Homeರಾಜಕೀಯಜೆಡಿಎಸ್‌ ಕಾರ್ಯಕರ್ತರಿಗೂ ಸಿಎಂ ಡಿ.ಕೆ.ಶಿವಕುಮಾರ್‌ ಗಾಳ

ಜೆಡಿಎಸ್‌ ಕಾರ್ಯಕರ್ತರಿಗೂ ಸಿಎಂ ಡಿ.ಕೆ.ಶಿವಕುಮಾರ್‌ ಗಾಳ

Even JDS workers always keep the door of my house open. | DK Shivakumar

ಬೆಂಗಳೂರು, ಜೂ.7- ಕಾಂಗ್ರೆಸ್‌‍ ಕಾರ್ಯ ಕರ್ತರಿಗಷ್ಟೇ ಅಲ್ಲ ಜೆಡಿಎಸ್‌‍ನ ಕಾರ್ಯಕರ್ತರಿಗೂ ನನ್ನ ಮನೆಯ ಬಾಗಿಲು ಸದಾ ತೆರೆದಿರುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಪ್ರಥಮ ಬಾರಿಗೆ ತವರು ಕ್ಷೇತ್ರ ಕನಕಪುರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ವಿವಿಧೆಡೆ ಆಯೋಜಿಸಿದ್ದ ಕೃತಜ್ಞತಾ ಸಮರ್ಪಣಾ ಯಾತ್ರೆಯಲ್ಲಿ ಭಾಗವಹಿಸಿದ್ದರು.

ಹಾರೋಹಳ್ಳಿಯಲ್ಲಿ ಮಾತನಾಡಿದ ಅವರು, ಹಿಂದೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಕಾರಣಕ್ಕಾಗಿ ಅನಿತಾ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿಯವರಿಗೆ ನಾವು ಬೆಂಬಲ ನೀಡಿದ್ದೆವು. ಅನಂತರ ಏನಾಯಿತು ಎಂದು ಚರ್ಚೆ ಮಾಡಲು ಬಯಸುವುದಿಲ್ಲ ಎಂದಿದ್ದಾರೆ.

ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌‍ಗೆ ಮಾತ್ರ ಅಲ್ಲ, ಜೆಡಿಎಸ್‌‍ ಕಾರ್ಯಕರ್ತರಿಗೂ ನನ್ನ ಸಹಕಾರ ಇದೆ. ನನ್ನ ಮನೆಯ ಬಾಗಿಲು ಜೆಡಿಎಸ್‌‍ ಕಾರ್ಯಕರ್ತರಿಗಾಗಿಯೂ ತೆರೆದಿರುತ್ತದೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಜನರ ಋಣ ತೀರಿಸುವ ಕೆಲಸ ಮಾಡಬೇಕು. ನಾನು ಮುಖ್ಯಮಂತ್ರಿಯಾಗಿದ್ದರೂ ನಿಮ ಮನೆಯ ಮಗ ಹಾಗೂ ತಾಲ್ಲೂಕಿನ ಸೇವಕ. 2028ರಲ್ಲೂ ನಿಮ ಆಶೀರ್ವಾದ ಇರಬೇಕೆಂದು ಮನವಿ ಮಾಡಿದರು.

ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ನಾಮಕರಣ ಮಾಡಿದ್ದರಿಂದ ಜಮೀನಿನ ಬೆಲೆ ಏನಾಗಿದೆ ಎಂದು ಎಲ್ಲರಿಗೂ ಅರಿವಾಗಿದೆ. ನಾನು ಹೊಸದಾಗಿ ಏನನ್ನೂ ಮಾಡಿಲ್ಲ. ನಾವೆಲ್ಲಾ ಬೆಂಗಳೂರಿಗೆ ಸೇರಿದವರು. ಮೂಲವನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ ಎಂದರು.

ಮೊದಲು ಇದು ಬೆಂಗಳೂರು ನಗರ ಜಿಲ್ಲೆಯಾಗಿತ್ತು. ನಾನು ಬೆಂಗಳೂರು ಜಿಲ್ಲಾ ಸದಸ್ಯನಾಗಿದ್ದೆ. ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಯಿತು. ರಾಮನಗರ ಜಿಲ್ಲೆ ಎಂದು ಹೆಸರಿಸಲಾಗಿತ್ತು. ಈಗ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿದೆ. ಈ ಭಾಗದ ಅಭಿವೃದ್ಧಿಗೆ ಏನೆಲ್ಲಾ ಕೆಲಸಗಳಾಗಬೇಕೆಂಬ ಬಗ್ಗೆ ಪ್ರತ್ಯೇಕ ಸಭೆ ನಡೆಸಿ, ಚರ್ಚಿಸಲಾಗುವುದು. ಜನರ ಸಮಸ್ಯೆ ಆಲಿಸಲು ವಿಶೇಷ ಅಧಿಕಾರಿಯನ್ನು ನಿಯೋಜಿಸಲಾಗುವುದು ಎಂದರು.

