ಬೆಂಗಳೂರು,ಮೇ30- ಹಾಪ್‌ಕಾಮ್ಸೌ ವತಿಯಿಂದ ಅಂಚೆ ಇಲಾಖೆ ಸಹಯೋಗದಲ್ಲಿ ಮಾವು ಹಾಗೂ ಇತರ ವಿಶೇಷ ಹಣ್ಣುಗಳನ್ನು ಅಂಚೆ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ರೈತರ ಅಂಚೆ ಎಂಬ ವಿಶಿಷ್ಟ ಆನ್‌ಲೈನ್ ವ್ಯಾಪಾರ ಸೇವೆಗೆ ಇಂದು ಚಾಲನೆ ನೀಡಲಾಯಿತು.
ಬೆಂಗಳೂರು ಅಂಚೆ ಮಹಾ ಕಾರ್ಯಾಲಯ(ಜಿಪಿಒ)ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಅಂಚೆ ವಲಯದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ.ಪ್ರಕಾಶ್, ಬೆಂಗಳೂರು ಮುಖ್ಯಾಲಯದ ಕ್ಷೇತ್ರ ಅಂಚೆ ಸೇವೆಗಳ ನಿರ್ದೇಶಕಿ ತಾರಾ.ವಿ, ತೋಟಗಾರಿಕೆ ಇಲಾಖೆ ನಿರ್ದೇಶಕ ಇಬ್ರಾಹಿಂ ಮೈಗೂರ್, ಹಾಪ್‌ಕಾಮ್ಸೌ ಅಧ್ಯಕ್ಷ ಎ.ಎಸ್.ಚಂದ್ರೇಗೌಡ, ಉಪಾಧ್ಯಕ್ಷ ನಾರಾಯಣಗೌಡ ಮೊದಲಾದ ಗಣ್ಯರು ರೈತರ ಅಂಚೆ ಸೇವೆಗೆ ಚಾಲನೆ ನೀಡಿದರು.
ಪತ್ರಗಳನ್ನು ಮನೆಗಳಿಗೆ ತಲುಪಿಸುವ ರೀತಿಯಲ್ಲೇ ಅಂಚೆ ಇಲಾಖೆ ಹಣ್ಣುಗಳನ್ನು ತಲುಪಿಸಲಿದೆ. ಮಾವಿನ ಹಣ್ಣಿನ ಕಾಲವಾಗಿರುವುದರಿಂದ 3 ಹಾಗೂ 5 ಕೆಜಿ ತೂಕದ ಬಾಕ್‌್ಸಗಳಲ್ಲಿ ಅಂಚೆ ಮೂಲಕ ತಲುಪಿಸಲಾಗುತ್ತದೆ.
ಬೆಂಗಳೂರು ಮಹಾನಗರದ ಎಲ್ಲಾ ಬಡಾವಣೆಗಳಲ್ಲಿ ಹಾಪ್‌ಕಾಮ್ಸೌ ಮಳಿಗೆಗಳು ಇಲ್ಲದ ಕಾರಣ ರೈತರ ಅಂಚೆ ಸೇವೆ ಪ್ರಾರಂಭಿಸಿದ್ದು, ಆನ್‌ಲೈನ್ ಮೂಲಕ ಹಣ ಪಾವತಿಸಿ ಆರ್ಡರ್ ಮಾಡಿದ 24 ಗಂಟೆಯೊಳಗೆ ಗ್ರಾಹಕರ ಮನೆಯ ಬಾಗಿಲಿಗೆ ಮಾವಿನಹಣ್ಣಿನ ಬಾಕ್‌್ಸ ತಲುಪಲಿದೆ ಎಂದು ತಿಳಿಸಿದೆ.
ಅಂಚೆ ಇಲಾಖೆಯು ಮಾವು ಬೆಳೆಗಾರರೊಂದಿಗೆ ಬುಕ್ ನೌ, ಪೇ ಲೇಟರ್ ಒಪ್ಪಂದದಡಿ ಪಾರ್ಸಲ್ ಸೇವೆಯನ್ನು ಒದಗಿಸುತ್ತಿದೆ. ಇದರಿಂದ ರೈತರಿಗೆ ಸೂಕ್ತ ಬೆಲೆ, ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳು ದೊರೆಯಲು ಅನುಕೂಲವಾಗಲಿದೆ.
ರೈತರು ಆರ್ಡರ್ ಮಾಡಿದ ಗ್ರಾಹಕರ ಮಾವಿನ ಹಣ್ಣುಗಳ ಪಾರ್ಸಲ್‌ಗಳನ್ನು ಜಿಪಿಒಗೆ ಸಂಜೆ ವೇಳೆಗೆ ಕಲ್ಪಿಸುತ್ತಾರೆ. ನಂತರ ಅವುಗಳಿಗೆ ಬಾರ್ ಕೋಡ್ ಸ್ಟಿಕರ್ ಅಂಟಿಸಿ ಸ್ಪೀಡ್ ಪಾರ್ಸಲ್ ರೂಪದಲ್ಲಿ ಬುಕ್ಕಿಂಗ್ ಮಾಡಲಾಗುತ್ತದೆ. ಬುಕ್ಕಿಂಗ್ ನಂತರ ಅಂಚೆ ಕಚೇರಿಗಳಿಗೆ ಪಾರ್ಸಲ್ ರವಾನಿಸಲಾಗುತ್ತದೆ. ಮರು ದಿನ ಗ್ರಾಹಕರಿಗೆ ವಿತರಣೆ ಮಾಡಲಾಗುವುದು ಎಂದು ಅಂಚೆ ಇಲಾಖೆ ತಿಳಿಸಿದೆ.
2019ರಿಂದ ಇದುವರೆಗೆ 3,81,183 ಕೆಜಿ ತೂಕದ 1,13,347 ಮಾವಿನಹಣ್ಣಿನ ಪಾರ್ಸಲ್‌ಗಳನ್ನು ಗ್ರಾಹಕರಿಗೆ ತಲುಪಿಸಲಾಗಿದೆ ಎಂದು ಅಂಚೆ ಇಲಾಖೆ ತಿಳಿಸಿದೆ.
