Homeರಾಜ್ಯಐವರು ಕಾಂಗ್ರೆಸ್‌‍ ಸ್ಪರ್ಧೆಗಿಳ ಅಭ್ಯರ್ಥಿಗಳ ಸ್ಪರ್ಧೆ ಹಿನ್ನೆಲೆಯಲ್ಲಿ ಪರಿಷತ್‌ನ 7 ಸ್ಥಾನಗಳಿಗೆ ಮತದಾನ ಅನಿವಾರ್ಯ

ಐವರು ಕಾಂಗ್ರೆಸ್‌‍ ಸ್ಪರ್ಧೆಗಿಳ ಅಭ್ಯರ್ಥಿಗಳ ಸ್ಪರ್ಧೆ ಹಿನ್ನೆಲೆಯಲ್ಲಿ ಪರಿಷತ್‌ನ 7 ಸ್ಥಾನಗಳಿಗೆ ಮತದಾನ ಅನಿವಾರ್ಯ

Voting for 7 council seats is inevitable

ಬೆಂಗಳೂರು,ಜೂ.8- ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ನ 7 ಸದಸ್ಯ ಸ್ಥಾನಗಳಿಗೆ ಮತದಾನ ನಡೆಯುವುದು ಅನಿವಾರ್ಯವಾಗಲಿದೆ. ಐವರು ಅಭ್ಯರ್ಥಿಗಳನ್ನು ಕಾಂಗ್ರೆಸ್‌‍ ಸ್ಪರ್ಧೆಗಿಳಿಸಿರುವ ಹಿನ್ನೆಲೆಯಲ್ಲಿ ಜೆಡಿಎಸ್‌‍ ಮತ್ತು ಕಾಂಗ್ರೆಸ್‌‍ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಗಳು ಸ್ಪಷ್ಟವಾಗಿವೆ.

ಜೂ.18ರಂದು ಮೇಲನೆ ಚುನಾವಣೆಗೆ ಮತದಾನ ನಡೆಯುವುದು ಖಾತ್ರಿಯಾಗಲಿದೆ. ಆದರೆ ರಾಜ್ಯಸಭೆ ಚುನಾವಣೆಗೆ ಹೆಚ್ಚುವರಿ ಅಭ್ಯರ್ಥಿಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾಗುತ್ತಿದೆ. ವಿಧಾನಪರಿಷತ್‌ ಚುನಾವಣೆಯಲ್ಲಿ ಗೌಪ್ಯ ಮತದಾನ ನಡೆಯುವುದರಿಂದ ಅಡ್ಡ ಮತದಾನ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಜೆಡಿಎಸ್‌‍ ಮತ್ತು ಕಾಂಗ್ರೆಸ್‌‍ ನಡುವೆ ಒಂದು ಸ್ಥಾನದ ಗೆಲುವಿಗಾಗಿ ತೀವ್ರ ಪೈಪೋಟಿ ಉಂಟಾಗುವುದರಿಂದ ಶಾಸಕರಿಗೆ ಭಾರೀ ಬೇಡಿಕೆ ಉಂಟಾಗಲಿದೆ. ಒಂದು ವೇಳೆ ರಾಜ್ಯಸಭೆ ಚುನಾವಣೆಯಂತೆ ಕಾಂಗ್ರೆಸ್‌‍ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ಮೂರು ಪಕ್ಷಗಳ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು.

ಮತದಾನ ಅನಿವಾರ್ಯವಾಗಿರುವುದರಿಂದ ಮೂರೂ ಪಕ್ಷಗಳಲ್ಲಿ ತಮ ತಮ ಅಭ್ಯರ್ಥಿಗಳ ಗೆಲುವಿಗೆ ಚುನಾವಣಾ ತಂತ್ರಗಾರಿಕೆಗಳು ರೂಪಿಸಲಾಗುತ್ತದೆ. ಜೊತೆಗೆ ತಮ ಶಾಸಕರ ಮತಗಳು ಬೇರೆ ಪಕ್ಷದ ಅಭ್ಯರ್ಥಿಗಳಿಗೆ ದೊರೆಯಂತೆ ಮಾಡಲು ವಿಪ್‌ ನೀಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ.

ವಿಧಾನಸಭೆಯಲ್ಲಿ ಕಾಂಗ್ರೆಸ್‌‍ ಹೊಂದಿರುವ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ 4 ಸ್ಥಾನ ಹಾಗೂ ಬಿಜೆಪಿ ಹೊಂದಿರುವ ಶಾಸಕರ ಸಂಖ್ಯಾ ಬಲದ ಆಧಾರದ ಮೇಲೆ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ.