ಯಾರೂ ವ್ಯವಸಾಯವನ್ನು ಬಿಡಬಾರದು, ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಲಾಗುತ್ತದೆ. ಸಿಲ್‌್ಕ-ಮಿಲ್‌್ಕ ಉತ್ಪಾದನೆಗೆ ಆದ್ಯತೆ ನೀಡಲಾಗುವುದು. ಇಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡುತ್ತೇನೆ.ಉದ್ಯಮ ಮತ್ತು ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು, ಸಂಘಟನೆ, ಪ್ರತಿಭಟನೆ ಮಾಡಿ ತೊಂದರೆ ಮಾಡಬೇಡಿ. ಕೈಗಾರಿಕೆಗಳು ಇಲ್ಲಿಯೇ ಇರಬೇಕು ಎಂದರು.

ಬೆಂಗಳೂರು ದಕ್ಷಿಣ ಹಾಗೂ ಗ್ರಾಮಾಂತರ ಜಿಲ್ಲೆಯ ಮಗನಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಕಷ್ಟ ಕಾಲದಲ್ಲಿ ಜಿಲ್ಲೆಯ ಜನರು ನನ್ನ ಜೊತೆಗಿದ್ದರು. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಾನು ನಂಬಿದ್ದೆ. ನಿಮೆಲ್ಲರ ಪ್ರಾರ್ಥನೆಯ ಫಲವಾಗಿ ನಾನಿಂದು ಉತ್ತಮ ಅವಕಾಶ ಪಡೆದಿದ್ದೇನೆ ಎಂದರು.

ತಮ ರಾಜಕೀಯ ಜೀವನದಲ್ಲಿ ಸಹಕರಿಸಿದವರನ್ನು ಸರಿಸಿಕೊಂಡ ಡಿ.ಕೆ.ಶಿವಕುಮಾರ್‌ ರಾಮನಗರದ ಶಾಸಕನಾಗಿ ಸ್ನೇಹಿತ ಇಕ್ಬಾಲ್‌ ಹುಸೇನ್‌ ಅವರನ್ನು
ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ನಾನು ಮುಖ್ಯಮಂತ್ರಿಯಾಗುವ ಕುರಿತಂತೆ ಗಳಿಗೆ, ಮುಹೂರ್ತ ಇಡಬೇಡ ಎಂದು ಹಲವು ಬಾರಿ ಇಕ್ಬಾಲ್‌ ಹುಸೇನ್‌ಗೆ ಹೇಳಿದ್ದೆ, ಮಾತು ಕಡಿಮೆ ಮಾಡು ಎಂದು ಎಷ್ಟು ಹೇಳಿದರೂ ಕೇಳಲಿಲ್ಲ. ಹೊಡೆಯುವುದೂ ಒಂದು ಬಿಟ್ಟು ಮಿಕ್ಕಿದೆಲ್ಲಾ ಮಾಡಿದ್ದೇನೆ. ಬಾಯಿ ಚಪಲ, ಆಸೆ, ಅಭಿಮಾನದಿಂದ ಮಾತನಾಡಿದ್ದಾರೆ. ನೋಟೀಸ್‌‍ ಕೂಡ ನೀಡಲಾಗಿತ್ತು ಎಂದು ಸರಿಸಿಕೊಂಡರು.

ರಾಮನಗರ ಮತ್ತು ಹಾರೋಹಳ್ಳಿಯಲ್ಲಿ ಎಲ್ಲರಿಗೂ ನಿವೇಶನ, ವಸತಿ ಕಲ್ಪಿಸಬೇಕು. ಇದಕ್ಕೆ ಬೇಕಾದ ಎಲ್ಲಾ ಅನುಕೂಲಗಳನ್ನು ಮಾಡಿಕೊಡುತ್ತೇನೆ. ಮೆಡಿಕಲ್‌ ಕಾಲೇಜು, ಆಸ್ಪತ್ರೆಗೆ ನಾನೇ ಶಂಕು ಸ್ಥಾಪನೆ ಮಾಡುತ್ತೇನೆ ಎಂದರು.

ಆಶ್ರಯ-ಆರೋಗ್ಯ, ಅಕ್ಷರಕ್ಕೆ ತಮ ಮೊದಲ ಆದ್ಯತೆ. ಜಿಲ್ಲೆಯ ಜನ ವಲಸೆ ಹೋಗುವುದನ್ನು ತಪ್ಪಿಸಲು ಇಲ್ಲಿಯೇ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತೇವೆ. ಈಗಾಗಲೇ ಅನೇಕ ಯೋಜನೆಗಳನ್ನು ತಯಾರು ಮಾಡಲಾಗಿದೆ ಎಂದು ಹೇಳಿದರು. ನಾನು ವಿಧಾನಸೌಧದಲ್ಲಿ ಕೂರಲು ಆಶೀರ್ವದಿಸಿದ ನಿಮ ಋಣವನ್ನು ಎಂದಿಗೂ ಮರೆಯುವುದಿಲ್ಲ ಎಂದರು.

RELATED ARTICLES

Latest News