ಬೆಂಗಳೂರು, ಜೂ.7- ತವರು ಕ್ಷೇತ್ರ ಕನಕಪುರದ ಮತದಾರರಿಗೆ ಕೃತಜ್ಞತಾ ಸಮರ್ಪಣ ಸಮಾವೇಶಕ್ಕೆ ತೆರಳಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಮ ಮೆಟ್ರೋ ಅವಲಂಬಿಸಿದರು.
ಇಂದು ಬೆಳಗ್ಗೆ ತಮ ಮನೆಯಿಂದ ಹೊರಟು ವಿಧಾನಸೌಧಕ್ಕೆ ತೆರಳಿ, ಅಲ್ಲಿಂದ ಮೆಟ್ರೋದಲ್ಲಿ ಕನಕಪುರ ರಸ್ತೆಯ ಕೊನೆ ನಿಲ್ದಾಣ ತಲಘಟ್ಟಪುರದ ರೇಷೆ ಸಂಸ್ಥೆವರೆಗೂ ಪ್ರಯಾಣ ಬೆಳೆಸಿದರು.
ಮೆಟ್ರೋ ಪ್ರಯಾಣದಿಂದ ಸಮಯವೂ ಉಳಿತಾಯವಾಗುತ್ತದೆ. ಎಲೆಕ್ಟ್ರಾನಿಕ್ಸಿಟಿಗೆ ತೆರಳುವಾಗ ಮೆಟ್ರೋದಲ್ಲಿ ಹೋಗುವುದು ಬಹಳ ಅನುಕೂಲಕರವಾಗಿದೆ. ಇನ್ನು ಮುಂದೆ ಈ ಬಗ್ಗೆ ಹೆಚ್ಚು ಗಮನಹರಿಸಬೇಕೆಂದು ಹೇಳಿದರು.
ಈ ವೇಳೆ ಜೊತೆಯಲ್ಲಿದ್ದ ಅಧಿಕಾರಿಗಳು ಮೆಟ್ರೋ ಪ್ರಯಾಣದಿಂದಾಗುವ ಅನುಕೂಲಗಳ ಕುರಿತು ಮುಖ್ಯಮಂತ್ರಿಯವರಿಗೆ ವಿವರಿಸಿದರು. ಯಾವುದೇ ವಿಐಪಿ ಶಿಷ್ಟಾಚಾರಗಳಿಲ್ಲದೇ ಸಾಮಾನ್ಯರಂತೆ ಮುಖ್ಯಮಂತ್ರಿ ರೈಲಿನಲ್ಲಿ ಪ್ರಯಾಣಿಸಿದರು. ಸಹ ಪ್ರಯಾಣಿಕರ ಜೊತೆ ಸಮಾಲೋಚನೆ ನಡೆಸಿದರು. ಕೈ ಕುಲುಕಿ ಅಭಿನಂದನೆ ಸಲ್ಲಿಸಿದರು.




ಮೆಟ್ರೋದಲ್ಲಿದ್ದ ಮಗುವೊಂದಕ್ಕೆ ಚಾಕೊಲೇಟ್ ನೀಡಿದರು. ಸಹ ಪ್ರಯಾಣಿಕರು ಮುಖ್ಯಮಂತ್ರಿಯವರ ಜೊತೆ ಸೆಲ್ಫಿ ತೆಗೆದುಕೊಂಡು ಕೈ ಕುಲುಕಿ ಧನ್ಯತಾಭಾವ ಪ್ರದರ್ಶಿಸಿದರು.
ಯಾವುದೇ ಹಮು-ಬಿಮ್ಮು ಇಲ್ಲದೇ ನಗು ಮುಖದಿಂದ ಎಲ್ಲಾ ಪ್ರಯಾಣಿಕರೊಂದಿಗೆ ಬೆರೆಯುವ ಮೂಲಕ ಡಿ.ಕೆ.ಶಿವಕುಮಾರ್ ಗಮನ ಸೆಳೆದರು. ಕೆಲವರು ಫೋಟೋ ತೆಗೆದುಕೊಳ್ಳಲು ಕಷ್ಟಪಡುವುದನ್ನು ಕಂಡು ಮುಖ್ಯಮಂತ್ರಿಯವರೇ ಮೊಬೈಲ್ ಪಡೆದು ಫೋಟೋ ತೆಗೆದು ಕೊಟ್ಟರು.
