ಚೆನ್ನೈ,ಏ. 21: ರಾಹುಲ್ ಗಾಂಧಿ ಅವರು ತಮಿಳುನಾಡಿನಲ್ಲಿ ಮಿತ್ರ ಪಕ್ಷವಾಗಿರುವ ಡಿಎಂಕೆ ಬದಲು ಎಐಎಡಿಎಂಕೆ ಪಕ್ಷವನ್ನು ಹಾಡಿ ಹೊಗಳಿರುವ ಘಟನೆ ನಡೆದಿದೆ.ತಮಿಳುನಾಡು ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದೆ. ಎಲ್ಲಾ ಪ್ರಮುಖ ಪಕ್ಷಗಳ ನಾಯಕರು ಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಪ್ರಚಾರ ಕಾರ್ಯ ನಡೆಸಿದ್ದು, ಭಾಷಣದ ಸಂದರ್ಭದಲ್ಲಿ ಡಿಎಂಕೆಯನ್ನು ಹೊಗಳುವುದು ಬಿಟ್ಟು ಎಐಎಡಿಎಂಕೆಯನ್ನು ಹೊಗಳಿದ್ದಾರೆ.
ಮಾತಿನ ಭರದಲ್ಲಿ ಅವರು ತಮಿಳುನಾಡು ಅಭಿವೃದ್ಧಿಯಲ್ಲಿ ಎಐಎಡಿಎಂಕೆ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದರು ನಂತರ ಎಚ್ಚೆತ್ತುಕೊಂಡ ಅವರು, ಎಐಎಡಿಎಂಕೆ ಮೂಲಕ ಬಿಜೆಪಿ ಈಗ ತಮಿಳುನಾಡಿಗೆ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಎಐಎಡಿಎಂಕೆ ಭ್ರಷ್ಟಾಚಾರದಲ್ಲಿ ಮುಳುಗಿದೆ, ಅದಕ್ಕಾಗಿಯೇ ಪಳನಿಸ್ವಾಮಿ ಬಿಜೆಪಿಗೆ ಶರಣಾಗಿದ್ದಾರೆ ಎಂದು ಅವರು ಹೇಳಿದರು.
ಕನ್ಯಾಕುಮಾರಿ ಜಿಲ್ಲೆಯು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿರುವ ಜಿಲ್ಲೆಯಾಗಿದೆ. ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದಲ್ಲಿ ಆರು ವಿಧಾನಸಭಾ ಸ್ಥಾನಗಳಿವೆ: ನಾಗರಕೋಯಿಲ್, ಕೊಳಚೆಲ್, ಪದ್ಮನಾಭಪುರಂ, ವಿಲವನ್ಕೋಡ್, ಕಿಳ್ಳಿಯೂರು ಮತ್ತು ಕನ್ಯಾಕುಮಾರಿ.
ಈ ಸ್ಥಾನಗಳಲ್ಲಿ, ಬಿಜೆಪಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ, ಎಐಎಡಿಎಂಕೆ ಒಂದು ಸ್ಥಾನ ಮತ್ತು ತಮಿಳು ಮನಿಲಾ ಕಾಂಗ್ರೆಸ್ ಒಂದು ಸ್ಥಾನವು ಎನ್ಡಿಎಯನ್ನು ಪ್ರತಿನಿಧಿಸುತ್ತದೆ. ಕಾಂಗ್ರೆಸ್ ಮೂರು, ಡಿಎಂಕೆ ಎರಡು ಮತ್ತು ಸಿಪಿಎಂ ಒಂದು ಸ್ಥಾನದಲ್ಲಿ ಸ್ಪರ್ಧಿಸುತ್ತಿದೆ.