ಆದರೆ ಜೆಡಿಎಸ್‌‍ 18 ಶಾಸಕರನ್ನು ಹೊಂದಿರುವುದರಿಂದ ಸುಲಭವಾಗಿ ಗೆಲ್ಲಲು ಸಾಧ್ಯವಾಗುವುದಿಲ್ಲ. ಬಿಜೆಪಿಯ ಹೆಚ್ಚುವರಿ ಮತಗಳನ್ನು ಪಡೆದರೂ ಗೆಲುವಿನ ದಡ ಸೇರುವುದು ಕಷ್ಟವಾಗಲಿದೆ. ಆದರೆ ಕಾಂಗ್ರೆಸ್‌‍ ಕೂಡ 5ನೇ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಿದೆ. ಈ ಅಭ್ಯರ್ಥಿಯ ಗೆಲುವು ಸುಲಭವಲ್ಲ. ಹೀಗಾಗಿ ಕಾಂಗ್ರೆಸ್‌‍ ಮತ್ತು ಜೆಡಿಎಸ್‌‍ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ಏರ್ಪಡುವ ಸಾಧ್ಯತೆಗಳು ಗೋಚರಿಸುತ್ತಿವೆ.

ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು , ಜೂ.11ರಂದು ನಾಮಪತ್ರ ವಾಪಸ್‌‍ ಪಡೆಯಲು ಕಡೆಯ ದಿನವಾಗಿದ್ದು ಅಂದು ಅಂತಿಮ ಕಣದಲ್ಲಿ ಉಳಿಯುವ ಅಭ್ಯರ್ಥಿಗಳನ್ನು ಪ್ರಕಟಿಸಲಾಗುತ್ತದೆ. ಕಾಂಗ್ರೆಸ್‌‍ನ 5ನೇ ಅಭ್ಯರ್ಥಿ ಉಮೇದುವಾರಿಕೆ ಹಿಂಪಡೆಯದಿದ್ದರೆ ಜೂ.18ರಂದು ಮತದಾನ ನಡೆದು ಅಂದು ಸಂಜೆ ಲಿತಾಂಶ ಪ್ರಕಟವಾಗಲಿದೆ.

ಕಾಂಗ್ರೆಸ್‌‍ ಅಭ್ಯರ್ಥಿಗಳಾಗಿ ತಿಪ್ಪಣ್ಣಪ್ಪ ಕನಕನೂರು, ಪಿ.ವಿ.ಮೋಹನ್‌, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌, ಶಿವಣ್ಣ.ಬಿ.ಎಸ್‌‍ ಹಾಗೂ ವಿನಯ್‌ ಕಾರ್ತಿಕ್‌ ಉಮೇದುವಾರಿಕೆ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾದ ಲಿಂಗರಾಜ್‌ ಪಾಟೀಲ್‌, ರಘು ಕೌಟಿಲ್ಯ ಹಾಗೂ ಜೆಡಿಎಸ್‌‍ ಅಭ್ಯರ್ಥಿ ಗೋವಿಂದ ರಾಜ್‌ ಅವರು ಚುನಾವಣಾ ಸ್ಪರ್ಧೆಗಿಳಿದಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಇಂದು ಕಾಂಗ್ರೆಸ್‌‍ ಅಭ್ಯರ್ಥಿ ವಿನಯ್‌ ಕಾರ್ತಿಕ್‌, ಬಿಜೆಪಿ ಅಭ್ಯರ್ಥಿಗಳಾದ ಲಿಂಗರಾಜ್‌ ಪಾಟೀಲ್‌, ರಘು ಕೌಟಿಲ್ಯ ಹಾಗೂ ಜೆಡಿಎಸ್‌‍ ಅಭ್ಯರ್ಥಿ ಗೋವಿಂದ ರಾಜ್‌ ಅವರು ಇಂದು ತಮ ಉಮೇದುವಾರಿಕೆಯನ್ನು ಸಲ್ಲಿಸಿದರು.

ವಿಧಾನ ಪರಿಷತ್‌ ಸದಸ್ಯರಾದ ಗೋವಿಂದರಾಜು, ನಸೀರ್‌ ಅಹದ್‌, ಎಂ.ಟಿ.ಬಿ.ನಾಗರಾಜು, ಪ್ರತಾಪಸಿಂಹ ನಾಯಕ್‌ ಕೆ., ತಿಪ್ಪಣ್ಣಪ್ಪ, ಸುನೀಲ್‌ ವಲ್ಯಾಪುರ್‌, ಬಿ.ಕೆ.ಹರಿಪ್ರಸಾದ್‌ ಅವರು ಜೂ.30ರಂದು ನಿವೃತ್ತಿಯಾಗಲಿದ್ದಾರೆ. ಇವರ ನಿವೃತ್ತಿಯಿಂದ ತೆರವಾಗುವ ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ ಸದಸ್ಯ ಸ್ಥಾನಗಳ ಆಯ್ಕೆಗೆ ಭಾರತದ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.

RELATED ARTICLES

Latest News