ನಂತರ ಕೊನೆಯ ನಿಲ್ದಾಣದಲ್ಲಿ ಇಳಿದು ಕಾರಿನಲ್ಲಿ ಕನಕಪುರಕ್ಕೆ ಪ್ರಯಾಣಿಸಿದರು. ಮುಖ್ಯಮಂತ್ರಿ ಹಾಗೂ ಅವರ ಕಚೇರಿಯ ಸಿಬ್ಬಂದಿಗಳ ಮೆಟ್ರೋ ಪ್ರಯಾಣದಿಂದ ಬೆಂಗಳೂರಿನಲ್ಲಿ ಜೀರೋ ಟ್ರಾಫಿಕ್ನಿಂದ ಜನರಿಗಾಗುವ ಸಮಸ್ಯೆ ತಗ್ಗಿದ್ದು, ಮೆಚ್ಚುಗೆಗೆ ಪಾತ್ರವಾಯಿತು.
ನಂತರ ಕನಕಪುರ ವಿಧಾನಸಭಾ ಕ್ಷೆತ್ರದ ಹಾರೋಹಳ್ಳಿ ಸರ್ಕಲ್, ತುಂಗಣಿ, ಟಿ.ಬೇಕುಪ್ಪೆ ಸರ್ಕಲ್, ನಾರಾಯಣಪುರ, ಕೋಡಿಹಳ್ಳಿ, ಹೇರಿಂದ್ಯಾಪನಹಳ್ಳಿ, ಕೊಳಗೊಂಡನಹಳ್ಳಿ, ಹುಣಸನಹಳ್ಳಿ, ಹೊಸ ದುರ್ಗಾ, ಹೂಕುಂದ, ಮುಳ್ಳಳ್ಳಿ, ನಳ್ಳಳ್ಳಿ, ದೊಡ್ಡ ಆಲಹಳ್ಳಿ, ಸಾತನೂರು, ಕಬ್ಬಾಳು, ಕುರುಬರಹಳ್ಳಿ ಗೇಟ್, ಸೋಮದ್ಯಾಪನಹಳ್ಳಿ, ಹಳ್ಳಿ ಮಾರನ ಹಳ್ಳಿ, ಹಳೇ ಪೊಲೀಸ್ ಸ್ಟೇಷನ್ ಸರ್ಕಲ್, ಮೇಗಳ ಬೀದಿ, ಕನಕಪುರ ನಗರ, ಚನಬಸಪ್ಪನ ಸರ್ಕಲ್ ಸೇರಿದಂತೆ ಹಲವು ಕಡೆಗಳಲ್ಲಿ ಡಿ.ಕೆ.ಶಿವಕುಮಾರ್ ರೋಡ್ ಶೋ ಹಾಗೂ ಜನ ಸಂಪರ್ಕ ಸಭೆಗಳನ್ನು ನಡೆಸಿದರು.
ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ತವರು ಕ್ಷೇತ್ರಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂದಿಸಲು ಜನ ಸಾಗರವೇ ನೆರೆದಿತ್ತು. ಮನೆಯ ಮಗ ಉನ್ನತ ಹುದ್ದೆಗೇರಿದ ಸಂಭ್ರಮ ಪ್ರತಿಯೊಬ್ಬರ ಮುಖದಲ್ಲೂ ಎದ್ದು ಕಾಣುತ್ತಿತ್ತು. ಮುಖ್ಯಮಂತ್ರಿಯ ಭೇಟಿ ಹಿನ್ನೆಲೆಯಲ್ಲಿ ಫ್ಲೆಕ್್ಸ ಮತ್ತು ಬ್ಯಾನರ್ಗಳು ರಾರಾಜಿಸುತ್ತಿದ್ದವು. ಕನಕಪುರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
