ಬೆಂಗಳೂರು, ಏ.23- ಚಿನ್ನ ಖರೀದಿಗಾಗಿ ಜ್ಯೂವೆಲರಿ ಅಂಗಡಿಗೆ ಹೋಗಿದ್ದ ವ್ಯಕ್ತಿಯಿಂದ 2 ಕೋಟಿ ಹಣ ಪಡೆದ ಮಳಿಗೆಯ ಮಾಲೀಕ ಆಭರಣಗಳನ್ನು ನೀಡದೇ ಹಣವನ್ನೂ ಹಿಂದಿರುಗಿಸದೇ ವಂಚಿಸಿರುವ ಘಟನೆ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸರ್ಜಾಪುರ ಮೂಲದ ಪುನೀತ್ ಎಂಬುವವರು ಚಿನ್ನ ಖರೀದಿ ಮಾಡಲು ಯೋಚಿಸಿದ್ದರು. ಈ ವಿಷಯ ಅವರ ಸಂಬಂಧಿ ಮಹಿಳೆ ಸವಿತಾರಿಗೆ ತಿಳಿದು ಹೆಚ್ಎಸ್ಆರ್ ಲೇಔಟ್ನಲ್ಲಿರುವ ಎಂಪಿ ಚಿನ್ನದ ಮಳಿಗೆಯಲ್ಲಿ ವೇಸ್ಟೇಜ್ ಜಾರ್ಜ್ ತುಂಬಾ ಕಡಿಮೆ ಇರುತ್ತದೆ ಎಂದು ನಂಬಿಸಿ ಪುನೀತ್ರನ್ನು ಮಳಿಗೆಗೆ ಕರೆದುಕೊಂಡು ಹೋಗಿದ್ದಾರೆ.
ಆ ಸಂದರ್ಭದಲ್ಲಿ ಮಾಲೀಕ ಇಂದರ್ ಚಂದ್ ಅವರು ಮಳಿಗೆಯಲ್ಲಿದ್ದರು. ಪುನೀತ್ ಅವರು ತೆಗೆದುಕೊಂಡು ಹೋಗಿದ್ದ ಹಣದ ಬಾಕ್್ಸಗಳನ್ನು ಪಡೆದು ಅರ್ಧ ಗಂಟೆ ಹೊರಗೆ ಇರಿ ಎಂದು ಹೇಳಿ ಹಣ ಎಣಿಸುವುದಾಕ್ಕಾಗಿ ಒಳಗೆ ಹೋದವರು ವಾಪಸ್ ಬಂದಿಲ್ಲ.
ಮಳಿಗೆಯ ಸಿಬ್ಬಂದಿಯನ್ನು ಮಾಲೀಕನ ಬಗ್ಗೆ ವಿಚಾರಿಸಿದಾಗ ಪುನೀತ್ ಅವರನ್ನೇ ಬೈದು ಕಳುಹಿಸಿದ್ದಾರೆ.ಮಾಲೀಕನ ಮೊಬೈಲ್ಗೆ ಕರೆ ಮಾಡಿದಾಗ ನಿಮ ಸಂಬಂಧಿ ಮಹಿಳೆ ಜೊತೆ ಮಾತನಾಡುವುದಾಗಿ ಉಡಾಫೆ ಉತ್ತರ ಕೊಟ್ಟಿದ್ದಾರೆ.
ಬರೋಬ್ಬರಿ 2 ಕೋಟಿ ಹಾರ್ಡ್ ಕ್ಯಾಶ್ ಕೊಟ್ಟಿರುವ ಪುನೀತ್ ಕಂಗಾಲಾಗಿ ಪೊಲೀಸರಿಗೆ ಸಂಬಂಧಿ ಮಹಿಳೆ ಸವಿತಾ ಮತ್ತು ಅವರ ಸ್ನೇಹಿತರು ಹಾಗೂ ಮಳಿಗೆ ಮಾಲೀಕ ಇಂದರ್ ಚಂದ್ ವಿರುದ್ಧ ದೂರು ನೀಡಿದ್ದಾರೆ.
