ಬೆಂಗಳೂರು,ಏ.23- ವಿಶ್ವ ವಿಖ್ಯಾತ ಮೈಸೂರು ರೇಷ್ಮೆ ಪರಂಪರೆಗೆ ಕೊನೆಗೂ ದೊಡ್ಡ ಜಯ ಸಿಕ್ಕಿದೆ. ಕ್ರೀಡಾ ಇಲಾಖೆಗೆ ಹಸ್ತಾಂತರವಾಗಿದ್ದ ಕರ್ನಾಟಕ ರೇಷೆ ಕೈಗಾರಿಕಾ ನಿಗಮದ(ಕೆಎಸ್‌ಐಸಿ) ಭೂಮಿಯನ್ನು ಅಧಿಕೃತವಾಗಿ ಮರಳಿ ಪಡೆಯಲಾಗಿದೆ.
ಸರ್ಕಾರದ ಈ ನಿರ್ಧಾರ ಕಾರ್ಮಿಕರು ಮತ್ತು ಕನ್ನಡಿಗರ ಸಂಘಟಿತ ಹೋರಾಟದ ಫಲ ಎಂದು ವಿಶ್ಲೇಷಿಸಲಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಕೆಎಸ್‌ಐಸಿ ಭೂಮಿ ಪರಭಾರೆ ವಿಚಾರ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಸರ್ಕಾರದ ಈ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸದನದ ಒಳಗೆ ಮತ್ತು ಹೊರಗೆ ನಡೆಸಿದ ನಿರಂತರ ಹೋರಾಟ ಹಾಗೂ ಪರಿಸರವಾದಿಗಳು ಮತ್ತು ಕನ್ನಡಪರ ಸಂಘಟನೆಗಳ ಒತ್ತಡಕ್ಕೆ ಮಣಿದ ಸರ್ಕಾರ, ಅಂತಿಮವಾಗಿ ಭೂಮಿಯನ್ನು ರೇಷೆ ನಿಗಮಕ್ಕೇ ಮರಳಿಸಿದೆ.
ಇದು ಕರ್ನಾಟಕದ ಜನತೆಯ ಹಾಗೂ ಮೈಸೂರು ರೇಷೆ ಪರಂಪರೆಯನ್ನು ನಂಬಿರುವ ಸಾವಿರಾರು ಕಾರ್ಮಿಕರ ಸಂಘಟಿತ ಹೋರಾಟಕ್ಕೆ ಸಂದ ಜಯ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕಳೆದ ಮಾರ್ಚ್ 9ರಂದು ವಿಧಾನಸಭೆಯಲ್ಲಿ ಸ್ವತಃ ರೇಷೆ ಸಚಿವರೇ ಈ ಬಗ್ಗೆ ಘೋಷಣೆ ಮಾಡಿದ್ದರೂ, ಅದು ಕೇವಲ ಕಾಗದದ ಮೇಲೆ ಉಳಿಯುವ ಭೀತಿ ಇತ್ತು. ಆದರೆ ನಮ ನಿರಂತರ ಒತ್ತಡ, ಸದನದ ಒಳಗೆ ಮತ್ತು ಹೊರಗೆ ನಡೆಸಿದ ತೀವ್ರ ಹೋರಾಟ ಹಾಗೂ ಸಾರ್ವಜನಿಕರ ಬೆಂಬಲದಿಂದಾಗಿ ಸರ್ಕಾರ ತನ್ನ ನಿರ್ಧಾರವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿದೆ ಎಂದು ಹೇಳಿದ್ದಾರೆ.
ಮೊದಲ ದಿನದಿಂದಲೂ ಈ ಭೂಮಿ ಪರಭಾರೆಯಾಗುವುದರ ವಿರುದ್ಧ ನಾನು ಕಠಿಣ ನಿಲುವು ತಳೆದಿದ್ದೆ. ವಿಧಾನಸಭೆಯಲ್ಲಿ ಧ್ವನಿ ಎತ್ತುವ ಮೂಲಕ ಹಾಗೂ ಕೆ.ಎಸ್.ಐ.ಸಿ ಕಾರ್ಮಿಕರು, ಪರಿಸರವಾದಿಗಳು ಮತ್ತು ಕನ್ನಡಪರ ಸಂಘಟನೆಗಳನ್ನು ಒಗ್ಗೂಡಿಸಿ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದೆವು. ಈ ಸಂಘಟಿತ ಧ್ವನಿಗೆ ಇಂದು ಪ್ರತಿಫಲ ಸಿಕ್ಕಿದೆ.
ಸರ್ಕಾರದ ಈ ನಿರ್ಧಾರ ಕೇವಲ ಒಂದು ಆಡಳಿತಾತಕ ಬದಲಾವಣೆಯಲ್ಲ. ಬದಲಾಗಿ ಜನರ ಇಚ್ಛಾಶಕ್ತಿಯ ಜಯ. ಮೈಸೂರು ಸಿಲ್‌್ಕ ಎಂಬುದು ಕೇವಲ ಒಂದು ಬ್ರಾಂಡ್ ಅಲ್ಲ; ಅದು ಕನ್ನಡಿಗರ ಹೆಮೆ, ಪರಂಪರೆ ಮತ್ತು ನಮ ಅಸಿತೆ. ಈ ಪರಂಪರೆಗೆ ಚ್ಯುತಿ ತರುವ ಯಾವುದೇ ಪ್ರಯತ್ನವನ್ನು ನಾವು ಸಹಿಸುವುದಿಲ್ಲ ಎಂಬ ಸಂದೇಶವನ್ನು ಈ ಹೋರಾಟ ರವಾನಿಸಿದೆ ಎಂದು ತಿಳಿಸಿದ್ದಾರೆ.
ಈ ಐತಿಹಾಸಿಕ ಗೆಲುವು ಭದ್ರವಾಗಿ ನಿಂತ ಪ್ರತಿ ಕಾರ್ಮಿಕನಿಗೆ, ಧ್ವನಿ ಎತ್ತಿದ ಪ್ರತಿ ಕನ್ನಡಿಗನಿಗೆ ಮತ್ತು ನಾಡಿನ ಪರಂಪರೆಯನ್ನು ಪ್ರೀತಿಸುವ ಪ್ರತಿ ನಾಗರಿಕನಿಗೆ ಸಲ್ಲುತ್ತದೆ. ಜನರ ಹಿತಾಸಕ್ತಿಯನ್ನು ಮರೆತು ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ಕನ್ನಡಿಗರ ಪ್ರಬಲ ಪ್ರತಿರೋಧ ಇದ್ದೇ ಇರುತ್ತದೆ ಎಂಬುದಕ್ಕೆ ಇದೊಂದು ಸಾಕ್ಷಿ. ನಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಕೆಎಸ್‌ಐಸಿಯಂತಹ ಸಂಸ್ಥೆಗಳನ್ನು ರಕ್ಷಿಸಲು, ಬಲಪಡಿಸಲು ಮತ್ತು ಅದರ ಗೌರವವನ್ನು ಎತ್ತಿ ಹಿಡಿಯಲು ನಾವು ಸದಾ ಸನ್ನದ್ಧರಾಗಿರುತ್ತೇವೆ ಎಂದು ಅಶೋಕ್ ಎಚ್ಚರಿಸಿದ್ದಾರೆ.
