Saturday, April 20, 2024
Homeರಾಜ್ಯಕೆಎಸ್‌ಆರ್‌ಟಿಸಿಗೆ 5 ಪ್ರಶಸ್ತಿಗಳ ಗರಿ

ಕೆಎಸ್‌ಆರ್‌ಟಿಸಿಗೆ 5 ಪ್ರಶಸ್ತಿಗಳ ಗರಿ

ಬೆಂಗಳೂರು,ಫೆ.18- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ವಲ್ರ್ಡ್ ಮ್ಯಾನುಫ್ಯಾಕ್ಟರಿಂಗ್ ಕಾಂಗ್ರೆಸ್ ಮತ್ತು ವಲ್ರ್ಡ್ ಮಾರ್ಕೆಟಿಂಗ್ ಕಾಂಗ್ರೆಸ್‍ನ 5 ಪ್ರಶಸ್ತಿಗಳು ಲಭಿಸಿವೆ. ಅಲ್ಲದೆ ನಿಗಮದ ಮಂಡಳಿ ಕಾರ್ಯದರ್ಶಿ ಹಾಗೂ ಮುಖ್ಯ ಸಾರ್ವಜನಿಕ ಸಂಪರ್ಕಾಕಾಧಿರಿ ಡಾ.ಟಿ.ಎಸ್.ಲತಾ ಅವರಿಗೆ ಜಾಗತಿಕ ಮಹಿಳಾ ನಾಯಕಿ ಪ್ರಶಸ್ತಿ ಲಭಿಸಿದೆ.

ವಿದ್ಯುತ್ ವಾಹನಗಳ ಕೈಗಾರಿಕಾ ನಾಯಕತ್ವ ಪ್ರಶಸ್ತಿ, ಇವಿ ಪವರ್ ಪ್ಲಸ್ ಜಾಗತಿಕ ಬ್ರಾಂಡ್ ಉತ್ಕøಷ್ಟತೆ ಪ್ರಶಸ್ತಿ, ಅತ್ಯುತ್ತಮ ಬ್ರಾಂಡಿಂಗ್ ಮತ್ತು ಮಾರ್ಕೆಂಟಿಂಗ್ ಉಪಕ್ರಮಕ್ಕಾಗಿ ವರ್ಷದ ವ್ಯವಹಾರಿಕ ನಾಯಕತ್ವ ಪ್ರಶಸ್ತಿ, ಅತ್ಯುತ್ತಮ ವಿನೂತನ ಉಪಕ್ರಮಕ್ಕಾಗಿ ಜಾಗತಿಕ ಮಾನವ ಸಂಪನ್ಮೂಲ ಉತ್ಕøಷ್ಟತೆ ಪ್ರಶಸ್ತಿ, ಕಾರ್ಮಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಕ್ಕೆ ಜಾಗತಿಕ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿಯು ನಿಗಮಕ್ಕೆ ದೊರೆತಿದೆ.

ಮುಂಬೈ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಯುಎಸ್‍ನ ನಿನಾ ಇ ಉಡರ್ಡ ಅಸೋಸಿಯೇಟ್ಸ್ ಮುಖ್ಯಸ್ಥ ನಿನಾ ಇ ಉಡರ್ಡ, ದುಬೈನ ಓಜೋನ್ ಗ್ರೂಪ್ ಡಾ.ಓವಿಲಿಯಾ ಫೆರ್ನಾಂಡಿಸ್ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಟಿ.ಎಸ್.ಲತಾ, ವಿಭಾಗೀಯ ತಾಂತ್ರಿಕ ಎಂಜಿನಿಯರ್ ಸತೀಶ್, ವಿಭಾಗೀಯ ತಾಂತ್ರಿಕ ಶಿಲ್ಪಿ ಸಿ.ಸೌಮ್ಯ, ಸಹಾಯಕ ಆಡಳಿತಾಧಿಕಾರಿ ಎಸ್.ಶಿಭಾ ಅವರುಗಳು ಪ್ರಶಸ್ತಿ ಸ್ವೀಕರಿಸಿದರು.

RELATED ARTICLES

Latest News