Homeಬೆಂಗಳೂರುಬೆಂಗಳೂರಿಗರೇ ಗಮನಿಸಿ, ಆಸ್ತಿ ತೆರಿಗೆ ವಿನಾಯ್ತಿಗೆ ನಾಳೆ ಕೊನೆ ದಿನ

ಬೆಂಗಳೂರಿಗರೇ ಗಮನಿಸಿ, ಆಸ್ತಿ ತೆರಿಗೆ ವಿನಾಯ್ತಿಗೆ ನಾಳೆ ಕೊನೆ ದಿನ

property tax exemption

ಬೆಂಗಳೂರು, ಮೇ. 30 – ನಗರದ ನಾಗರಿಕರೇ, ನಾಳೆ ಒಳಗೆ ನೀವೂ ನಿಮ ಮನೆಯ ಆಸ್ತಿ ತೆರಿಗೆ ಪಾವತಿಸಿದರೆ ಶೇ.5 ರಷ್ಟು ವಿನಾಯಿತಿ ದೊರೆಯಲಿದೆ. ಇಲ್ಲದಿದ್ದರೆ ನೀವು ಪೂರ್ತಿ ತೆರಿಗೆ ಪಾವತಿಸುವುದು ಅನಿವಾರ್ಯವಾಗಲಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ 2026-27ನೇ ಸಾಲಿನ ಆಸ್ತಿ ತೆರಿಗೆ ಪಾವತಿಗೆ ನೀಡಲಾಗುತ್ತಿರುವ ಶೇ.5 ರಷ್ಟು ರಿಯಾಯಿತಿಗೆ ನಾಳೆ ಕಡೆ ದಿನ ಅಗಿದ್ದು ಕಟ್ಟಡ ಮಾಲೀಕರು ನಾಳೆಯೊಳಗೆ ಬಾಕಿ ಅಸ್ತಿ ತೆರಿಗೆ ಕಟ್ಟಿ ವಿನಾಯಿತಿ ಪಡೆದುಕೊಳ್ಳಿ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಮನವಿ ಮಾಡಿಕೊಂಡಿದ್ದಾರೆ.

ಜಿಬಿಎ ವ್ಯಾಪ್ತಿಯ ಕೇಂದ್ರ, ಪಶ್ಚಿಮ, ಪೂರ್ವ, ದಕ್ಷಿಣ ಹಾಗೂ ಉತ್ತರ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಆಸ್ತಿ ತೆರಿಗೆ ಪಾವತಿಸುವ ನಾಗರಿಕರಿಗೆ ಶೇ.5 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಮೇ 31, 2026ರೊಳಗೆ ತೆರಿಗೆ ಪಾವತಿಸಿದರೆ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ. ಜೂನ್‌ ತಿಂಗಳಿಂದ ಯಾವುದೇ ರಿಯಾಯಿತಿ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಆದ್ದರಿಂದ ನಾಗರಿಕರು ವಿಳಂಬ ಮಾಡದೆ ತಕ್ಷಣವೇ ಆಸ್ತಿ ತೆರಿಗೆ ಪಾವತಿಸಿ ರಿಯಾಯಿತಿಯ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.ಆಸ್ತಿ ತೆರಿಗೆಯನ್ನು ಆನ್‌ಲೈನ್‌‍ ಮೂಲಕ ಪಾವತಿಸಲು ಅವಕಾಶ ಇದೆ.ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಅಥವಾ ಸಮಸ್ಯೆಗಳಿದ್ದಲ್ಲಿ ಜಿಬಿಎ ಸಹಾಯವಾಣಿ ಸಂಖ್ಯೆ 1533 ಅನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

RELATED ARTICLES

Latest News