬಾದ್,ಮಾ.17- ನಗರದಲ್ಲಿ ವಾಸಿಸುತ್ತಿರುವ ಪಾಕಿಸ್ತಾನದಿಂದ ಬಂದಿರುವ ಹದಿನೆಂಟು ಹಿಂದೂ ನಿರಾಶ್ರಿತರಿಗೆ ಗುಜರಾತ್ ಗೃಹಖಾತೆ ರಾಜ್ಯ ಸಚಿವ ಹರ್ಷ ಸಂಘ್ವಿ ಅವರು ಪಾಲ್ಗೊಂಡಿದ್ದ ಶಿಬಿರದಲ್ಲಿ ಭಾರತೀಯ ಪೌರತ್ವವನ್ನು ನೀಡಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಶಿಬಿರದಲ್ಲಿ ಈ 18 ಮಂದಿಗೆ ಸಂಘ್ವಿ ಅವರು ಭಾರತೀಯ ಪೌರತ್ವವನ್ನು ಪ್ರದಾನ ಮಾಡಿ ನವಭಾರತದ ಕನಸನ್ನು ಸಾಕಾರಗೊಳಿಸಲು ಒಗ್ಗೂಡಿ ಕೆಲಸ ಮಾಡುವಂತೆ ಹೇಳಿದರು.

2016 ಮತ್ತು 2018 ರ ರಾಜ್ಯ ಪತ್ರ(ಗೆಜೆಟ್) ಅಧಿಸೂಚನೆಗಳು ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಬಂದ ಅಲ್ಪಸಂಖ್ಯಾತ ಸಮುದಾಯಗಳ ಜನತೆಗೆ ಭಾರತೀಯ ಪೌರತ್ವ ನೀಡುವ ಅಧಿಕಾರವನ್ನು ಗುಜರಾತ್‍ನ ಅಹಮದಾಬಾದ್, ಗಾಂಧಿನಗರ ಮತ್ತು ಕಛ್ ನಗರಗಳ ಜಿಲ್ಲಾಧಿಕಾರಿಗಳಿಗೆ ಕೊಡಮಾಡಿದೆ ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.

ಇದರೊಂದಿಗೆ ಪಾಕಿಸ್ತಾನದಿಂದ ಬಂದು ಅಹಮದಾಬಾದ್‍ನಲ್ಲಿ ವಾಸಿಸುತ್ತಿರುವ ಒಟ್ಟು 1,167 ಹಿಂದೂ ನಿರಾಶ್ರಿತರು ಭಾರತೀಯ ಪೌರತ್ವವನ್ನು ಪಡೆದಂತಾಗಿದೆ ಎಂದು ಅದು ಹೇಳಿದೆ.

RELATED ARTICLES

Latest News